ಫ್ರಾನ್ಸ್: ಎರಡು ದಿನಗಳ ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಗುರುವಾರ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ತಮ್ಮ ಭಾಷಣದಲ್ಲಿ ವಿದ್ಯಾರ್ಥಿ ವೀಸಾ ಹಾಗೂ ಫ್ರಾನ್ಸ್ ಜೊತೆಗಿನ ತಮ್ಮ ಸಂಬಂಧ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಪ್ರಧಾನಿ ಮೋದಿಯನ್ನು ಹತ್ತಿರದಿಂದ ನೋಡಿದ ಮಹಿಳೆಯೊಬ್ಬರು ತಮ್ಮ ಅನುಭವವನ್ನು ಹಂಚಿಕೊಳ್ಳುವ ವೇಳೆ ಭಾವುಕರಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಐಸಿಸಿ ಟೂರ್ನಿಗಳಲ್ಲಿ ಭಾಗವಹಿಸುವ ಪುರುಷ-ಮಹಿಳಾ ತಂಡಕ್ಕೆ ಸಮಾನ ಬಹುಮಾನ
ಈ ಕುರಿತು ಮಾತನಾಡಿರುವ ಮಹಿಳೆ ಪ್ರಧಾನಿ ಮೋದಿ ಅವರು ತಮ್ಮ ಅಂತರಾಳದ ಮಾತುಗಳನ್ನು ಆಡಿದ್ದಾರೆ. ಇದೊಂದು ಅದ್ಭುತ ಭಾಷಣವಾಗಿದ್ದು, ಅವರ ಮುಖ ಚಹರೆ ತಮ್ಮನ್ನು ಹೆಚ್ಚಾಗಿ ಆಕರ್ಷಿಸಿತ್ತು. ಪ್ರಧಾನಿ ಮೋದಿಯವರ ಭಾಷಣ ಕೇಳಿ ನನಗೆ ತುಂಬಾ ಸಂತೋಷವಾಯಿತು ಎಂದು ಭಾವುಕರಾಗಿದ್ದಾರೆ.
ಎರಡು ದಿನಗಳ ಫ್ರಾನ್ಸ್ ಪ್ರವಾಸದಲ್ಲಿರುವ ನರೇಂದ್ರ ಮೋದಿ ಅಧ್ಯಕ್ಷ ಮ್ಯಾಕ್ರನ್ ಜತೆ ದ್ವಿಪಕ್ಷೀಯ ಸಭೆ ನಡೆಸಿದ್ದು, ರಫೇಲ್, ಸಬ್ಮರೀನ್ ಸೇರಿದಂತೆ ಹಲವು ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.