

ಮುಂಬೈ: ಹಿಂದಿ ಬಿಗ್ಬಾಸ್ಗೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಸಲ್ಮಾನ್ ಖಾನ್ ಮತ್ತೆ ನಿರೂಪಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಲಾಕ್ಡೌನ್ ಅನ್ನೇ ಥೀಮ್ ಆಗಿಸಿಕೊಂಡಿರುವ ಈ ಸಲದ ಬಿಗ್ಬಾಸ್ ಸೀಸನ್ 14, ಹೊಸ ಹೊಸ ನಿಮಯಮಗಳನ್ನು ಈ ಸಲದ ಶೋದಲ್ಲಿ ಅಳವವಡಿಸಿಕೊಂಡಿದೆ. ಸ್ಪರ್ಧಿಗೂ ಇದು ಹೊಸ ಅನುಭವದ ಜತೆಗೆ ನೋಡುಗರಿಗೂ ಮನರಂಜನೆಯ ಬಾಡೂಟವನ್ನೇ ಬಡಿಸಲಿದೆ.
ಇದನ್ನೂ ಓದಿ: ರಾಗಿಣಿ, ರಾಹುಲ್‌ಗೆ ಜೈಲಿನಲ್ಲೀಗ ಸಹಕೈದಿಗಳದ್ದೇ ಭಯ!
ಇದೀಗ ಇದೇ ಬಿಗ್ಬಾಸ್ ಕುರಿತ ಇನ್ನೊಂದು ಸುದ್ದಿ ಸದ್ಯ ಸದ್ದು ಮಾಡುತ್ತಿದೆ. ಅದೇನೆಂದರೆ, ಈ ಸಲದ ಬಿಗ್ಬಾಸ್ ನಿರೂಪಣೆಯಲ್ಲಿ ಸಲ್ಮಾನ್ ಜತೆಗೆ ಇನ್ನೋರ್ವ ನಿರೂಪಕನೂ ಕಾಣಿಸಿಕೊಳ್ಳಲಿದ್ದಾರಂತೆ! ಸೀಸನ್ 13ರ ವಿನ್ನರ್ ಸಿದ್ಧಾರ್ಥ ಶುಕ್ಲಾ ಸೀಸನ್ 14ರ ನಿರೂಪಣೆಯಲ್ಲಿ ಸಲ್ಮಾನ್ಗೆ ಸಾಥ್ ನೀಡಲಿದ್ದಾರಂತೆ.
ಸೀಸನ್ 13 ವಿನ್ ಆದ ಬಳಿಕ ಸಾಕಷ್ಟು ಜನಪ್ರಿಯತೆ ಮತ್ತು ಅಪಾರ ಅಭಿಮಾನಿ ಬಳಗವನ್ನು ಸಿದ್ಧಾರ್ಥ್ ಸಂಪಾದಿಸಿಕೊಂಡಿದ್ದಾರೆ. ಆ ಪಾಪ್ಯುಲಾರಿಟಿಯನ್ನೇ ಮತ್ತೊಮ್ಮೆ ಬಳಸಿಕೊಳ್ಳಲಿ ಬಿಗ್ಬಾಸ್ ಮೇಕರ್ಸ್ ವಿಚಾರ ಮಾಡಿದ್ದು, ಸ್ಪರ್ಧಿ ಬದಲು ವಿಶೇಷ ರೀತಿಯಲ್ಲಿ ಅವರೂ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. (ಏಜೆನ್ಸೀಸ್)