ಅಕ್ರಮ ಸಂಬಂಧಕ್ಕೆ ತಿರುಗಿದ ಮದುವೆ ಸಮಾರಂಭದಲ್ಲಿನ ಪರಿಚಯ: ಎರಡೇ ವರ್ಷದಲ್ಲಿ ನಡೆಯಿತು ಹೀನ ಕೃತ್ಯ

Supari
Published on

ಬೆಂಗಳೂರು: ಪ್ರಿಯಕರನ ಜತೆ ಅಕ್ರಮ ಸಂಬಂಧಕ್ಕೆ ಅಡ್ಡಿ ಆಗುತ್ತಾರೆ ಎಂದು ಸುಪಾರಿ ಕೊಟ್ಟು ಪತಿಯನ್ನೇ ಹತ್ಯೆ ಮಾಡಿಸಿದ ಪತ್ನಿ. ಪತ್ನಿ ಮತ್ತು ಪ್ರಿಯಕರನ ಗ್ಯಾಂಗ್ ಬಂಧಿಸಿದ ಸುದ್ದಗುಂಟೆಪಾಳ್ಯ ಪೊಲೀಸರು.

ಮಹಮ್ಮದ್ ರಫಿ ಮೃತ ವ್ಯಕ್ತಿ. ತಸ್ಮಿನ್ ಬಾನು ಮೃತನ ಪತ್ನಿ.ಈಕೆಯ ಪ್ರಿಯಕರ ಅಪ್ಸರ್ ಖಾನ್. ಈ ಇಬ್ಬರಿಗೂ ಎರಡು ವರ್ಷಗಳ ಹಿಂದೆ ಮದುವೆ ಸಮಾರಂಭ ದಲ್ಲಿ ಪರಿಚಯವಾಗಿ ಆಕರ್ಷಣೆಗೆ ಒಳಗಾಗಿ ಅಕ್ರಮ ಸಂಬಂಧ ಬೆಳೆದಿತ್ತು.

ಮಹಮ್ಮದ್ ರಫಿ‌ ಮೂಲಕ ಮೈಸೂರಿನ ಲ್ಲಿ 75 ಲಕ್ಷ ರೂ. ಅನ್ನು ರಿಯಲ್ ಎಸ್ಟೇಟ್ ಉದ್ಯಮ ಕ್ಕೆ ಆರೋಪಿ ಹೂಡಿಕೆ ಮಾಡಿಸಿದ್ದ. ಅದರಲ್ಲಿ ಐದು ಲಕ್ಷ ಕಮಿಷನ್ ಕೊಡುವುದಾಗಿ ಹೇಳಿ ಆತನ ಪತ್ನಿ ಜತೆ ಅಕ್ರಮ ಸಂಬಂಧ ಮುಂದುವರೆಸಿದ್ದ. ಕೊನೆಗೆ ತಸ್ಮಿನಾ ಬಾನು ತನ್ನ ಪ್ರಿಯಕರನ ಜತೆ ಸೇರಿ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net