PHOTO VIRAL | ಸಿಂಹದೊಂದಿಗೆ ತಟ್ಟೆ ಹಂಚಿಕೊಂಡು ಊಟ ಮಾಡುವ ಗಟ್ಟಿಗಿತ್ತಿ!

lion dinner
Published on

ನವದೆಹಲಿ: ಅಂತರ್ಜಾಲದಲ್ಲಿ ಅನೇಕ ವಿಡಿಯೋಗಳು ನಮ್ಮನ್ನು ಆಶ್ಚರ್ಯಕ್ಕೆ ತಳ್ಳಬಹುದು. ಕೆಲವು ವಿಡಿಯೋಗಳು ಭಯಾನಕವಾಗಿದ್ದರೂ ವೀಕ್ಷಿಸಲು ವಿನೋದಮಯವಾಗಿ ಇರಬಹುದು. ಪ್ರಾಣಿಗಳ ಜತೆ ಮನುಷ್ಯರು ಇರುವ ಕೆಲ ವಿಡಿಯೋಗಳು ಕೆಲವು ಸೆಕೆಂಡುಗಳ ಕಾಲ ಜನರನ್ನು ನೆಟ್ಟಗೆ ಕುಳಿತುಕೊಳ್ಳುವಂತೆ ಮಾಡುತ್ತವೆ. ಸಾಮಾನ್ಯ ನಾಯಿ ಮತ್ತು ಬೆಕ್ಕಿನಂತಹ ಪ್ರಾಣಿಗಳೊಂದಿಗೆ ತೆಗೆದ ವಿಡಿಯೋಗಳು ಎಲ್ಲರನ್ನೂ ಮನೋರಂಜಿಸುತ್ತವೆ. ಈ ವಿಡಿಯೋದಲ್ಲಿ ಮಾತ್ರ ಈ ಗಟ್ಟಿಗಿತ್ತಿ ಸಿಂಹದೊಂದಿಗೆ ತಟ್ಟೆ ಹಂಚಿಕೊಂಡು ಊಟ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಈ ವಿಡಿಯೋವನ್ನು ರಾಕ್ ಮೃಗಾಲಯದ ಇನ್​ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ಅದೇ ತಟ್ಟೆಯಲ್ಲಿ ಮಹಿಳೆ ಮತ್ತು ಸಿಂಹ ತುಂಬಾ ಸಂತೋಷದ ಆಹಾರವನ್ನು ಸೇವಿಸುತ್ತಿರುವುದು ತೋರಿಸಲಾಗಿದೆ. ಅಲ್ಲದೆ, ಇಬ್ಬರು ನೆಲದ ಪಕ್ಕದಲ್ಲಿ ಕುಳಿತು ತಿನ್ನುತ್ತಾರೆ. ಸಿಂಹವು ತನ್ನ ಪಾಲಿನ ಮಾಂಸದ ತುಂಡನ್ನು ಪಕ್ಕಾ ಕಾಡು ಪ್ರಾಣಿಯಂತೆ ಭಯಾನಕ ಶೈಲಿಯಲ್ಲಿ ತಿನ್ನುತ್ತದೆ. ಈ ಮಹಿಳೆಯೂ, ಸಿಂಹದೊಂದಿಗೆ ಕುಳಿತು, ಖುಷಿಖುಷಿಯಾಗಿ ಹುರಿದ ಮಾಂಸವನ್ನು ತಿನ್ನುತ್ತಿದ್ದಾರೆ.

ಆ ವಿಡಿಯೋಕ್ಕಾಗಿ ಮೃಗಾಲಯದವರು ಕ್ಯಾಪ್ಶನ್ ಒಂದನ್ನು ಕೂಡ ನೀಡಿದ್ದು,
"ಇದನ್ನು ರಾಕ್ ಮೃಗಾಲಯದಲ್ಲಿ ಹೊರತುಪಡಿಸಿ ಬೇರೆಲ್ಲಿಯೂ ಮಾಡಲು ಸಾಧ್ಯವಿಲ್ಲ" ಎಂದು ಉಲ್ಲೇಖಿಸಿದ್ದಾರೆ.

ಈ ವೈರೆಲ್ ವಿಡಿಯೋವನ್ನು ಜುಲೈ 4 ರಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು ಇಲ್ಲಿಯವರೆಗೆ, 4 ದಶಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ನೋಡಿದ್ದಾರೆ. ಈ ವಿಡಿಯೋಗಾಗಿ ಅನೇಕ ಜನರು ಲೈಕ್ಸ್ ಮತ್ತು ಕಾಮೆಂಟ್ಸ್ ಮಾಡುತ್ತಿದ್ದಾರೆ. ಈ ವಿಡಿಯೋದಿಂದ ಅನೇಕರು ಆಶ್ಚರ್ಯಕ್ಕೆ ಒಳಗಾಗಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net