More

    ಮಯಾನ್​ ಕ್ಯಾಲೆಂಡರ್​ ಪ್ರಕಾರ ಜೂನ್​ 21ಕ್ಕೆ ಪ್ರಪಂಚವೇ ಕೊನೆಯಾಗುತ್ತಾ?

    ನವದೆಹಲಿ: ಮಯಾನ್​ ಕ್ಯಾಲೆಂಡರ್​ ಪ್ರಕಾರ 2020ರ ಜೂನ್​ 21ಕ್ಕೆ ಪ್ರಪಂಚವೇ ಕೊನೆಯಾಗುತ್ತೆ ಎಂಬ ವದಂತಿ ತೀವ್ರವಾಗಿ ಹರಡಲು ಆರಂಭಿಸಿದೆ.

    ಇದಕ್ಕೂ ಮುನ್ನ 2012ರ ಡಿಸೆಂಬರ್​ಗೆ ಪ್ರಳಯವಾಗಿ ಪ್ರಪಂಚವೇ ಕೊನೆಯಾಗುತ್ತೆ ಎಂದು ಹೇಳಲಾಗುತ್ತಿತ್ತು. ಇದಕ್ಕೂ ಮಯಾನ್​ ಕ್ಯಾಲೆಂಡರ್​ ಅನ್ನೇ ಉದಾಹರಣೆಯಾಗಿ ನೀಡಲಾಗುತ್ತಿತ್ತು.

    ಆದರೆ, ಆ ಭವಿಷ್ಯದ ನುಡಿ ಸರಿಯಿರಲಿಲ್ಲ. ತಪ್ಪು ಗ್ರಹಿಕೆಯಿಂದಾಗಿ ಹಾಗೆ ಹೇಳಲಾಗಿತ್ತು. ಇದೀಗ ಸರಿಯಾಗಿ ಲೆಕ್ಕಾಚಾರ ಹಾಕಿ, ಪ್ರಪಂಚ ಕೊನೆಯಾಗುವ ದಿನವನ್ನು ನಿಖರವಾಗಿ ಗುರುತಿಸಲಾಗಿದೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: 70ರ ವೃದ್ಧೆ ತನ್ನ ಶತಾಯುಷಿ ತಾಯಿಯನ್ನು ಮಂಚದ ಮೇಲಿರಿಸಿ ಬ್ಯಾಂಕ್​ಗೆ ಎಳೆದೊಯ್ದಿದ್ದು ಏಕೆ?

    ಇದು 2020ನೇ ವರ್ಷವಾಗಿದ್ದರೂ, ಜೂಲಿಯನ್​ ಕ್ಯಾಲೆಂಡರ್​ ಪ್ರಕಾರ ಇದು 2012ನೇ ಇಸವಿಯಾಗಿದೆ ಎಂದು ಪೌಲೋ ಟ್ಯಾಗಲೋಗ್ಯುನ್​ ಎಂಬ ವಿಜ್ಞಾನಿ ಸರಣಿ ಟ್ವೀಟ್​ ಮಾಡಿದ್ದರು. ಇದಕ್ಕಾಗಿ ಅವರು ತಮ್ಮದೇ ಲೆಕ್ಕಾಚಾರವನ್ನೂ ನೀಡಿದ್ದರು.

    ಅದರಂತೆ, ಗ್ರೆಗೋರಿಯನ್​ ಕ್ಯಾಲೆಂಡರ್​ ಪ್ರಕಾರ ಪ್ರತಿ ವರ್ಷದ ಬದಲಾವಣೆಯಲ್ಲಿ ನಾವು 11 ದಿನಗಳನ್ನು ಕಳೆದುಕೊಳ್ಳುತ್ತಿದ್ದೇವೆ. 1752ರಿಂದ 2020ರವರೆಗಿನ 268 ವರ್ಷಗಳೊಂದಿಗೆ 11 ಅನ್ನು ಗುಣಿಸಿದಾಗ 2948 ದಿನಗಳಾಗುತ್ತವೆ. ಈ 2948 ದಿನಗಳನ್ನು 365 ದಿನಗಳಿಂದ ಭಾಗಿಸಿದಾಗ 8 ವರ್ಷಗಳು ಉಳಿಯುತ್ತವೆ. ಇದನ್ನು 2020ರಿಂದ ಕಳೆದಾಗ 2012 ಬರುತ್ತದೆ ಎಂದು ಅವರು ತಮ್ಮ ಟ್ವೀಟ್​ನಲ್ಲಿ ಪ್ರತಿಪಾದಿಸಿದ್ದರು.

    ಇದೆಲ್ಲವನ್ನೂ ಲೆಕ್ಕ ಹಾಕಿ ಹೇಳುವುದಾದರೆ ಮಯಾನ್​ ಕ್ಯಾಲೆಂಡರ್​ನಲ್ಲಿ ಹೇಳಿರುವಂತೆ ಪ್ರಪಂಚ ಕೊನೆಯಾಗುವ ದಿನ 2020ರ ಜೂನ್​ 21 ಆಗುತ್ತದೆ ಎಂದು ಹೇಳಿದ್ದರು. ಆದರೆ ಸಾಕಷ್ಟು ಟೀಕೆಗಳು ವ್ಯಕ್ತವಾಗಲು ಆರಂಭಿಸಿದ್ದರಿಂದ, ಅವರು ತಮ್ಮ ಸರಣಿ ಟ್ವೀಟ್​ಗಳನ್ನು ಡಿಲೀಟ್​ ಮಾಡಿದ್ದಾರೆ.

    ಮುಖ್ಯಮಂತ್ರಿ ಪುತ್ರಿ ಮದುವೆ ಸಿಪಿಐಎಂ ಮುಖಂಡ ರಿಯಾಜ್​ ಜತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts