ಮೊಸಳೆಯ ದವಡೆಯಿಂದ ಗಂಡನ ರಕ್ಷಣೆ: ಪತಿಯ ಪ್ರಾಣಕ್ಕಿಂತ ಯಾವುದೂ ಮುಖ್ಯವಲ್ಲ ಎಂದ ಪತ್ನಿ

Rajasthan Woman
Published on

ಜೈಪುರ: ದಿಟ್ಟ ಮಹಿಳೆಯೊಬ್ಬಳು ಮೊಸಳೆ ದಾಳಿಯಿಂದ ತನ್ನ ಗಂಡನನ್ನು ರಕ್ಷಣೆ ಮಾಡಿರುವ ಘಟನೆ ರಾಜಸ್ಥಾನದ ಕರೌಲಿ ಜಿಲ್ಲೆಯ ಕಿಮ್​ಕಾಚ್​ ಗ್ರಾಮದಲ್ಲಿ ನಡೆದಿದೆ.

ಹೊಂಚು ಹಾಕಿ ದಾಳಿ

26 ವರ್ಷದ ಬನ್ನೇ ಸಿಂಗ್ ಕುರಿಗಾಹಿಯಾಗಿದ್ದು, ತನ್ನ ಕುರಿಗಳಿಗೆ ನೀರು ಕುಡಿಸಲು ಚಂಬಲ್​ ನದಿಗೆ​ ಹೋಗಿದ್ದ. ಈ ವೇಳೆ ಮೊಸಳೆಯೊಂದು ಹೊಂಚು ಹಾಕಿ ಅವನ ಕಾಲನ್ನು ಹಿಡಿದುಕೊಂಡಿತು. ಸಮೀಪದಲ್ಲೇ ನಿಂತಿದ್ದ ಅವರ ಪತ್ನಿ ವಿಮಲ್ ಬಾಯಿ ತಕ್ಷಣ ಕಾರ್ಯಪ್ರವೃತ್ತರಾದರು.

ಕಣ್ಣಿಗೆ ತಿವಿದು ರಕ್ಷಣೆ

ಕೇವಲ ಕೋಲಿನಿಂದ ಮೊಸಳೆ ಮೇಲೆ ಹಲ್ಲೆ ಮಾಡಿ ಗಂಡನ ಕಾಲನ್ನು ಮೊಸಳೆಯ ದವಡೆಯಿಂದ ಬಿಡಿಸಿದ್ದಾಳೆ. ಅದಕ್ಕೂ ಮುನ್ನ ಮೊಸಳೆ ಪತಿಯನ್ನು ನೀರಿನಲ್ಲಿ ಆಳವಾಗಿ ಎಳೆಯಲು ಪ್ರಾರಂಭಿಸಿದಾಗ, ವಿಮಲ್ ಬಾಯಿ ಅದರ ಕಣ್ಣಿಗೆ ಕೋಲನ್ನು ತಿವಿದು, ಅಂತಿಮವಾಗಿ ಗಂಡನನ್ನು ರಕ್ಷಣೆ ಮಾಡಿದ್ದಾಳೆ.

ಧೈರ್ಯಕ್ಕೆ ಧನ್ಯವಾದ

ಬನ್ನೆ ಸಿಂಗ್ ತನ್ನ ಹೆಂಡತಿಯ ಧೈರ್ಯಕ್ಕೆ ಧನ್ಯವಾದ ತಿಳಿಸಿದ್ದಾನೆ. 15 ನಿಮಿಷಗಳ ಅಗ್ನಿಪರೀಕ್ಷೆಯಲ್ಲಿ ವಿಮಲ್ ಬಾಯಿ, ತನ್ನ ತ್ವರಿತ ಆಲೋಚನೆ ಮತ್ತು ಧೈರ್ಯದಿಂದ ತನ್ನ ಪತಿಯ ಜೀವವನ್ನು ಉಳಿಸಿಕೊಂಡಿದ್ದಾಳೆ. ನನ್ನ ಗಂಡನ ಪ್ರಾಣಕ್ಕಿಂತ ಬೇರೆ ಯಾವುದೂ ಮುಖ್ಯವಲ್ಲ ಮತ್ತು ಅವನನ್ನು ಉಳಿಸಲು ತನ್ನ ಪ್ರಾಣವನ್ನು ಬೇಕಾದರೂ ಕೊಡುತ್ತಿದ್ದೆ ಎಂದು ವಿಮಲ ಭಾಯಿ ಹೇಳಿದ್ದಾಳೆ.

ಮಾಧ್ಯಮದ ಜತೆ ವಿಮಲ ಭಾಯಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಆಕೆಯನ್ನು ಪ್ರಶಂಶಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net