ಈಕೆ ಪುರುಷರ ಕಣ್ಣಲ್ಲಿ ಕಣ್ಣಿಟ್ಟು ನೋಡುವಂತಿಲ್ಲ: ಈಕೆಯ ವಿಚಿತ್ರ ಕಾಯಿಲೆ ಬಗ್ಗೆ ತಿಳಿದ್ರೆ ದಂಗಾಗ್ತಿರಾ!

England Woman 1
Published on

ಲಂಡನ್​: ತಮ್ಮ ಸುತ್ತಮುತ್ತಲಿನ ಸೌಂದರ್ಯವನ್ನು ಸವಿಯಲು ದೇವರು ನಮಗೆ ನೀಡಿರುವ ಬೆಲೆ ಕಟ್ಟಲಾಗದ ವರವೆಂದರೆ ಅದು ಕಣ್ಣು. ಆದರೆ, ಅದೇ ಕಣ್ಣು ಇಲ್ಲೊಬ್ಬ ಮಹಿಳೆಗೆ ಶತ್ರುವಾಗಿದೆ. ಅದು ಹೇಗೆ ಅಂತಿರಾ... ಈ ಮಹಿಳೆ ಆಕರ್ಷಕ ಪುರುಷರಲ್ಲಿ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ತಕ್ಷಣ ಪ್ರಜ್ಞೆ ತಪ್ಪಿ ಬೀಳುತ್ತಾರಂತೆ. ಅದಕ್ಕೆ ಕಾರಣ ಈಕೆ ವಿರಳಾತಿ ವಿರಳ ಮೆದುಳಿನ ಕಾಯಿಲೆಯಿಂದ ಬಳಲುತ್ತಿದ್ದಾರೆ.

ಅಂದಹಾಗೆ ಆ ಮಹಿಳೆಯ ಹೆಸರು ಕಿರ್ಸ್ಟಿ ಬ್ರೌನ್​ (32). ಈಕೆ ಇಂಗ್ಲೆಂಡ್​ನ ನಾರ್ಥ್​ವಿಚ್​ನ ಚೆಷೈರ್ ನಿವಾಸಿಯಾಗಿದ್ದು, ಕ್ಯಾಟಪ್ಲೆಕ್ಸಿ ( ಹಠಾತ್​ ಸ್ನಾಯು ಪಾರ್ಶ್ವವಾಯು)ಎಂಬ ವಿರಳ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕೋಪ, ನಗುವುದು ಮತ್ತು ಭಯದಂತಹ ಬಲವಾದ ಭಾವನೆಗಳು ಆಕೆಯನ್ನು ಪಾರ್ಶ್ವವಾಯುವಿಗೆ ಪ್ರಚೋದಿಸುತ್ತದೆ.

ಈ ಪರಿಸ್ಥಿತಿಯು ಸಾಮಾನ್ಯವಾಗಿ ನಾರ್ಕೊಲೆಪ್ಸಿ (ಅತಿಯಾದ ಅನಿಯಂತ್ರಿತ ಹಗಲಿನ ನಿದ್ರೆ) ಯೊಂದಿಗೆ ಸಂಬಂಧಿಸಿದೆ. ಇದೊಂದು ನಿದ್ರಾರೋಗವಾಗಿದ್ದು, ಸಾಮಾನ್ಯವಾಗಿ ಎರಡು ನಿಮಿಷಗಳ ಅವಧಿಗಿಂತ ಕಡಿಮೆ ಪರಿಣಾಮ ಇರುತ್ತದೆ. ಹೀಗಾಗಿ ಕಿರ್ಸ್ಟಿ ಬ್ರೌನ್​, ಹೊರಗಡೆ ಹೋದಾಗಲೆಲ್ಲ ತನ್ನ ತಲೆಯನ್ನು ತಗ್ಗಿಸಿಕೊಂಡೇ ನಡೆದಾಡಬೇಕಾದ ಪರಿಸ್ಥಿತಿ ಇದೆ.

ಈ ಬಗ್ಗೆ ಮಾತನಾಡಿರುವ ಕಿರ್ಸ್ಟಿ, ಇದು ತುಂಬಾ ಪೇಚಾಟಕ್ಕೆ ಸಿಲುಕಿಸಿದೆ. ನಾನು ಯಾರನೇ ನೋಡಿದರು ಕಣ್ಣಲ್ಲಿ ಕಣ್ಣಿಟ್ಟು ನೋಡಲು ಆಗುವುದಿಲ್ಲ. ನೋಡಿದರೆ ತಕ್ಷಣ ತಲೆ ತಗ್ಗಿಸಿಬಿಡುತ್ತೇನೆ. ಅದರಲ್ಲೂ ಆಕರ್ಷಕ ಪುರುಷರನ್ನು ನೋಡಿದರೆ, ನನ್ನ ಸ್ನಾಯುಗಳು ನಿಯಂತ್ರಣ ತಪ್ಪುತ್ತದೆ. ಹೀಗಾಗಿ ನನ್ನ ರಕ್ಷಣೆಗಾಗಿ ಕಣ್ಣುಗಳನ್ನು ಯಾವಾಗಲು ಕೆಳಗೆ ಮಾಡಿರುತ್ತೇನೆ ಎಂದಿದ್ದಾರೆ.

ಒಂದು ದಿನಕ್ಕೆ ಐದು ಬಾರಿ ಕ್ಯಾಟಪ್ಲೆಕ್ಸಿ ದಾಳಿಗೆ ಕಿರ್ಸ್ಟಿ ಒಳಗಾಗುತ್ತಾರಂತೆ. ಅದರಲ್ಲೂ ಕೆಟ್ಟ ದಿನಗಳಲ್ಲಿ 50 ಬಾರಿ ದಾಳಿಯಾಗಿದೆಯಂತೆ. ಈ ಕಾಯಿಲೆ ಮನೆಯಿಂದ ಹೊರ ಹೋಗಲು ಭಯಪಡುವಂತೆ ಮಾಡಿದೆ ಎಂದು ಕಿರ್ಸ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

ಇದು ನಿದ್ರೆಗೆ ಸಂಬಂಧಿಸಿದ ರೋಗ ಎಂದು ಪರಿಗಣಿಸಿರುವುದರಿಂದ ನಾನು ಹೆಚ್ಚಾಗಿಯು ನಿದ್ರಿಸುತ್ತಿಲ್ಲ. ಆದಾಗ್ಯು ಹೆಚ್ಚಿನ ದಾಳಿ ಸಂಭವಿಸುತ್ತಲೇ ಇದೆ. ಕೋಪ ಮತ್ತು ನಗು ಹಠಾತ್​ ಸ್ನಾಯು ದಾಳಿಗೆ ಪ್ರಚೋದನೆ ನೀಡುತ್ತದೆ. ತಮಾಷೆ ಮಾಡಲು ಸಹ ಆಗುತ್ತಿಲ್ಲ. ಅದರಲ್ಲೂ ನನ್ನ ಸಹೋದರೆ ತುಂಬಾ ತಮಾಷೆ ಹುಡುಗಿ ಎಂದು ನೋವು ತೋಡಿಕೊಂಡಿದ್ದಾಳೆ.

ಕಿರ್ಸ್ಟಿ ಅವರು ನಾರ್ಕೊಲೆಪ್ಸಿ ಜೀನ್‌ನೊಂದಿಗೆ ಜನಿಸಿದ್ದಾರೆ. ಆದರೆ ಒಂಬತ್ತು ವರ್ಷದವಳಿದ್ದಾಗಲೇ ತಲೆಗೆ ಪೆಟ್ಟು ಬಿದ್ದಿದ್ದರಿಂದ ಅದರ ಪರಿಣಾಮವನ್ನು ಬೇಗ ಎದುರಿಸುತ್ತಿದ್ದಾರೆ. ಫ್ರೆಂಡ್ಸ್​ ಜತೆ ಹಣ್ಣು ಕೀಳಲು ಮರಕ್ಕೆ ಕಲ್ಲು ಹೊಡೆಯುವಾಗ ಒಂದು ಕಲ್ಲು ಕಿರ್ಸ್ಟಿ ತಲೆ ಬಡಿದಿತ್ತಂತೆ. ಕೊನೆಗೂ ಇದು ನನ್ನ ಮೇಲೆ ಪರಿಣಾಮ ಬೀರಿದ್ದು, ನಾರ್ಕೊಲೆಪ್ಸಿ ಜೀನ್‌ನಿಂದಾಗಿ ನಾನು ಅಂತಿಮವಾಗಿ ಕ್ಯಾಟಪ್ಲೆಕ್ಸಿಯಿಂದ ಬಳಲುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net