More

    ಹಣ ಕದ್ದು ಮಾವನನ್ನು ಅಟ್ಟಾಡಿಸಿ ಕಬ್ಬಿಣದ ಪೈಪ್​ನಲ್ಲಿ ಹೊಡೆದ ಸೊಸೆ!

    ಹರಿಯಾಣ: ಹರಿಯಾಣದಲ್ಲಿ ಮಹಿಳೆಯೊಬ್ಬಳು ತನ್ನ ಮಾವನನ್ನು ಅಟ್ಟಾಡಿಸಿ ಕಬ್ಬಿಣದ ಪೈಪ್‌ನಿಂದ ಥಳಿಸಿದ ಘಟನೆ ನಡೆದಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೃದ್ಧ ಮಾವ ದಾಳಿಯಲ್ಲಿ ಗಾಯಗೊಂಡಿದ್ದಾರೆ.

    ವೃದ್ಧ ವ್ಯಕ್ತಿಯನ್ನು ಹಾಗೂ ಮಗಳನ್ನು ರಕ್ಷಿಸಲು ಬಂದ ಕೆಲಸದಾಕೆಗೂ ಈ ಯುವತಿ ಥಳಿಸಿದ್ದು, ವೃದ್ಧನ ಜೇಬಿನಿಂದ 40 ಸಾವಿರ ರೂ.ಗಳನ್ನು ಕದ್ದಿದ್ದಾಳೆ ಎನ್ನಲಾಗಿದೆ.

    ಈ ಘಟನೆಯನ್ನು ಶೋನಿ ಕಪೂರ್​ ಎನ್ನುವವರು ಶೇರ್ ಮಾಡಿದ್ದು, ಅಲ್ಲಿದ್ದ ಯಾರೂ ವ್ಯಕ್ತಿಯ ರಕ್ಷಣೆಗೆ ಮುಂದಾಗಿಲ್ಲ ಎಂದು ದುಃಖ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋಗೆ ಟ್ವಿಟರ್​ನಲ್ಲಿ ನಾನಾ ರೀತಿಯ ಪ್ರತಿಕ್ರಿಯೆಗಳು ಬಂದಿದ್ದು ಕೆಲವರು ಇದನ್ನು ಹಾಸ್ಯಾಸ್ಪದವಾಗಿ ತೆಗೆದುಕೊಂಡರೆ, ಇನ್ನೂ ಕೆಲವರು ಇದನ್ನೇ ರಾಜಕೀಯ ನಾಯಕ/ಕಿಯರನ್ನು ಟೀಕಿಸಲು ಅಸ್ತ್ರವಾಗಿ ಬಳಸಿದ್ದಾರೆ.

    ಒಬ್ಬರಂತೂ ಸಾಮಾನ್ಯ ಮಹಿಳೆಯ ಶಕ್ತಿಯನ್ನು ಕಡೆಗಣಿಸಬೇಡಿ ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು “ಈ ಮಹಿಳೆ ಪ್ರಿಯಾಂಕಾ ಗಾಂಧಿಯವರ “ಹೆಣ್ಣಾಗಿ ಹೋರಾಟ ಹಾಗೂ ಹೊಡೆದಾಟ ಮಾಡಬಲ್ಲೇ” ದೂರದೃಷ್ಟಿಯನ್ನು ಬಲಪಡಿಸಿದ್ದಾರೆ” ಎಂದಿದ್ದಾರೆ. ಇನ್ನೊಬ್ಬರಂತೂ ಈ ಸಂದರ್ಭದಲ್ಲಿ, ವರದಕ್ಷಿಣೆ ಪಡೆದುಕೊಂಡಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

    ಒಟ್ಟಾರೆಯಾಗಿ ಕಾಮೆಂಟ್ ವಿಭಾಗದಲ್ಲಿ ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು ಯಾರೂ ಮಹಿಳೆಯನ್ನು ಸಮರ್ಥಿಸಿಕೊಂಡಿಲ್ಲ. ಈ ಪ್ರಕರಣ ಠಾಣೆಯಲ್ಲಿ ದಾಖಲಾಗಿದೆಯೇ ಇಲ್ಲವೇ ಎನ್ನುವ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts