More

    ಒಡಿಶಾದಲ್ಲಿ ಮತ್ತೊಮ್ಮೆ ನಡೆಯುತ್ತೆ ಪುರುಷರ ಹಾಕಿ ವಿಶ್ವಕಪ್​..!

    ಒಡಿಶಾ: ಪುರುಷರ ಹಾಕಿ ವಿಶ್ವಕಪ್ ಜನವರಿ 13 ರಂದು ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ಪ್ರಾರಂಭವಾಗಲಿದೆ. ಒಡಿಶಾ ಎರಡನೇ ಬಾರಿಗೆ ಈ ಕ್ರೀಡಾಕೂಟವನ್ನು ಆಯೋಜಿಸುತ್ತಿದೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ “ಒಡಿಶಾದಲ್ಲಿ ನಾವು ಸತತವಾಗಿ ಪುರುಷರ ಹಾಕಿ ವಿಶ್ವಕಪ್ ಅನ್ನು ಆಯೋಜಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಇಲ್ಲಿಗೆ ಎಲ್ಲರೂ ಬಂದು ಹಾಕಿಯನ್ನು ಆಚರಿಸೋಣ’ ಎಂದಿದ್ದಾರೆ.

    ಟ್ರೋಫಿಯನ್ನು ಸ್ವೀಕರಿಸಿದ ಹಾಕಿ ಇಂಡಿಯಾದ ಅಧ್ಯಕ್ಷ ದಿಲೀಪ್ ಟಿರ್ಕೆ “ಟ್ರೋಫಿ ಅಂತಿಮವಾಗಿ ಭುವನೇಶ್ವರವನ್ನು ತಲುಪಿದೆ. ನಾಳೆಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಟ್ರೋಫಿಯನ್ನು ಒಯ್ಯಲಾಗುವುದು ಯುವಕರಲ್ಲಿ ಕ್ರೀಡೆಯ ಬಗ್ಗೆ ಉತ್ಸಾಹ ಮೂಡಿಸುವುದು ನಮ್ಮ ಪ್ರಯತ್ನ ಎಂದರು. 2018ರ ಹಾಕಿ ವಿಶ್ವಕಪ್ ಒಡಿಶಾದಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ಈ ಬಾರಿಯೂ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆರವೇರಿಸಲು ಪ್ರಯತ್ನ ನಡೆಸಲಾಗುತ್ತಿದೆ” ಎಂದರು.

    ಕೋವಿಡ್19ನ ಭಯದ ಕುರಿತು ಮಾತನಾಡುತ್ತಾ, ಟಿರ್ಕಿ “ನಮಗೆ ಅದರ ಬಗ್ಗೆ ತಿಳಿದಿದೆ. ಆದರೆ ಇಲ್ಲಿಯವರೆಗೆ ಯಾವುದೇ ಮಾರ್ಗಸೂಚಿಗಳನ್ನು ರೂಪಿಸಲಾಗಿಲ್ಲ. ವಿಶ್ವಕಪ್ ಸಮಯದಲ್ಲಿ ಕೇಂದ್ರ ಮತ್ತು ಒಡಿಶಾ ಸರ್ಕಾರದ ನಿರ್ದೇಶನಗಳ ಪ್ರಕಾರ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಲಾಗುವುದು’ ಎಂದಿದ್ದಾರೆ.

    ಒಡಿಶಾ ಸರ್ಕಾರದ ಪರವಾಗಿ, ಒಡಿಶಾ ಕ್ರೀಡಾ ಮತ್ತು ಯುವಜನ ಸೇವಾ ಸಚಿವ ತುಷಾರಕಾಂತಿ ಬೆಹೆರಾ ಅವರು ಟ್ರೋಫಿ ಸ್ವೀಕರಿಸಲು ಬಿಜು ಪಟ್ನಾಯಕ್ ವಿಮಾನ ನಿಲ್ದಾಣದಲ್ಲಿ ಟಿರ್ಕಿ ಅವರೊಂದಿಗೆ ಹಾಜರಿದ್ದರು. ನಂತರ, ಟ್ರೋಫಿಯನ್ನು ಭುವನೇಶ್ವರ ಮುನ್ಸಿಪಲ್ ಕಾರ್ಪೊರೇಷನ್ (BMC) ಗೆ ಹಸ್ತಾಂತರಿಸಲಾಯಿತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts