ನಟ, ನಿರೂಪಕ ಮಾಸ್ಟರ್​ ಆನಂದ್​ ಪುತ್ರಿ ವಂಶಿಕ ಹೆಸರಿನಲ್ಲಿ ವಂಚನೆ

Scam
Published on

ಬೆಂಗಳೂರು: ಕಿರುತೆರೆ ನಟ , ನಿರೂಪಕ ಮಾಸ್ಟರ್​ ಆನಂದ್​ ಪುತ್ರಿ ವಂಶಿಕ ಅಂಜನಿ ಕಶ್ಯಪ ಹೆಸರನ್ನು ಹೇಳಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಸದಾಶಿವನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನಿಶಾ ನರಸಪ್ಪ ಎಂಬ ಹೆಸರಿನ ಮಹಿಳೆಯೂ ಮಾಸ್ಟರ್​ ಆನಂದ್​ ಪುತ್ರಿ ವಂಶಿಕಾ ಹೆಸರೇಳಿಕೊಂಡು ಆಕ್ಟಿಂಗ್ ಹಾಗೂ ಮಕ್ಕಳ ಪೋಟೋಶೂಟ್ ಮಾಡಿಸುವುದಾಗಿ ವಂಚನೆ ಎಸಗಿದ್ದಾರೆ.

Scam

ಆ್ಯಡ್ ಶೂಟ್, ಕಾರ್ಯಕ್ರಮಗಳು, ಮಕ್ಕಳ ಟ್ಯಾಲೆಂಟ್ ಶೋ ನೆಪದಲ್ಲಿ ವಂಚನೆ. ನಿಮ್ಮ ಮಕ್ಕಳಿಗೂ ಚ್ಯಾನ್ಸ್​ ಕೊಡಿಸುವುದಾಗಿ ಹೇಳಿ ನೂರಾರು ಮಂದಿ ಪೋಷಕರಿಂದ ಲಕ್ಷ ಲಕ್ಷ ಹಣ ಪಡೆದು ವಂಚನೆ ಎಸಗಲಾಗಿದೆ. ಈ ಸಂಬಂಧ ಹಣ ಕಳೆದುಕೊಂಡಿದ್ದ ಪೋಷಕರು ನಿಶಾಳನ್ನು ಹಿಡಿದು ಸದಾಶಿವನಗರ ಪೊಲೀಸ್​ ಠಾಣೆಗೆ ಒಪ್ಪಿಸಿದ್ದಾರೆ.

ವಂಚದನೆ ಸಂಬಂಧ ಮಾಸ್ಟರ್​ ಆನಂದ್​ ಪತ್ನಿ ಯಶಸ್ವಿನಿ ಕೂಡ ಸದಾಶಿವನಗರ ಪೊಲೀಸ್​ ಠಾಣೆಯಲ್ಇ ದೂರು ದಾಖಲಿಸಿದ್ದು, ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿತೆ ನಿಶಾಳನ್ನು ವಶಕ್ಕೆ ಪಡೆದಿರುವ ಸದಾಶಿವನಗರ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

Scam
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net