

Chickens : ಅಬ್ಬಬ್ಬಾ ಅಂದರೆ ಕೋಳಿಗಳ ಬೆಲೆ ಎಷ್ಟಿರಬಹುದು? 300 ಅಥವಾ 400 ರೂಪಾಯಿ ಇರಬಹುದು. ಕಡಕ್ನಾಥ್ ಕೋಳಿ 1000 ರೂ.ಗಿಂತಲೂ ಹೆಚ್ಚಿದೆ. ಆದರೆ, ಚಿನ್ನದ ಬೆಲೆಗಿಂತ ದುಬಾರಿಯಾಗಿರುವ ಕೋಳಿಗಳ ಬಗ್ಗೆ ನಿಮಗೆ ಗೊತ್ತಿದೆಯೇ? ಈ ಕೋಳಿಗಳನ್ನು ಖರೀದಿ ಮಾಡಬೇಕೆಂದರೆ ನಿಮ್ಮ ಬಳಿ ಬೇಕಾದಷ್ಟು ಹಣವಿರಬೇಕು. ಆ ದುಬಾರಿ ಕೋಳಿಗಳು ಯಾವುವು ಎಂಬುದನ್ನು ನಾವೀಗ ತಿಳಿಯೋಣ.
ಅಯಾಮ್ ಸೆಮಾನಿ ಕೋಳಿಯು ಇಂಡೋನೇಷ್ಯಾದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದನ್ನು ಕೋಳಿಯ ವಿಲಕ್ಷಣ ತಳಿ ಎಂದೇ ಪರಿಗಣಿಸಲಾಗಿದೆ. ಈ ಕೋಳಿಯ ಚರ್ಮ, ಅಂಗಗಳು ಮತ್ತು ಮೂಳೆಗಳು ಕಪ್ಪು ಬಣ್ಣದಲ್ಲಿವೆ. ಆರೋಗ್ಯವಂತ ಗಂಡು ಮತ್ತು ಹೆಣ್ಣು ಕೋಳಿಗೆ ಕನಿಷ್ಠ 5,000 ಡಾಲರ್ ( 4,25,214 ರೂಪಾಯಿ) ವೆಚ್ಚವಾಗಬಹುದು. ಇದನ್ನು ಇಂಡೋನೇಷಿಯನ್ ಕಪ್ಪು ಕೋಳಿ ಎಂದೂ ಕರೆಯುತ್ತಾರೆ. ಆಂತರಿಕ ಅಂಗಗಳು ಕೂಡ ಕಪ್ಪು ಬಣ್ಣದ್ದಾಗಿರುವುದು ಇದರ ದೊಡ್ಡ ವೈಶಿಷ್ಟ್ಯ. ಆದರೆ, ಈ ಕೋಳಿಗಳ ಮೊಟ್ಟೆಗಳು ಸಾಮಾನ್ಯ ಕೋಳಿಯಂತೆ ಬಿಳಿ ಬಣ್ಣದಲ್ಲಿರುತ್ತವೆ.
ಈ ಡಾಂಗ್ ಟಾವೊ ಚಿಕನ್ಗೆ ಇನ್ನೊಂದು ಹೆಸರಿದೆ. ಅದೇನೆಂದರೆ, ಡ್ರ್ಯಾಗನ್ ಚಿಕನ್. ಇದು ವಿಯೆಟ್ನಾಂನಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ಕೋಳಿಯ ಕಾಲುಗಳ ಉದ್ದ ಮತ್ತು ಅಗಲವು ಇತರ ಕೋಳಿಗಳಿಗಿಂತ ಭಿನ್ನವಾಗಿದೆ. ಈ ಕೋಳಿಯ ಕಾಲುಗಳ ಗಾತ್ರವು ವಯಸ್ಸಾದಂತೆ ಹೆಚ್ಚಾಗುತ್ತದೆ. ಇದು ಮಾಂಸದ ಕಾರಣಕ್ಕಾಗಿ ಉತ್ತಮ ಬೆಲೆ ಹೊಂದಿದೆ. ಇದು ಕಡಿಮೆ ಕೊಬ್ಬಿನಾಂಶ ಮತ್ತು ಹೆಚ್ಚಿನ ಕಾಲಜನ್ ಅನ್ನು ಹೊಂದಿರುತ್ತದೆ. ಈ ಕೋಳಿಯನ್ನು ಖರೀದಿ ಮಾಡಲು ನೀವು ಎರಡು ಸಾವಿರ ಡಾಲರ್ ( 1,70,085 ರೂಪಾಯಿ) ವರೆಗೆ ಪಾವತಿಸಬೇಕಾಗುತ್ತದೆ. ಅಂದವನ್ನು ಹೆಚ್ಚಿಸಲು ಈ ಕೋಳಿ ಮಾಂಸ ಒಳ್ಳೆಯದು ಎಂದು ಹೇಳಲಾಗುತ್ತದೆ.
ಈ ಕೋಳಿಯು ಜರ್ಮನ್ ತಳಿಯಾಗಿದೆ. ಇದು ತುಂಬಾ ಅಪರೂಪದ ಕೋಳಿಯಾಗಿದ್ದು, ತುಂಬಾ ದುಬಾರಿಯಾಗಿದೆ. ಈ ಕೋಳಿಗಳು ನೋಡಲು ಕೂಡ ಸುಂದರವಾಗಿವೆ.
ಇದು ಅತ್ಯಂತ ಬಲಿಷ್ಠವಾಗಿದೆ. ಗಾತ್ರದಲ್ಲೂ ಮುಂದಿದೆ. ಇದನ್ನು ಆಕ್ರಮಣಕಾರಿ ಕೋಳಿ ಎಂದೇ ಪರಿಗಣಿಸಲಾಗುತ್ತದೆ. ಪ್ರಾಚೀನ ಕಾಲದಿಂದಲೂ ಈ ತಳಿಗಳನ್ನು ಕೋಳಿಗಳ ಕಾಳಗಕ್ಕೆ ಬಳಸಲಾಗುತ್ತಿತ್ತು.
ಈ ಕೋಳಿಯನ್ನ ಇತ್ತೀಚಿನ ದಿನಗಳಲ್ಲಿ ಕಂಡುಹಿಡಿಯುವುದು ಅಸಾಧ್ಯವೆಂದು ಹೇಳಲಾಗಿದೆ. ಇದು ಸ್ಕ್ಯಾಂಡಿನೇವಿಯನ್ ಕೋಳಿ. ಇದರ ತಾಯ್ನಾಡು ಸ್ವೀಡಿಷ್ ದ್ವೀಪವಾಗಿದೆ.
ಇದು ಸಹ ಸ್ವೀಡಿಷ್ ಕೋಳಿ. ಇದು ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಇದು ದೊಡ್ಡ ಧ್ವನಿಯನ್ನು ಹೊಂದಿದೆ.