More

    ಕಾರಿದ್ದ ವರ ಮದುವೆಗೆ ಬಂದಿದ್ದು ಟ್ರ್ಯಾಕ್ಟರ್​ನಲ್ಲಿ! ಬೆಂಬಲವೆಂದರೆ ಹೀಗಿರಬೇಕೆಂದ ನೆಟ್ಟಿಗರು

    ಚಂಡೀಗಢ: ಸಾಮಾನ್ಯವಾಗಿ ಮದುವೆಗೆ ವಧು ಮತ್ತು ವರ ಕಾರಲ್ಲಿ ಬರ್ತಾರೆ. ಆದರೆ ಇಲ್ಲೊಬ್ಬ ವರ ಮಾತ್ರ ಟ್ರ್ಯಾಕ್ಟರ್​ನಲ್ಲಿ ಬಂದಿದ್ದಾನೆ. ಹಾಗೆಂದ ಮಾತ್ರಕ್ಕೆ ಇವನ ಬಳಿ ಕಾರಿಲ್ಲ ಎಂದೇನಲ್ಲ. ಕಾರಿದ್ದರೂ ಟ್ರ್ಯಾಕ್ಟರ್​ನಲ್ಲೇ ಮದುವೆಯ ಸ್ಥಳಕ್ಕೆ ಬಂದ ಈ ವರನ ನಿರ್ಧಾರದ ಹಿಂದೆ ಒಂದು ಉತ್ತಮ ಸಂದೇಶವಿದೆ.

    ಇದನ್ನೂ ಓದಿ: ಗ್ಲೋಬಲ್​ ಟೀಚರ್​ನ್ನೇ ಎಂಎಲ್​ಸಿ ಮಾಡ್ತಾರಂತೆ ಬಿಜೆಪಿಯವರು! ರಾಜ್ಯಪಾಲರ ಜತೆ ನಾವು ಮಾತಾಡ್ತೇವೆ ಎಂದ ನಾಯಕ

    ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರು ಹೋರಾಟ ನಡೆಸುತ್ತಿದ್ದಾರೆ. ಕೇವಲ ದೆಹಲಿ ಮಾತ್ರವಲ್ಲದೆ ದೇಶದ ಹಲವು ರಾಜ್ಯಗಳಲ್ಲಿ ಹೋರಾಟನಿರತ ರೈತರಿಗೆ ಬೆಂಬಲ ಸಿಗುತ್ತಿದೆ. ಈ ವರ ಮಾಡಿದ್ದೂ ಕೂಡ ಅದನ್ನೇ. ಹರಿಯತಾಣ ಮೂಲದ ವರ ಕರ್ನಾಲ್​, ತನ್ನ ಮದುವೆಗೆ ಕಾರಿನ ಬದಲು ಟ್ರ್ಯಾಕ್ಟರ್​ನಲ್ಲಿ ತೆರಳಿ ಬೆಂಬಲ ಸೂಚಿಸಿದ್ದಾನೆ. ನಾವು ಓದಿ, ಕೆಲಸ ತೆಗೆದುಕೊಂಡು ನಗರ ಸೇರಬಹುದು. ಆದರೆ ನಮ್ಮ ಮೂಲ ರೈತರೇ. ಅದನ್ನು ನಾವು ಮರೆಯಬಾರದು ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: ‘ಗಂಡಿನ ಬದಲು ಹೆಣ್ಣಾಗಿದೆ, ತಿಂಗ್ಳಿಗೆ 30 ಸಾವಿರ ಕೊಡಿ’; ವಿಚಿತ್ರ ಬೇಡಿಕೆ ಇಟ್ಟ ಅಳಿಯನಿಗೆ ಅತ್ತೆ ಮಾವನಿಂದ ಪಾಠ

    ಕೇವಲ ವರ ಮಾತ್ರವಲ್ಲದೆ ವರನ ಪೂರ್ತಿ ಕುಟುಂಬವೇ ರೈತರ ಪರ ನಿಂತಿದೆ. ಮಗನ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕೆಂದುಕೊಂಡಿದ್ದೆವು. ಆದರೆ ಈಗ ಅತ್ಯಂತ ಸರಳವಾಗಿ ಮದುವೆ ಮಾಡಿದ್ದೇವೆ. ಉಳಿದ ಹಣವನ್ನು ರೈತರ ಹೋರಾಟಕ್ಕಾಗಿ ನೀಡುತ್ತೇವೆ ಎಂದಿದ್ದಾರೆ ವರನ ತಾಯಿ.

    ವರ ಈ ರೀತಿ ಟ್ರ್ಯಾಕ್ಟರ್​ನಲ್ಲಿ ಮದುವೆಗೆ ಬಂದಿರುವ ಫೋಟೋಗಳು ಟ್ವಿಟ್ಟರ್​ನಲ್ಲಿ ಹರಿದಾಡಿದ್ದು ಆತನ ರೈತ ಪ್ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. (ಏಜೆನ್ಸೀಸ್​)

    ಮದುವೆ ಮಂಟಪದಿಂದ ಎದ್ದು ಹೋದ ವಧು! ವಾಪಾಸು ಬರುವಷ್ಟರಲ್ಲಿ ಪೂರ್ತಿ ಕುಟುಂಬವೇ ಹೆಮ್ಮೆ ಪಡುತ್ತಿತ್ತು!

    ಐದು ವರ್ಷದ ಮಗನ ಎದುರೇ ಹೋಯಿತು ಅಮ್ಮ, ಅಕ್ಕನ ಪ್ರಾಣ! ಕೊಲೆ ಮಾಡಿದ್ದು ಯಾರು ಎಂದು ಗೊತ್ತಾದರೆ ಬೆಚ್ಚಿ ಬೀಳುತ್ತೀರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts