

Murder Case: ಗಂಡನ ಜತೆಗಿನ ದಾಂಪತ್ಯ ಸಂಬಂಧಕ್ಕಿಂತ ಅನ್ಯ ವ್ಯಕ್ತಿಯೊಂದಿಗಿನ ಅನೈತಿಕ ಸಂಬಂಧವೇ ಸುಖ ಎಂದು ಭಾವಿಸಿದ ಪತ್ನಿ, ಪತಿಯೇ ಇಲ್ಲದಿದ್ದರೆ ತನ್ನ ಮುಂದಿನ ಕೆಲಸಗಳು ಬಹಳ ಸುಗಮ ಎಂದು ಭಾವಿಸಿ ಭೀಕರವಾಗಿ ಹತ್ಯೆಗೈದ ಘಟನೆ ತೆಲಂಗಾಣದ ನಿಜಾಮಾಬಾದ್ನಲ್ಲಿ ವರದಿಯಾಗಿದೆ.
ಅನೈತಿಕ ಸಂಬಂಧದ ಬಗ್ಗೆ ಪತಿಗೆ ಗೊತ್ತಾಗಿದ್ದೇ ತಡ ಗಂಡನೊಂದಿಗೆ ಜಗಳಕ್ಕಿಳಿದ ಆರೋಪಿ ಪತ್ನಿ ಕಾಶವ್ವ, ಪ್ರಿಯಕರನ ಜತೆಗೂಡಿ ಪತಿಯನ್ನು ಮುಗಿಸುವ ಸಂಚು ಹೂಡಿದ್ದಳು. ಅದರಂತೆಯೇ ಬನ್ಸ್ವಾಡ ಮಂಡಲದ ನಾಗರಂ ಗ್ರಾಮದ ಪತಿ ಅಮೃತಂ ವಿಠ್ಠಲ್ಗೆ ಹೊಲದಲ್ಲಿ ಮದ್ಯ ಕುಡಿಸಿ, ಟವಲ್ನಿಂದ ಕತ್ತು ಹಿಸುಕಿ, ತಲೆಗೆ ಪೈಪ್ನಿಂದ ಹೊಡೆದು ಹತ್ಯೆಗೈದಿದ್ದಾರೆ.
ಮೇಸ್ತ್ರಿ ಕೆಲಸ ಮಾಡಿಕೊಂಡು ಸಾಧಾರಣ ಜೀವನ ಸಾಗಿಸುತ್ತಿದ್ದ ಮೃತ ವಿಠಲ್ಗೆ ಮೂವರು ಹೆಣ್ಣು ಮಕ್ಕಳು. ಅವರಲ್ಲಿ ಒಬ್ಬಳು ವಿವಾಹಿತಳು. ವಿಠ್ಠಲ್ ಪತ್ನಿ ಕಾಶವ್ವ ನಾಗರಂ ಗ್ರಾಮದ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಈ ವಿಷಯವಾಗಿ ದಂಪತಿಗಳ ನಡುವೆ ಹಲವು ಬಾರಿ ಜಟಾಪಟಿ ನಡೆದಿತ್ತು ಎಂಬುದು ತನಿಖೆಯಲ್ಲಿ ಬಯಲಾಗಿದೆ.
ಇದನ್ನೂ ಓದಿ: ಹಡಗಲಿಯಲ್ಲಿ ಜಾಗ ಸ್ವಚ್ಛಗೊಳಿಸಿ ಫಲಾನುಭವಿಗಳ ಪ್ರತಿಭಟನೆ
ಶುಕ್ರವಾರ (ಮಾ.28) ರಾತ್ರಿ ವಿಠ್ಠಲ್ನನ್ನು ಜಮೀನಿಗೆ ಕರೆದೊಯ್ದು, ಮದ್ಯ ಕುಡಿಸಿ, ಕುತ್ತಿಗೆಗೆ ಟವಲ್ ಕಟ್ಟಿ, ಪೈಪ್ನಿಂದ ಬಲವಾಗಿ ಹೊಡೆದು ಕೊಂದಿದ್ದಾರೆ. ಬಳಿಕ ವಿಠ್ಠಲ್ನ ಮೃತದೇಹವನ್ನು ಕೊಲ್ಲೂರು ಸಬ್ ಸ್ಟೇಷನ್ ಬಳಿಯ ಬನ್ಸ್ವಾಡ-ಬಿರ್ಕೂರು ಮುಖ್ಯ ರಸ್ತೆ ಪಕ್ಕದಲ್ಲಿ ಎಸೆದು ಪರಾರಿಯಾಗಿದ್ದರು. ಮೃತನ ಸಹೋದರ ಬಿಂಗಿ ಸಾಯಿ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮೃತನ ಪತ್ನಿ ಕಾಶವ್ವ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ,(ಏಜೆನ್ಸೀಸ್).