

MI vs KKR: ಇಂದು (ಮಾ.31) ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 18ನೇ ಆವೃತ್ತಿಯ 12ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿ ಸೆಣಸಾಡುತ್ತಿವೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಎಂಐ, ತಾನು ಅಂದುಕೊಂಡಂತೆ ಎದುರಾಳಿ ತಂಡದ ಬ್ಯಾಟರ್ಗಳ ಬೆವರಿಳಿಸುವಲ್ಲಿ ಯಶಸ್ವಿಯಾಗಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಹಾರ್ದಿಕ್ ಪಾಂಡ್ಯ, ಕೆಕೆಆರ್ಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿದರು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೋಲ್ಕತ ಪಡೆ, ಕೇವಲ 116 ರನ್ಗೆ ಆಲೌಔಟ್ ಆಗಿದೆ. ಇದು ಈ ಬಾರಿ ಐಪಿಎಲ್ನ ಅತ್ಯಂತ ಕಡಿಮೆ ರನ್ಸ್ಕೋರ್ ಎಂಬ ಪಟ್ಟಿಗೆ ಸೇರಿಕೊಂಡಿದೆ.
ಕೆಕೆಆರ್ ಪರ ಕಣಕ್ಕಿಳಿದ ಆರಂಭಿಕ ಬ್ಯಾಟರ್ಗಳೇ ಶೀಘ್ರವೇ ವಿಕೆಟ್ ಒಪ್ಪಿಸಿ, ಪೆವಿಲಿಯನ್ ಹಾದಿ ಹಿಡಿದರು. ಇದೇ ಹಾದಿಯಲ್ಲಿ ಸಾಗಿದ ಉಳಿದ ಬ್ಯಾಟರ್ಗಳು, ಹೆಚ್ಚು ಕಾಲ ಕ್ರೀಸ್ಗೆ ನಿಲ್ಲದೇ ಒಬ್ಬರಂತೆ ಮತ್ತೊಬ್ಬರು ವಿಕೆಟ್ ಕಳೆದುಕೊಂಡರು. ಇನ್ನು ಮುಂಬೈ ಬೌಲರ್ ಅಶ್ವನಿ ಕುಮಾರ್, 3 ಓವರ್ಗೆ ಕೇವಲ 24 ರನ್ ಕೊಟ್ಟು, ಬರೋಬ್ಬರಿ 4 ವಿಕೆಟ್ಗಳನ್ನು ಪಡೆದು ತಂಡದ ಪರ ಮಿಂಚಿದರು.