ಎಲೋನ್​ ಮಸ್ಕ್​​ ಮುಂದೊಂದು ದಿನ ಅಮೆರಿಕಾ ಅಧ್ಯಕ್ಷರಾಗುತ್ತಾರೆಯೇ? ಶಾಕಿಂಗ್​ ಉತ್ತರ ಕೊಟ್ಟ Donald Trump

dk (7) (1)
Published on

ಅಮೆರಿಕಾ: ವಿಶ್ವದ ದಿಗ್ಗಜ ಉದ್ಯಮಿಗಳಲ್ಲಿ ಒಬ್ಬರಾದ ಎಲೋನ್​ ಮಸ್ಕ್​​ ಮುಂದೊಂದು ದಿನ ಅಮೆರಿಕಾದ ಅಧ್ಯಕ್ಷರಾಗುತ್ತಾರೆಯೇ ಎಂಬ ವಿಮರ್ಶಾತ್ಮಕ ಟೀಕೆಗಳು ಬೆನ್ನಲ್ಲೇ ನಿಯೋಜಿತ ಅಧ್ಯಕ್ಷ ಡೊನಲ್ಡ್​ ಟ್ರಂಪ್​(Donald Trump) ಟೀಕೆಗನ್ನು ತಳ್ಳಿ ಹಾಕಿದ್ದಾರೆ.

ಹೌದು, ಡೆಮಾಕ್ರಟಿಕ್​ ಪಕ್ಷ ಡೊನಲ್ಡ್​ನ ಟ್ರಂಪ್​ ಬೆಂಬಲಿತ ಬಿಲೆನಿಯರ್​ ಎಲೋನ್​ ಮಸ್ಕ್​ 'ಅಮೆರಿಕಾ ಅಧ್ಯಕ್ಷ' ಮಸ್ಕ್​​ಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿದ್ದಾರೆ ಎಂಬ ಚಿತ್ರವನ್ನು ಚಿತ್ರಿಕರಿಸಿ ಟೀಕೆ ಮಾಡಿತ್ತು. ಸಂದರ್ಶನದಲ್ಲಿ ಇದಕ್ಕೆ ಉತ್ತರ ಕೊಟ್ಟ ಟ್ರಂಪ್​ ಇದು ಕಾಲ್ಪನಿಕ ಅವರು ಯಾವತ್ತು ಅಮೆರಿಕಾ ಅಧ್ಯಕ್ಷರಾಗುವುದಿಲ್ಲ ಎಂದು ಹೇಳಿದ್ದಾರೆ.

ಯುಸ್​​ ಅಧ್ಯಕ್ಷರಾಗಲು ಸ್ವಾಭಾವಿಕವಾಗಿ ಅಮೆರಿಕಾದಲ್ಲಿಯೇ ಜನಿಸಿರಬೇಕು. ಇಲ್ಲಿನ ನಾಗರೀಕರಾಗಿರಬೇಕು ಎಂದು ನಮ್ಮ ಸಂವಿಧಾನ ಹೇಳಿದೆ. ಅಲ್ಲದೆ, ಮಸ್ಕ್​​​ ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ್ದಾರೆ. ಹೀಗಾಗಿ, ಅವರು ಎಂದಿಗೂ ಅಮೆರಿಕಾಕ್ಕೆ ಅಧ್ಯಕ್ಷರಾಗಲು ಸಾಧ್ಯವಿಲ್ಲ ಎಂದು ಹೇಳಿದ ಟ್ರಂಪ್,​ ನಾನು ಸುರಕ್ಷಿತವಾಗಿದ್ದೇನೆ ಎಂದು ಹೇಳಿದ್ದಾರೆ.

ಒಂದು ಕಾಲದಲ್ಲಿ ಟ್ರಂಪ್​ ಅನ್ನು ಬಹಿರಂಗವಾಗಿ ಟೀಕಿಸುತ್ತಿದ್ದ ಎಲೋನ್​ ಮಸ್ಕ್​ ಇಂದು ಟ್ರಂಪ್​ನ ದೊಡ್ಡ ಬೆಂಬಲಿಗರಾಗಿ ಹೊರಹೊಮ್ಮಿದ್ದಾರೆ. ಈ ಹಿಂದೆ ರಿಪ್ಲಬಿಕ್​ ಪ್ರತಿಸ್ಪರ್ಧಿಗಳಾದ 2016 ರಲ್ಲಿ ಹಿಲರಿ ಕ್ಲಿಂಟನ್​ ಮತ್ತು 2020ರಲ್ಲಿ ಜೋ ಬಿಡೆನ್ ಅವರನ್ನು ಬೆಂಬಲಿಸಿದ್ದರು,(ಏಜೆನ್ಸೀಸ್​). ​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net