More

    ಸಹೋದರಿಯ ಸಹಾಯದೊಂದಿಗೆ ಸಹಪಾಠಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪ್ರಾಪ್ತ ವಯಸ್ಕ

    ಜೈಪುರ: ಆಘಾತಕಾರಿ ಘಟನೆಯೊಂದರಲ್ಲಿ 10ನೇ ತರಗತಿ ವಿದ್ಯಾರ್ಥಿಯೋರ್ವ ತನ್ನ ಸಹೋದರಿಯ ಸಹಾಯದೊಂದಿಗೆ ಸಹಪಾಠಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನದ ಉದಯ್​ಪುರ ಜಿಲ್ಲೆಯಲ್ಲಿ ನಡೆದಿದೆ.

    10ನೇ ತರಗತಿ ವಿದ್ಯಾರ್ಥಿ ಮಾದಕವ್ಯಸನಿಯಾಗಿದ್ದು, ಆತನನ್ನು ವಶಕ್ಕೆ ಪಡೆದು ವ್ಯಸನಮುಕ್ತಿ ಕೇಂದ್ರದಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪೀಡಿಸುತ್ತಿದ್ದ

    ಘಟನೆ ಕುರಿತು ಪ್ರತಿಕ್ರಿಯಿಸಿರುವ ಹಿರನ್​ ಮ್ಯಾಗ್ರಿ ಪೊಲೀಸ್​ ಠಾಣೆಯ ಅಧಿಕಾರಿ ರಾಮ್​ ಸುಮೇರ್​ ಮೀನಾ ಘಟನೆಯೂ 2022ರ ಆಗಸ್ಟ್​ ತಿಂಗಳಲ್ಲಿ ನಡೆದಿದ್ದು, ಆರೋಪಿ ಬಾಲಕಿ ಹಾಗೂ ಸಂತ್ರಸ್ತ ಬಾಲಕಿ ಇಬ್ಬರು ಉದಯ್​ಪುರದ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು. ಇವರಿಬ್ಬರನ್ನು ಒಂದೇ ಕೋಚಿಂಗ್​ ಸೆಂಟರ್​ಗೆ ಸೇರಿಸಲಾಗಿತ್ತು.

    ಆರೋಪಿ ಬಾಲಕನು ಸಂತ್ರಸ್ತಳಿಗೆ ತನ್ನ ಬೆತ್ತಲೆ ಫೋಟೋ ಹಾಗೂ ವಿಡಿಯೋವನ್ನು ಕಳಿಸುವಂತೆ ಹಿಂದೆ ಬಿದಿದ್ದ. ಈ ಸಂಬಂಧ ಬಾಲಕಿ ಆತನಿಗೆ ಅನೇಕ ಬಾರಿ ಎಚ್ಚರಿಕೆ ನೀಡಿದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ಈ ಬಗ್ಗೆ ಆರೋಪಿಯೂ ತನ್ನ ಸಹೋದರಿಯೊಂದಿಗೆ ಚರ್ಚಿಸಿದ್ದು ಆಕೆಯು ಸಹ ಬಾಲಕಿಗೆ ಒತ್ತಡ ಹಾಕಲು ಶುರು ಮಾಡಿದ್ದಾಳೆ.

    ಸಹೋದರಿಯ ಸಹಾಯದೊಂದಿಗೆ ಸಹಪಾಠಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪ್ರಾಪ್ತ ವಯಸ್ಕ

    ಇದನ್ನೂ ಓದಿ: 2018ರಲ್ಲಿ ಪ್ರಧಾನಿ ಮೋದಿ ಕೊಟ್ಟ ಆಫರ್​ ಬಹಿರಂಗಪಡಿಸಿದ ಎಚ್​ಡಿಕೆ

    ಸಹೋದರಿ ಸಾಥ್​

    ಇದಾದ ಕೆಲ ದಿನಗಳ ಬಳಿಕ ಬಾಲಕಿಯನ್ನು ತಮ್ಮ ಮನೆಯಲ್ಲಿ ಕಾರ್ಯಕ್ರಮ ಇರುವುದಾಗಿ ಕರೆಸಿಕೊಂಡ ಆರೋಪಿಗಳು ಆಕೆಯನ್ನು ರೂಮ್​ ಒಂದರಲ್ಲಿ ಕೂಡಿ ಹಾಕಿ ಕೃತ್ಯ ಎಸಗಿದ್ದಾರೆ. ಬಳಿಕ ಅದನ್ನು ಮೊಬೈಲ್​ ಫೋನಿನಲ್ಲಿ ಚಿತ್ರೀಕರಿಸಿದ್ದು, ವಿಚಾರವನ್ನು ಯಾರಾದರ ಬಳಿ ಹೇಳಿದರೆ ವಿಡಿಯೋವನ್ನು ವೈರಲ್​ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

    ಇತ್ತೀಚಿಗೆ ಆರೋಪಿಯೂ ತನ್ನ ಶಾಲೆಯ ವಾಟ್ಸ್​ಆ್ಯಪ್​ ಗ್ರೂಪಿನಲ್ಲಿ ವಿಡಿಯೋ ಹಂಚಿಕೊಂಡಾಗ ಕೃತ್ಯ ಬೆಳಕಿಗೆ ಬಂದಿದೆ. ಈ ಬಗ್ಗೆ ವಿದ್ಯಾರ್ಥಿನಿಯ ಸಹಪಾಠಿಗಳು ಪ್ರಾಂಶುಪಾಲರ ಮುಖೇನ ಸಂತ್ರಸ್ತೆಯ ಪೋಷಕರಿಗೆ ವಿಚಾರ ತಿಳಿಸಿದ್ದು, ಅವರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಬಂಧಿತ ಆರೋಪಿಗಳ ವಿರುದ್ಧ ಪೋಕ್ಸೋ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ನ್ಯಾಯಾಲಯದಲ್ಲಿ ಹಾಜರುಪಡಿಸಿ ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಹಿರನ್​ ಮ್ಯಾಗ್ರಿ ಪೊಲೀಸ್​ ಠಾಣೆಯ ಅಧಿಕಾರಿ ರಾಮ್​ ಸುಮೇರ್​ ಮೀನಾ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts