

ಗದಗ: ರೈಲ್ವೇ ಹಳಿಯಲ್ಲಿ ಅದೂ ಚಲಿಸುತ್ತಿದ್ದ ರೈಲಿನಡಿ ಸಿಲುಕಿಯೂ ಸಾವಿನ ದವಡೆಯಿಂದ ಮಹಿಳೆಯೊಬ್ಬರು ಪಾರಾದ ಪ್ರಕರಣ ನಡೆದಿದೆ. ಗದಗ ಜಿಲ್ಲೆಯಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ. ಬೆಟಗೇರಿ ಅಂಡರ್ಬ್ರಿಡ್ಜ್ನಿಂದ ಸ್ವಲ್ಪ ದೂರದಲ್ಲಿ ಈ ಅವಘಡ ಸಂಭವಿಸಿದೆ.
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಗಿರಿಜಾ ಎಂಬಾಕೆಯೇ ಸಾವಿನ ದವಡೆಯಿಂದ ಆಶ್ಚರ್ಯಕರ ರೀತಿಯಲ್ಲಿ ಪಾರಾದ ಮಹಿಳೆ. ರೈಲ್ವೇ ಹಳಿಯಲ್ಲಿ ಸಿಲುಕಿಕೊಂಡಿದ್ದ ಈಕೆಯನ್ನು ಕೊನೆಗೂ ರಕ್ಷಿಸಲಾಗಿದೆ.
ಈಕೆಯ ತಲೆಗೆ ಬಲವಾಗಿ ಪೆಟ್ಟು ಬಿದ್ದು ಅರೆ ಪ್ರಜ್ಞಾವಸ್ಥೆಯಲ್ಲಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರೈಲ್ವೇ ಪೊಲೀಸರು ಕೂಡಲೇ ಈಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಗದಗ ರೈಲ್ವೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.