More

    ಕ್ರೀಡೆಗಳಿಂದ ಸಾಮರಸ್ಯ ಮೂಡಲು ಸಾಧ್ಯ

    ಬಾಳೆಹೊನ್ನೂರು: ಗ್ರಾಮೀಣ ಭಾಗಗಳಲ್ಲಿ ಯುವಕರು ಒಗ್ಗೂಡಿ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ಪರಸ್ಪರ ಸಾಮರಸ್ಯ ಮೂಡಲು ಸಾಧ್ಯ ಎಂದು ಬಿ.ಕಣಬೂರು ಗ್ರಾಪಂ ಸದಸ್ಯ ಬಿ.ಜಗದೀಶ್ಚಂದ್ರ ಹೇಳಿದರು.
    ಮೆಣಸುಕೊಡಿಗೆಯ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಸ್ಥಳೀಯ ಯುವಕರು ಭಾನುವಾರ ಆಯೋಜಿಸಿದ್ದ ಅಯೋಧ್ಯೆ ಪ್ರೀಮಿಯರ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಕ್ರೀಡೆಗಳು ಯುವಕರಲ್ಲಿ ಚೈತನ್ಯ ಮೂಡಿಸಲಿದ್ದು, ದೈಹಿಕ, ಮಾನಸಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಉಪಯೋಗವಾಗಲಿದೆ. ಗ್ರಾಮೀಣ ಯುವಕರು ಒಗ್ಗೂಡಿ ಸ್ಥಳೀಯ ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆ ಒದಗಿಸುತ್ತಿರುವುದು ಶ್ಲಾಘನೀಯವಾಗಿದೆ.
    ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಸಲ್ಲಿಸಿದ ಜಗದೀಶ್ ಅರಳೀಕೊಪ್ಪ (ಕ್ರೀಡೆ), ಬಿ.ಎಸ್.ಸಚಿನ್‌ಕುಮಾರ್, ನಾಗರಾಜಭಟ್ (ಮಾಧ್ಯಮ), ಸಂಜೀವ (ಶಿಕ್ಷಣ), ಹರೀಶ್ ಆಚಾರ್ಯ (ಮರಗೆಲಸ) ಅವರನ್ನು ಸನ್ಮಾನಿಸಲಾಯಿತು. ಆಯುಷ್ ಕ್ರಿಕೆಟರ್ಸ್‌ ಚಾಂಪಿಯನ್ ಸ್ಥಾನದೊಂದಿಗೆ ನಗದು, ಟ್ರೋಫಿ ಪಡೆಯಿತು. ದಶರಥ ಕ್ರಿಕೆಟರ್ಸ್‌ ರನ್ನರ್ಸ್‌ ಸ್ಥಾನದೊಂದಿಗೆ ಟ್ರೋಫಿ ನಗದು ಪಡೆಯಿತು.
    ಕ್ರೀಡಾಕೂಟದ ಆಯೋಜಕ ರಕ್ಷಿತ್ ಸಮುತ್ಕರ್ಷ, ಸಂದೀಪ್, ಸುಧಾಕರ್, ಭಗತ್ ಸಿಂಗ್ ಯುವಕ ಸಂಘದ ಅಧ್ಯಕ್ಷ ಕಷ್ಣಪ್ಪ, ಗ್ರಾಮದ ಪ್ರಮುಖರಾದ ಸುಲೋಚನಾ, ಜೆಸ್ಸಿ ಲೋಬೋ, ವಿಶಾಲಕ್ಷಿ, ತೀರ್ಪುಗಾರ ಅಸ್ಲಾಂ, ಸುದರ್ಶನ್, ಸುರೇಶ್, ರೋಹನ್ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts