2018ರಲ್ಲಿ ಪ್ರಧಾನಿ ಮೋದಿ ಕೊಟ್ಟ ಆಫರ್​ ಬಹಿರಂಗಪಡಿಸಿದ ಎಚ್​ಡಿಕೆ

HDK With Pm
Published on

ಬೆಂಗಳೂರು: ರಾಜ್ಯ ವಿಧಾನಸಭೆ ಅಧಿವೇಶನ ಶುರುವಾಗಿ ವಾರ ಕಳೆದಿದ್ದು, ದಿನದಿಂದ ದಿನಕ್ಕೆ ಆಡಳಿತ ಪಕ್ಷ ಕಾಂಗ್ರೆಸ್​ ವಿರುದ್ಧ ವಿಪಕ್ಷಗಳ ಬಿಜೆಪಿ-ಜೆಡಿಎಸ್​ ಸದಸ್ಯರು ಮುಗಿ ಬೀಳುತ್ತಿದ್ದು, ಈ ಮಧ್ಯೆ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಹೇಳಿಕೆಯೊಂದನ್ನು ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಿಜೆಪಿ ಪರ ಬ್ಯಾಟ್​ ಬೀಸುತ್ತಿರುವ ಮಾಜಿ ಸಿಎಂ ಎಚ್​ಡಿಕೆ 2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೊಟ್ಟ ಆಫರ್​ ಕುರಿತು ಸದನದಲ್ಲಿ ಪ್ರಸ್ತಾಪಿಸಿದ್ದಾರೆ.

hdk

ಸದನದಲ್ಲಿ ಮಾತನಾಡುವ ವೇಳೆ ಸಿಎಂ ಸಿದ್ದರಾಮಯ್ಯ ಕುಮಾರಸ್ವಾಮಿ ಯಾಕೋ ಬಿಜೆಪಿ ಜೊತೆ ಸೇರಿದ್ದೀಯಾ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಎಚ್​ಡಿಕೆ 2018ರಲ್ಲಿ ಚುನಾವಣೆ ಫಲಿತಾಂಶದ ಬಳಿಕ ಪ್ರಧಾನಿ ಮೋದಿ ಒಂದುವರೆ ಘಂಟೆಗಳ ಕಾಲ ಚರ್ಚಿಸಿದ ಬಗ್ಗೆ ಹೇಳಿದ್ದರು.

ಬಳಿಕ ಬಿಜೆಪಿ-ಜೆಡಿಎಸ್​ ಮೈತ್ರಿ ಕುರಿತು ಸ್ಪಷ್ಟನೆ ನೀಡಿದ ಎಚ್​ಡಿಕೆ ಪ್ರಧಾನಿ ಮೋದಿ ಗುಟ್ಟಾಗಿ ಆಫರ್ ಕೊಟ್ಟಿದ್ದನ್ನು ವಿಧಾನಸಭೆಯಲ್ಲಿ ಬಹಿರಂಗಪಡಿಸಿದ್ದಾರೆ. ನಮ್ಮ ಪಕ್ಷವನ್ನು ಉಳಿಸುವ ನಿಟ್ಟಿನಲ್ಲಿ ನಾನು ಆ ದಿನ ಬಿಜೆಪಿಯೊಂದಿಗೆ ಸೇರಲಿಲ್ಲ ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಸದನದಲ್ಲಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net