ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮಹಿಳೆ ಆತ್ಮಹತ್ಯೆಗೆ ಯತ್ನ! | Microfinance

dk (67) (1)
Published on

ವಿಜಯನಗರ: ಮೈಕ್ರೋ ಫೈನಾನ್ಸ್(Microfinance) ಕಿರುಕುಳಕ್ಕೆ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ಸೋಮವಾರ ನಡೆದಿದೆ.

ಪಟ್ಟಣದ ಬಳ್ಳಾರಿ ಕ್ಯಾಂಪ್ ನಿವಾಸಿ ಆಫ್ರೀನ್ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. 3 ಲಕ್ಷ ಹಣ ಸಾಲ ಪಡೆದಿದ್ದ ಮಹಿಳೆ. ಪ್ರತಿ ವಾರ 2700 ರೂ. ನಂತೆ ಇಲ್ಲಿಯ ವರೆಗೆ ಒಟ್ಟು 2 ಲಕ್ಷ ಸಾಲ ಮರುಪಾವತಿ ಮಾಡಿದ್ದಾರೆ.

ಸೋಮವಾರ 2700 ರೂ. ಪಾವತಿ ವಿಳಂಭ ಆದ ಹಿನ್ನೆಲೆ ಕಂಪನಿಯ ಸಿಬ್ಬಂದಿಗಳು ಒತ್ತಡ ಹೇರಿದ್ದಾರೆ. ಇದರಿಂದ ಮಾನಸಿಕವಾಗಿ ನೊಂದು ಮಹಿಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಮಹಿಳೆಯನ್ನ ಹರಪನಹಳ್ಳಿ ಪಟ್ಟಣದ‌ ಆಸ್ಪತ್ರೆಗೆ‌ ಚಿಕಿತ್ಸೆಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ಕೊಟ್ಟೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net