ಪತ್ನಿ ನಿಧನ; ಮಾನಸಿಕ ಖಿನ್ನತೆಗೊಳಗಾಗಿ, ಇಬ್ಬರು ಅಪ್ರಾಪ್ತ ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ| Suicide

Untitled design - 2025-09-26T143549.250
Published on

Suicide: ಹರಿಯಾಣದ ಬಲ್ಲಬ್‌ಗಢ ಸೆಕ್ಟರ್ 8ರಲ್ಲಿ ಎರಡು ತಿಂಗಳ ಹಿಂದೆ ಪತ್ನಿ ಹೆರಿಗೆ ಸಮಯದಲ್ಲಿ ನಿಧನ ಮೃತಪಟ್ಟಿದ್ದರಿಂದ ಮಾನಸಿಕ ಖಿನ್ನತೆಗೊಳಗಾಗಿದ್ದ 30 ವರ್ಷದ ವ್ಯಕ್ತಿಯೊಬ್ಬ ತನ್ನ ಇಬ್ಬರು ಅಪ್ರಾಪ್ತ ಪುತ್ರಿಯರನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶುಕ್ರವಾರ(ಸೆ.26) ವರದಿಯಾಗಿದೆ.

ಮೃತರನ್ನು ನಿಖಿಲ್ ಗೋಸ್ವಾಮಿ ಎಂದು ಗುರುತಿಸಲಾಗಿದೆ. ಎರಡು ವರ್ಷದ ಸಿದ್ಧಿ ಮತ್ತು ನವಜಾತ ಶಿಶು ರಿದ್ಧಿ ಹೆಣ್ಣು ಆತ್ಮಹತ್ಯೆಗೆ ಮುನ್ನ ಕೊಲೆಯಾಗಿರುವ ಮಕ್ಕಳು. ಗುರುವಾರ ಸಂಜೆ ನಿಖಿಲ್ ತನ್ನ ಎರಡು ಹೆಣ್ಣುಮಕ್ಕಳನ್ನು ಕೊಂದು ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿದ್ದಾನೆ. ಬಳಿಕ ಮತ್ತೊಂದು ಕೋಣೆಯಲ್ಲಿ ತಾನೂ ನೇಣುಬಿಗಿದುಕೊಂಡಿದ್ದಾನೆ ಎಂದು ವರದಿಗಳು ಉಲ್ಲೇಖಿಸಿವೆ.

ರಾತ್ರಿ ಮೃತ ನಿಖಿಲ್ ತಂದೆ ಉದಯ್ ಶಂಕರ್ ಮನೆಗೆ ಹಿಂತಿರುಗಿದಾಗ ವಿಚಾರ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಈ ಕುರಿತು ಪೊಲೀಸ್ ಅಧಿಕಾರಿ ಯಶ್ಪಾಲ್ ಸಿಂಗ್ ಮಾಹಿತಿ ನೀಡಿದ್ದು, ಮೃತ ನಿಖಿಲ್ ಗೋಸ್ವಾಮಿ ಖಾಸಗಿ ಕಂಪನಿಯಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು. 2019 ರಲ್ಲಿ ಪೂಜಾಳನ್ನು ವಿವಾಹವಾಗಿದ್ದರು.  ಅವರಿಗೆ ಎರಡು ವರ್ಷದ ಸಿದ್ಧಿ ಮತ್ತು ನವಜಾತ ಶಿಶು ರಿದ್ಧಿ ಹೆಣ್ಣು ಮಕ್ಕಳಿದ್ದರು.  ಘಟನಾ ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net