ನವದೆಹಲಿ: ಐಸಿಸಿ ಆಯೋಜಿಸುವ ಈವೆಂಟ್‌ಗಳಲ್ಲಿ ಭಾಗವಹಿಸುವ ಪುರುಷ-ಮಹಿಳಾ ತಂಡಗಳಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ICC) ಸಮಾನ ಬಹುಮಾನವನ್ನು ಘೋಷಿಸಿದೆ.
ದಕ್ಷಿಣ ಆಫ್ರಿಕಾದ ಡರ್ಬನ್ನಲ್ಲಿ ನಡೆದ ಐಸಿಸಿ ವಾರ್ಷಿಕ ಸಮ್ಮೇಳನದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಐಸಿಸಿ ಟೂರ್ನಿಗಳಲ್ಲಿ ಪುರುಷರ ತಂಡಗಳು ಪಡೆದಷ್ಟೇ ಸ್ಥಾನವನ್ನು ಮಹಿಳಾ ತಂಡ ಪಡೆದಲ್ಲಿ ಅವರಿಗೆ ಸಮಾನ ಬಹುಮಾನ ಮೊತ್ತ ಸಿಗಲಿದೆ.
ಇದನ್ನೂ ಓದಿ: ಸಹೋದರಿಯ ಸಹಾಯದೊಂದಿಗೆ ಸಹಪಾಠಿ ಮೇಲೆ ದೌರ್ಜನ್ಯ ಎಸಗಿದ ಅಪ್ರಾಪ್ತ ವಯಸ್ಕ
ಕ್ರಿಕೆಟ್ ಎಲ್ಲರಿಗೂ ನಿಜವಾದ ಕ್ರೀಡೆಯಾಗಿದೆ ಮತ್ತು ಐಸಿಸಿ ಮಂಡಳಿಯ ಈ ನಿರ್ಧಾರವು ಇದನ್ನು ಇನ್ನಷ್ಟು ಬಲಪಡಿಸುತ್ತದೆ ಮತ್ತು ಆಟಕ್ಕೆ ಪ್ರತಿಯೊಬ್ಬ ಆಟಗಾರನ ಕೊಡುಗೆಯನ್ನು ಸಮಾನವಾಗಿ ಆಚರಿಸಲು ಮತ್ತು ಮೌಲ್ಯೀಕರಿಸಲು ನಮಗೆ ಅನುವು ಮಾಡಿಕೊಡುತ್ತದೆ ಎಂದು ಐಸಿಸಿ ಹೇಳಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಐಸಿಸಿ ಚೇರ್ಮನ್ ಇದು ಕ್ರೀಡಾ ಇತಿಹಾಸದಲ್ಲೇ ಮಹತ್ವದ ಕ್ಷಣವಾಗಿದೆ. ಐಸಿಸಿ ನಡೆಸುವ ಜಾಗತಿಕ ಈವೆಂಟ್‌ಗಳಲ್ಲಿ ಸ್ಪರ್ಧಿಸುವ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಈಗ ಸಮಾನವಾಗಿ ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.