ನಟನೆ ಜತೆ ಹೊಸ ಕೆಲಸಕ್ಕೆ ಕೈ ಹಾಕಿದ ಕಣ್ಸನ್ನೆ ಸುಂದರಿ...

Viral-Photos_2_20190930_402_602
Published on

ಮುಂಬೈ: ಕಣ್ಸನ್ನೆ ಮೂಲಕವೇ ರಾತ್ರೋರಾತ್ರಿ ರಾಷ್ಟ್ರ ವ್ಯಾಪಿ ಸೆನ್ಸೆಷನ್​ ಸೃಷ್ಟಿಸಿದ್ದ ಮಲಯಾಳಿ ನಟಿ ಪ್ರಿಯಾ ಪ್ರಕಾಶ್ ವಾರಿಯರ್​, ಈಗಲೂ ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಕೇವಲ ಮಲಯಾಳಂ ಅಷ್ಟೇ ಅಲ್ಲದೆ, ಕನ್ನಡದಲ್ಲಿಯೂ ಎರಡು ಸಿನಿಮಾ ಮಾಡುತ್ತಿದ್ದಾರೆ. ತೆಲುಗು, ತಮಿಳು, ಹಿಂದಿ ಪ್ರಾಜೆಕ್ಟ್​ಗಳಲ್ಲಿಯೂ ಬಿಜಿಯಾಗಿದ್ದಾರೆ. ಇದೀಗ ಇದೇ ನಟಿ ಸದ್ದಿಲ್ಲದೆ ಇನ್ನೊಂದು ಕೆಲಸವನ್ನು ಆರಂಭಿಸಿದ್ದಾರೆ.

ತೆರೆಮೇಲೆ ನಟನೆ ಮೂಲಕ ಕಾಣಿಸಿಕೊಳ್ಳುವ ಪ್ರಿಯಾ, ಇದೀಗ ಧ್ವನಿ ಮೂಲಕ ಇಂಪ್ರೆಸ್​ ಮಾಡಲು ಸಜ್ಜಾಗಿದ್ದಾರೆ. ಅಂದರೆ, ಹಿಂದಿಯ ಆಲ್ಬಂ ಗೀತೆಯೊಂದಕ್ಕೆ ಪ್ರಿಯಾ ಧ್ವನಿ ನೀಡಿದ್ದು, ಶೀಘ್ರದಲ್ಲಿ ಆ ಹಾಡು ಬಿಡುಗಡೆ ಆಗಲಿದೆ. ಲಾಕ್​ಡೌನ್​ ಸಂದರ್ಭದಲ್ಲಿ ಈ ಹಾಡಿಗೆ ಬೇಕಾದ ದೃಶ್ಯಗಳನ್ನು ಚಿತ್ರೀಕರಿಸಲಾಗಿತ್ತು.

ಕ್ರಿಸ್ಟಸ್​ ಸ್ಟೆಫಿನ್​ ಹಾಡಿಗೆ ಸಂಗೀತ ಸಂಯೋಜಿಸಿದ್ದು, ಐಫೋನ್​ ಮತ್ತು ಡಿಎಸ್​ಎಲ್ಆರ್​ ಕ್ಯಾಮರಾ ಮೂಲಕ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಸದ್ಯ ಟಾಲಿವುಡ್​ನಲ್ಲಿ ನಿತಿನ್​ ಜತೆ ಸಿನಿಮಾವೊಂದಕ್ಕೆ ಪ್ರಿಯಾ ಸಹಿ ಹಾಕಿದ್ದು, ಮಲಯಾಳಂನ ಒಂದೆರಡು ಚಿತ್ರಗಳೂ ಅವರ ಬತ್ತಳಿಕೆಯಲ್ಲಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net