More

    70ರ ವೃದ್ಧೆ ತನ್ನ ಶತಾಯುಷಿ ತಾಯಿಯನ್ನು ಮಂಚದ ಮೇಲಿರಿಸಿ ಬ್ಯಾಂಕ್​ಗೆ ಎಳೆದೊಯ್ದಿದ್ದು ಏಕೆ?

    ನೌಪಾರಾ (ಒಡಿಶಾ): ಬ್ಯಾಂಕ್​ ಅಧಿಕಾರಿಗಳು ಜನಧನ ಖಾತೆಯಿಂದ ಹಣ ಹಿಂಪಡೆಯಲು ಬ್ಯಾಂಕ್​ ಖಾತೆದಾರರೇ ಖುದ್ದಾಗಿ ಬ್ಯಾಂಕ್​ಗೆ ಬರಬೇಕು ಎಂದು ಸೂಚಿಸಿದ ಹಿನ್ನೆಲೆಯಲ್ಲಿ ಕೂರಲೂ ಆಗದ ತನ್ನ ಶತಾಯುಷಿ ತಾಯಿಯನ್ನು ಮಂಚದ ಮೇಲೆ ಮಲಗಿಸಿದ 70 ವರ್ಷದ ಪುತ್ರಿ, ಮಂಚವನ್ನೇ ಬ್ಯಾಂಕ್​ವರೆಗೆ ಎಳೆದೊಯ್ದಿದ್ದಾರೆ.

    ಕೋವಿಡ್​-19 ಪಿಡುಗು ಹಿನ್ನೆಲೆಯಲ್ಲಿ ಬಡವರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಗರೀಬ್​ ಕಲ್ಯಾಣ ಪ್ಯಾಕೇಜ್​ ಅಡಿ ಅವರವರ ಜನಧನ ಖಾತೆಗೆ ಏಪ್ರಿಲ್​ನಿಂದ ಜೂನ್​ವರೆಗೆ 500 ರೂ.ಗಳನ್ನು ಜಮೆ ಮಾಡಿದೆ. ಈ ಹಣವನ್ನು ಹಿಂಪಡೆಯಲು ಬ್ಯಾಂಕ್​ ಖಾತೆದಾರರೇ ಬ್ಯಾಂಕ್​ಗೆ ಖುದ್ದಾಗಿ ಹೋಗುವುದು ಕಡ್ಡಾಯವಾಗಿದೆ.

    ಈ ಯೋಜನೆಯನ್ವಯ ಒಡಿಶಾದ ನೌಪಾರಾ ಜಿಲ್ಲೆಯ ಗ್ರಾಮವೊಂದರ ನಿವಾಸಿ ಶತಾಯುಷಿ ಪೂಂಜಿಮಾತಿ ಡೇ ಎಂಬುವರ ಬ್ಯಾಂಕ್​ ಖಾತೆಗೆ ಮೂರು ತಿಂಗಳಿಂದ ಒಟ್ಟು 1,500 ರೂ. ಜಮೆಯಾಗಿತ್ತು. ಈ ಹಣವನ್ನು ಪಡೆಯಲು ಡೇ ಅವರ ಪುತ್ರಿ 70 ವರ್ಷದ ಲಾಭೆ ಬಘೇಲ್​ ಎಂಬುವರು ತಮ್ಮ ಗ್ರಾಮದಲ್ಲಿದ್ದ ಉತ್ಕಲ್​ ಗ್ರಾಮೀಣ ಬ್ಯಾಂಕ್​ನ ಶಾಖೆಗೆ ತೆರಳಿದ್ದರು. ಆದರೆ, ಹಣವನ್ನು ಹಿಂಪಡೆಯಲು ಬ್ಯಾಂಕ್​ ಖಾತೆದಾರರೇ ಬ್ಯಾಂಕ್​ಗೆ ಬರುವುದು ಕಡ್ಡಾಯವೆಂದು ಬ್ಯಾಂಕ್​ನ ಮ್ಯಾನೇಜರ್​ ಹೇಳಿದ್ದರು.

    ಇದನ್ನೂ ಓದಿ: ಮೊಟ್ಟೆಯಿಂದ ಹೊರಬಂದ ಬೀಪ್​, ಪೀಪ್​, ಮೀಪ್​!

    ಇದನ್ನು ಕೇಳಿಸಿಕೊಂಡ ಬಘೇಲ್​, ಮನೆಗೆ ಹಿಂದಿರುಗಿ ತನ್ನ ತಾಯಿ ಮಂಚದ ಮೇಲೆ ಮಲಗಿರುವಂತೆ ಬ್ಯಾಂಕ್​ವರೆಗೆ ಮಂಚವನ್ನು ಎಳೆದುಕೊಂಡು ಹೋಗಿದ್ದರು. ಬಳಿಕ 1,500 ರೂ.ಗಳನ್ನು ಹಿಂಪಡೆದು ಮನೆಗೆ ಮರಳಿದ್ದರು. ಸಾರ್ವಜನಿಕರೊಬ್ಬರು ತಮ್ಮ ಮೊಬೈಲ್​ನಲ್ಲಿ ಈ ದೃಶ್ಯವನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅದನ್ನು ಹರಿಬಿಟ್ಟಾಗ ಅದು ವೈರಲ್​ ಆಗಿದೆ.

    ಇಷ್ಟೆಲ್ಲ ಸಾಹಸದ ಅಗತ್ಯ ಇರಲಿಲ್ಲ: ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ನೌಪಾರಾದ ಜಿಲ್ಲಾಧಿಕಾರಿ ಮಧುಸ್ಮಿತಾ ಸಾಹೂ, ಈ ಬಗ್ಗೆ ವಿಚಾರಣೆ ನಡೆಸಿದೆ. ಉತ್ಕಲ ಗ್ರಾಮೀಣ ಬ್ಯಾಂಕ್​ನಲ್ಲಿ ಮ್ಯಾನೇಜರ್​ ಒಬ್ಬರೇ ಎಲ್ಲ ಕೆಲಸವನ್ನೂ ಮಾಡುತ್ತಿದ್ದಾರೆ. ಹಾಗಾಗಿ, ಬಘೇಲ್​ ಅವರು ಹೋಗಿ ಅವರ ತಾಯಿಯ ಬ್ಯಾಂಕ್​ ಖಾತೆಯಿಂದ ಹಿಂಪಡೆಯಲು ಯತ್ನಿಸಿದಾಗ, ಸ್ವತಃ ತಾವೇ ಮನೆಗೆ ಬಂದು ತಾಯಿಯನ್ನು ಮಾತನಾಡಿಸಿ ಹಣ ಕೊಡುವುದಾಗಿ ಮ್ಯಾನೇಜರ್​ ಹೇಳಿದ್ದರು. ಆದರೆ, ಬಘೇಲ ಮರುದಿನದವರೆಗೆ ಕಾಯುವ ಬದಲು ತಮ್ಮ ತಾಯಿಯನ್ನು ಮಂಚದ ಮೇಲೆ ಮಲಗಿಸಿ ಬ್ಯಾಂಕ್​ವರೆಗೆ ಎಳೆದೊಯ್ದಿರುವುದು ದೃಢಪಟ್ಟಿದೆ. ಇದರಲ್ಲಿ ಮ್ಯಾನೇಜರ್​ನ ತಪ್ಪು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಮಾವೋವಾದಿ ಚಟುವಟಿಕೆಗೆ ನೆರವು ನೀಡುತ್ತಿದ್ದ ತೆಲಂಗಾಣ ಪ್ರಜಾ ಫ್ರಂಟ್ ಉಪಾಧ್ಯಕ್ಷ ಎನ್​ಐಎ ಬಲೆಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts