ಅಂದುಕೊಂಡಿದ್ದನ್ನು ಮಾಡುತ್ತೇನೆ ಅಂತ ಬೆತ್ತಲೆ ಫೋಟೋ ಶೇರ್​ ಮಾಡಿದ ಜೇಮ್ಸ್​ ಬಾಂಡ್​ ನಟಿ!

Halle Berry
Published on

ನವದೆಹಲಿ: ಹಾಲೆ ಬೆರ್ರಿ ಹಾಲಿವುಡ್​ನ ಖ್ಯಾರ ನಟಿ. ಸೂಪರ್ ಹೀರೋ ಚಿತ್ರ ಕ್ಯಾಟ್ ವುಮನ್ ಮತ್ತು ಜೇಮ್ಸ್ ಬಾಂಡ್ ಸರಣಿಯ ಡೈ ಅನದರ್ ಡೇ ಚಿತ್ರದಲ್ಲಿ ತಮ್ಮ ಬೋಲ್ಡ್​ ಪಾತ್ರಗಳಿಂದಲೇ ಹೆಸರುವಾಸಿಯಾಗಿದ್ದಾರೆ. 2002ರಲ್ಲಿ ಉತ್ತಮ ನಟನೆಗಾಗಿ ಆಸ್ಕರ್​ ಪ್ರಶಸ್ತಿ ಸಹ ಗೆದ್ದಿದ್ದಾರೆ. ಇದೀಗ ಹಾಲೆ ಬೆರ್ರಿ ಅವರು ಟ್ವಿಟರ್​ನಲ್ಲಿ ಶೇರ್​ ಮಾಡಿರುವ ತಮ್ಮ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಅಂದುಕೊಂಡಿದ್ದನ್ನು ಮಾಡುತ್ತೇನೆ ಬಾಲ್ಕನಿಯಲ್ಲಿ ಬೆತ್ತಲೆಯಾಗಿ ನಿಂತು ವೈನ್​ ಕುಡಿಯುತ್ತಿರುವ ಫೋಟೋವನ್ನು 56 ವರ್ಷದ ಹಾಲೆ ಬೆರ್ರಿ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. "ನಾನು ಏನು ಮಾಡಬೇಕು ಅಂದುಕೊಳ್ಳುತ್ತೇನೆ ಅದನ್ನು ಮಾಡುತ್ತೇನೆ" ಎಂದು ಶೀರ್ಷಿಕೆಯನ್ನು ನೀಡಿದ್ದಾರೆ.

ಹಾಲೆ ಬೆರ್ರಿ ಅವರ ಫೋಟೋಗೆ ಅಭಿಮಾನಿಗಳು ಮತ್ತು ಸಹೋದ್ಯೋಗಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಾಲಿವುಡ್ ಸೆಲೆಬ್ರಿಟಿಗಳು ಸೇರಿದಂತೆ ಹಲವರು ಅವರನ್ನು ಹೊಗಳಿದ್ದಾರೆ. ಅದೇ ರೀತಿ ಕೆಲವರು ಅಸಮಾಧಾನವನ್ನು ಹೊರಹಾಕಿದ್ದಾರೆ. ಸಮಾಜದಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವ ನೀವು ಸರಿಯಾಗಿ ನಡೆದುಕೊಳ್ಳಬೇಕು ಎಂದು ತಿಳಿಹೇಳಿದ್ದಾರೆ.

ಇದೇ ಮೊದಲೇನಲ್ಲ

ಹಾಲೆ ಬೆರ್ರಿ ಅವರು ಈ ಹಿಂದೆಯೂ ತಮ್ಮ ನಗ್ನ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, 'ಮೂನ್‌ಫಾಲ್‌' ಹೆಸರಿನ ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿತ್ತು. ಮುಂಬರುವ 'ದಿ ಮದರ್‌ಶಿಪ್' ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net