ಪತ್ನಿ ಲೈಂಗಿಕ ಸಂಬಂಧ ನಿರಾಕರಿಸಿದರೆ ಪತಿ ವಿಚ್ಛೇದನಕ್ಕೆ ಅರ್ಹ: ಮಧ್ಯ ಪ್ರದೇಶ ಹೈಕೋರ್ಟ್

law
Published on

ನವದೆಹಲಿ: ಪತಿಯೊಂದಿಗೆ ಪತ್ನಿ ಲೈಂಗಿಕ ಸಂಬಂಧವನ್ನು ನಿರಾಕರಿಸುವಂತಿಲ್ಲ. ಇದು ಮಾನಸಿಕ ಕ್ರೌರ್ಯಕ್ಕೆ ಸಮನಾಗಿದ್ದು, ಇದೇ ಆಧಾರದ ಮೇಲೆ ಪತಿ ವಿಚ್ಛೇದನ ಪಡೆಯಲು ಅರ್ಹನಾಗಿರುತ್ತಾನೆ ಎಂದು ಮಧ್ಯ ಪ್ರದೇಶ ಹೈಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ಶೀಲ್ ನಾಗ್ ಮತ್ತು ವಿನಯ್ ಸರಾಫ್ ಅವರಿದ್ದ ಪೀಠವು ಈ ಪ್ರಕರಣದಲ್ಲಿ ಭೋಪಾಲ್ ಕೌಟುಂಬಿಕ ನ್ಯಾಯಾಲಯವು ನೀಡಿದ್ದ ತೀರ್ಪನ್ನು ತಿರಸ್ಕರಿಸಿ, ಅರ್ಜಿದಾರನಿಗೆ ವಿಚ್ಚೇದನ ಪಡೆಯಲು ಅವಕಾಶ ನೀಡಿದೆ.

ಪತ್ನಿ ತನ್ನೊಂದಿಗೆ ಲೈಂಗಿಕ ಸಂಬಂಧವನ್ನು ನಿರಾಕರಿಸುತ್ತಿದ್ದು, ಇದರಿಂದಾಗಿ ಮಾನಸಿಕವಾಗಿ ಕುಗ್ಗಿಹೋಗುತ್ತಿದ್ದೇನೆ. ಎಂದು ವಾದಿಸಿದ ವ್ಯಕ್ತಿಗೆ ವಿಚ್ಛೇದನ ನೀಡಲು ನಿರಾಕರಿಸಿದ ಭೋಪಾಲ್ ಕೌಟುಂಬಿಕ ನ್ಯಾಯಾಲಯದ ನೀಡಿದ ತೀರ್ಪನ್ನು ಜಸ್ಟಿಸ್ ಶೀಲ್ ನಾಗು ಮತ್ತು ವಿನಯ್ ಸರಾಫ್ ಅವರ ವಿಭಾಗೀಯ ಪೀಠವು ರದ್ದುಗೊಳಿಸಿತು.

ಮದುವೆ ಅಥವಾ ದೈಹಿಕ ಅನ್ಯೋನ್ಯತೆಯ ಅನುಪಸ್ಥಿತಿಯ ಬಗ್ಗೆ ವಿಚಾರಣಾ ನ್ಯಾಯಾಲಯ ತಿಳಿಸಿದ ಸಂಗತಿಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿಚಾರಣಾ ನ್ಯಾಯಾಲಯವು ಹೆಂಡತಿಯ ಕಡೆಯಿಂದ ಲೈಂಗಿಕ ಸಂಬಂಧವನ್ನು ಪೂರೈಸುವಲ್ಲಿ ವಿಫಲವಾದರೆ ವಿಚ್ಛೇದನಕ್ಕೆ ಕಾರಣವಾಗುವುದಿಲ್ಲ ಎಂದು ತಪ್ಪಾಗಿ ಅಭಿಪ್ರಾಯಪಟ್ಟಿದೆ ಎಂದು ತನ್ನ ಆದೇಶದಲ್ಲಿ ಹೈಕೋರ್ಟ್ ಹೇಳಿದೆ.

2006ರ ಜುಲೈ 12ರಂದು ಮದುವೆಯ ದಿನಾಂಕದಿಂದ 2006 ಜುಲೈ 28ರವರೆಗೂ ಪತಿ ಭಾರತವನ್ನು ತೊರೆಯುವವರೆಗೂ ಪತ್ನಿ ಲೈಂಗಿಕ ಸಂಬಂಧವನ್ನು ನಿರಾಕರಿಸಿದ್ದಾರೆ ಎಂಬುದನ್ನು ಹೈಕೋರ್ಟ್ ಗಮನಿಸಿದೆ.

ಅರ್ಜಿದಾರರು ಮದುವೆ ಸಂಬಂಧವನ್ನು ಪೂರೈಸಲು ಸಿದ್ಧವಾಗಿದ್ದರು. ಆದರೆ ಪತ್ನಿ ಅದನ್ನು ನಿರಾಕರಿಸಿದರು ಮತ್ತು ಖಂಡಿತವಾಗಿಯೂ ಪ್ರತಿವಾದಿಯ ಹೇಳಿಕೆಯು ಮಾನಸಿಕ ಕ್ರೌರ್ಯಕ್ಕೆ ಸಮಾನವಾಗಿದೆ. ವೈವಾಹಿಕ ವಿಷಯಗಳಲ್ಲಿ ಮಾನಸಿಕ ಕ್ರೌರ್ಯವನ್ನು ನಿರ್ಧರಿಸಲು ಯಾವುದೇ ನೇರವಾದ ಸೂತ್ರ ಅಥವಾ ಸ್ಥಿರ ಮೌಲ್ಯಮಾಪನಗಳು ಎಂದಿಗೂ ಇರಬಾರದು ಮತ್ತು ಪ್ರಕರಣವನ್ನು ನಿರ್ಣಯಿಸಲು ಸೂಕ್ತವಾದ ಮಾರ್ಗವೆಂದರೆ ಅದರ ವಿಶಿಷ್ಟ ಸಂಗತಿಗಳ ಮೇಲೆ ಮೌಲ್ಯಮಾಪನ ಮಾಡುವುದು ಎಂದು ನ್ಯಾಯಾಲಯ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net