ಜೈಪುರ: 2023ರಲ್ಲಿ ದೇಶವ್ಯಾಪಿ ಸಖತ್ ಸೌಂಡ್ ಮಾಡಿದ್ದ ಜ್ಯೋತಿ ಮೌರ್ಯ ಪ್ರಕರಣ ಯಾರಿಗೆ ತಾನೆ ನೆನಪಿಲ್ಲ ಹೇಳಿ, ಸರ್ಕಾರಿ ಕೆಲಸ ಸಿಕ್ಕ ತಕ್ಷಣ ಕಷ್ಟಪಟ್ಟು ಓದಿಸಿದ ಗಂಡನನ್ನು ಬಿಟ್ಟು ಉನ್ನತ ಅಧಿಕಾರಿಯನ್ನು ಮದುವೆಯಾಗುವ ಮೂಲಕ ಜ್ಯೋತಿ ಎಂಬುವವರು ಸಖತ್ ಸೌಂಡ್ ಮಾಡಿದ್ದರು. ಇದೀಗ ಅಂತಹದ್ದೆ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದ್ದು, ತನ್ನ ಪತ್ನಿಯ ಕೆಲಸಕ್ಕೆ ಪತಿ ಭರ್ಜರಿ ಶಾಕ್ ನೀಡಿದ್ದು, ಸಿಬಿಐ (CBI) ತನಿಖೆಗೆ ಆದೇಶಿಸಲಾಗಿದೆ.
ರಾಜಸ್ಥಾನದ ಕೋಟಾದಲ್ಲಿ ಈ ಘಟನೆ ನಡೆದಿದ್ದು, ಸರ್ಕಾರಿ ಉದ್ಯೋಗ ಸಿಕ್ಕ ಕೂಡಲೇ ಮಹಿಳೆ ತನ್ನ ಪತಿಯನ್ನು ಬಿಟ್ಟಿದ್ದು, ಇದರಿಂದ ಸಿಟ್ಟಿಗೆದ್ದ ಪತಿ ಪತ್ನಿ ಪಡೆದಿದ್ದ ಸರ್ಕಾರಿ ಕೆಲಸವನ್ನು ಕಳೆದುಕೊಳ್ಳುವಂತೆ ಮಾಡಿದ್ದು, ಸಿಬಿಐ (CBI) ತನಿಖೆಗೆ ಆದೇಶಿಸುವಂತೆ ಮಾಡಿದ್ದಾನೆ. ಸದ್ಯ ಈ ಪ್ರಕರಣ ಎಲ್ಲರ ಗಮನ ಸೆಳೆಯುತ್ತಿದ್ದು, ಅನೇಕರು ಪತಿಯ ನಡೆಯನ್ನು ಹಾಡಿ ಹೊಗಳುತ್ತಿದ್ದಾರೆ.
ರಾಜಸ್ಥಾನದ ಕೋಟಾ ಮೂಲದ ಮನೀಷ್ ಮೀನಾ ಮತ್ತು ಸಪ್ನಾ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದರು. ತನಗಿಂತ ಚಿಕ್ಕವಯಸ್ಸಿನ ಪತ್ನಿ ಓದುವ ಹಂಬಲ ವ್ಯಕ್ತಪಡಿಸಿದಾಗ ಪತಿಯು ತನ್ನ ಶಕ್ತಿಮೀರಿ ಆಕೆಯನ್ನು ಕಾಲೇಜಿಗೆ ಕಳಿಸಿ ಓದಿಸುತ್ತಾನೆ. ತನ್ನ ಮನೆ ಬಳಿ ಇದ್ದ ಮನೆ ಹಾಗೂ ಜಮೀನಿನ ಮೇಲೆ ಸಾಲ ಪಡೆಯುವ ಮನೀಷ್ ಪತ್ನಿಗೆ ಕೇಂದ್ರ ಸರ್ಕಾರಿ ನೌಕರಿ ಉತ್ತೀರ್ಣ ಮಾಡಿಸುವಲ್ಲಿ ಯಶಸ್ವಿಯಾಗುತ್ತಾನೆ.
ತನ್ನ ಪತ್ನಿ ರೈಲ್ವೆಯಲ್ಲಿ ಕೆಲಸ ಪಡೆಯುತ್ತಿದ್ದಂತೆ ಆಕೆಯ ಓದಿಗಾಗಿ ತಾನು ಮಾಡಿದ ಸಾಲವನ್ನು ತೀರಿಸುತ್ತಾಳೆ ಎಂಬ ಬಯಕೆಯೊಂದಿಗೆ ಕಾಯುತ್ತಿರುವಾಗಲೇ ದೊಡ್ಡ ಶಾಕ್ ಒಂದು ಎದುರಾಗುತ್ತದೆ. ಕೆಲಸ ಸಿಕ್ಕ ಬಳಿಕ ಪತಿಯನ್ನು ಕೀಳಾಗಿ ಕಾಣಲು ಆರಂಭಿಸಿದ ಸಪ್ನಾ ಆ ಬಳಿಕ ಮುಂದೊಂದು ದಿನ ಆತನ ಜೊತೆ ಜಗಳವಾಡಿ ಮನೆ ಬಿಟ್ಟು ಹೋಗಿದ್ದಾಳೆ. ಎಷ್ಟೇ ತಿಳಿ ಹೇಳಿದರೂ ಆಕೆ ಮನೆಗೆ ಬಾರದಿದ್ದಾಗ ಕೋಪಗೊಂಡ ಮನೀಷ್, ತನ್ನ ಪತ್ನಿ ಪ್ರತಿಭೆಯಿಂದ ಕೆಲಸ ಪಡೆದಿಲ್ಲ ಎಂದು ಆರೋಪಿಸಿ ತನ್ನ ಬಳಿ ಇದ್ದ ಸಾಕ್ಷಿಯ ಸಮೇತ ದೂರು ದಾಖಲಿಸಿದ.
ತನ್ನ ಪತ್ನಿ ಸ್ವಪ್ನ ಡಮ್ಮಿ ಅಭ್ಯರ್ಥಿಯ ಸಹಾಯದಿಂದ ರೈಲ್ವೆ ಇಲಾಖೆಯ ಪರೀಕ್ಷೆಯನ್ನು ಬರೆದಿದ್ದು, ಇದರ ಬಗೆಗಿನ ಸಾಕ್ಷಿಯನ್ನು ದಾಖಲೆ ಸಮೇತ ಅಧಿಕಾರಿಗಳಿಗೆ ಸಲ್ಲಿಸಿದ್ದಾನೆ. ಈ ವಿಷಯ ಬೆಳಕಿಗೆ ಬಂದ ನಂತರ ಅಧಿಕಾರಿಗಳು ಸಪ್ನಾ ಅವರನ್ನು ಅಮಾನತುಗೊಳಿಸಿದ್ದಾರೆ. ಅಲ್ಲದೇ ಆಕೆ ಮಾತ್ರವಲ್ಲದೇ ಅಂದು ಪರೀಕ್ಷೆ ಬರೆದ ಅಷ್ಟೂ ಅಭ್ಯರ್ಥಿಗಳ ವಿರುದ್ಧ ತನಿಖೆಗೆ ಮುಂದಾಗಿದ್ದು, ಈ ಸಂಬಂಧ ಸಿಬಿಐ (CBI) ತನಿಖೆಗೆ ಆದೇಶಿಸಲಾಗಿದೆ. ಸದ್ಯ ತನಿಖೆ ನಡೆಯುತ್ತಿದ್ದು, ಆರೋಪಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಆಂಗ್ಲರ ಬೆಂಡೆತ್ತಿದ್ದ Team India ಬ್ಯಾಟರ್ಸ್; ಪ್ರವಾಸಿ ತಂಡಕ್ಕೆ 357 ರನ್ಗಳ ಗುರಿ ನೀಡಿದ ಆತಿಥೇಯರು