ಗಗನಯಾತ್ರಿಗಳು ಬಾಹ್ಯಕಾಶದಲ್ಲಿ ಬಟ್ಟೆ ಸ್ವಚ್ಛಗೊಳಿಸುವುದೇಗೆ; ಒಂದು ಜೊತೆ ಬಟ್ಟೆಯನ್ನು ಎಷ್ಟು ದಿನ ಧರಿಸುತ್ತಾರೆ ಗೊತ್ತಾ? ಇಲ್ಲಿದೆ ಮಾಹಿತಿ | Astronauts wash Clothes

dk (66) (1)
Published on

Astronauts wash Clothes:ಇತ್ತೀಚಿನ ದಿನಗಳಲ್ಲಿ ಬಾಹ್ಯಕಾಶಕದಲ್ಲಿ ಗಗನಯಾತ್ರೆಗಳು ವರ್ಷಾನುಗಟ್ಟಲೇ ಉಳಿದುಕೊಳ್ಳುತ್ತಾರೆ. ಭೂಮಿಗೆ ವಾಪಸ್ಸಾಗುವವರೆಗೂ ಅಲ್ಲಿಯೇ ನಿದ್ದೆ, ತಿನ್ನೋದು ಸೇರಿ ದೈನಂದಿನ ಚಟುವಟಿಕೆಗಳು ನಡೆಯುತ್ತವೆ. ಅಂದಾಹಾಗೇ ಬಟ್ಟೆಗಳನ್ನು ಬದಲಾಯಿಸಿದ ಬಳಿಕ ಅವುಗಳನ್ನು ಹೇಗೆ ವಾಶ್​ ಮಾಡಲಾಗುತ್ತದೆ ಎಂಬ ಪ್ರಶ್ನೆ ಎಲ್ಲರಲ್ಲೂ ಸಹಜವಾಗಿ ಮೂಡುತ್ತದೆ.

ಕಳೆದ ಕೆಲ ವರ್ಷಗಳಿಂದೆ ಗಗನಯಾತ್ರಿಗಳು ಬದುಕು ವಿಭಿನ್ನವಾಗಿತ್ತು. ಆದ್ರೆ ಇತ್ತೀಚಿನ ಅಧುನಿಕ ಬದಲಾವಣೆಯಿಂದ ಗಗನಯಾತ್ರಿಗಳ ಬದುಕು ಸಂಪೂರ್ಣ ಬದಲಾವಣೆಯಾಗಿದ್ದು, ವರ್ಷನುಗಟ್ಟಲೇ ಬಾಹ್ಯಕಾಶದಲ್ಲಿಯೇ ಬದುಕು ಕಳೆಯುತ್ತಾರೆ. ಹೀಗಾಗಿ, ಅವರ ಸಾಮಾನ್ಯ ಚಟುವಟಿಕೆಗಳು ಬಗ್ಗೆ ಸಂದೇಹ, ಪ್ರಶ್ನೆ ಏಳುವುದು ಸಹಜ. ಇದೀಗ ಇದನ್ನೂ ತಿಳಿಯೋಣ ಬನ್ನಿ..

ಬಾಹ್ಯಕಾಶದಲ್ಲಿ ಗಗನಯಾತ್ರೆಗಳ ಒಳ ಉಡುಪುಗಳು ಬೇಗ ಹಾಳಗುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ, ಸಾಕಷ್ಟು ಒಳ ಉಡುಪು ಮತ್ತು ಬಟ್ಟೆಗಳನ್ನು ಹೊಯ್ಯುತ್ತಾರೆ. ಆದರೆ, ಇದೀಗ ಬಟ್ಟೆಗಳನ್ನು ವಾಶ್​ ಮಾಡುತ್ತಾರೆಯೇ ಎಂಬ ಪ್ರಶ್ನೆ ಮೂಡಿದೆ. ಸಾಮಾನ್ಯವಾಗಿ ಬಾಹ್ಯಕಾಶದಲ್ಲಿ ಗಾಳಿ ಮತ್ತು ನೀರಿನ ಕೊರತೆ ಇದ್ದೇ ಇದೆ. ಗಗನಯಾತ್ರಿಗಳು ತಮಗೆ ಕುಡಿಯಲು ನೀರೊಯ್ಯುದೆ ಕಷ್ಟ. ಬಟ್ಟೆ ತೊಳೆಯಲು ಸಾಧ್ಯವೇ. ಇದು ಸದ್ಯಕ್ಕೆ ಆಗದ ಮಾತು ಎನ್ನುತ್ತಾರೆ ಖಗೋಳ ವಿಜ್ಞಾನಿಗಳು.

ಹೌದು, ಬಾಹ್ಯಕಾಶದಲ್ಲಿ ಬಟ್ಟೆ ತೊಳೆಯುವುದು ಸಾವಲಿನ ಕೆಲಸ, ಗಗನಯಾತ್ರಿಗಳು ತಮ್ಮ ಬಟ್ಟೆಗಳನ್ನು ತಾವೇ ತೊಳೆಯುತ್ತಾರೆ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ, ಇಂದಿಗೂ ಸಾಧ್ಯವಾಗಿಲ್ಲ. ಕೊಂಡೊಯ್ಯದ ಬಟ್ಟೆಗಳನ್ನೇ ಮರು ಬಳಕೆ ಮಾಡುತ್ತಾರೆ.

ಎಷ್ಟು ದಿನ ಬಳಕೆ

ಸಾಮಾನ್ಯವಾಗಿ ಒಂದು ಜತೆ ಬಟ್ಟೆಗಳನ್ನು ವಾರ ಅಥವಾ 10 ದಿನಕ್ಕೂ ಅಧಿಕ ದಿನಗಳ ಕಾಲ ಯೂಸ್​ ಮಾಡಬಹುದು.ಏಕೆಂದರೆ ಅಲ್ಲಿ ಧೂಳು ಇರುವುದಿಲ್ಲ. ಅಲ್ಲದೆ, ಬೆವರಿಕೆ ಇರುವುದಿಲ್ಲ. ಹೀಗಾಗಿ, ಕೊಳಕಿನ ಸಾಧ್ಯತೆ ಕಡಿಮೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net