More

    ಖಾಸಗಿ ಬ್ಯಾಂಕ್​ನಲ್ಲಿ 5ಸಾವಿರ ರೂ. ಚೆಕ್ ಡೆಪಾಸಿಟ್ ಮಾಡಿ 1 ಲಕ್ಷ ರೂ. ಕಳೆದುಕೊಂಡ ಮಹಿಳೆ! 

    ಬೆಂಗಳೂರು: ಖಾಸಗಿ ಬ್ಯಾಂಕ್ ನಲ್ಲಿ 5ಸಾವಿರ ರೂ. ಚೆಕ್ ಡೆಪಾಸಿಟ್ ಮಾಡಿದ ಮಹಿಳೆಯೊಬ್ಬರು ಒಂದು ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಚೆಕ್ ನ್ನು ಮಾನ್ಯ ಮಾಡದಿದ್ದಾಗ ಮಹಿಳೆ ಬ್ಯಾಂಕ್ ಸಂಪರ್ಕಿಸಿದ್ದು, ಚೆಕ್ ನಲ್ಲಿ ತನ್ನ ಹೆಸರನ್ನು ತಪ್ಪಾಗಿ ಬರೆದಿದ್ದರಿಂದ ಅವರ ವಿಳಾಸಕ್ಕೆ ಕೊರಿಯರ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

    ಇದನ್ನೂ ಓದಿ: ಲಾಟರಿಯಲ್ಲಿ ​75 ಲಕ್ಷ ರೂ. ಗೆದ್ದ ವಲಸೆ ಕಾರ್ಮಿಕ.. ಹೆದರಿ ಪೊಲೀಸರ ಆಶ್ರಯ ಪಡೆದ!

    ನಂತರ ಕೊರಿಯರ್ ಪತ್ತೆಗಾಗಿ ಇಂಟರ್ ನೆಟ್ ನಲ್ಲಿ ಆಕೆ ಹುಡುಕಾಡಿದ್ದು, ಕೊರಿಯರ್ ಕಂಪನಿಯ ನಕಲಿ ನಂಬರ್ ಸಿಕ್ಕಿದೆ. ಆ ನಂಬರ್ ಗೆ ಕರೆ ಮಾಡಿದ ನಂತರ ಸೈಬರ್ ವಂಚಕರ ಸೂಚನೆಗಳಂತೆ ಆಕೆ 1 ಲಕ್ಷ ರೂ. ಕಳೆದುಕೊಂಡಿದ್ದಾರೆ.

    ಹೊಂಗಸಂದ್ರ ಮುಖ್ಯರಸ್ತೆ ನಿವಾಸಿ ಎಂ.ಎಸ್.ಸ್ಮಿತಾ ಹಣ ಕಳೆದುಕೊಂಡವರು. ಜ.5 ಮತ್ತು 6 ರ ನಡುವೆ ಘಟನೆ ನಡೆದಿದ್ದು, ಈ ಸಂಬಂಧ ಸೋಮವಾರ ಬೇಗೂರು ಪೊಲೀಸರಿಗೆ ದೂರು ನೀಡಲಾಗಿದೆ. ಸ್ಮಿತಾ ಉಳಿತಾಯ ಖಾತೆ ಹೊಂದಿರುವ ಖಾಸಗಿ ಬ್ಯಾಂಕ್‌ನಲ್ಲಿ ಜ.3 ರಂದು ಚೆಕ್ ಜಮೆ ಮಾಡಿದ್ದರು. ಆ ಸಂದರ್ಭದಲ್ಲಿ ಬೇರೊಬ್ಬ ವ್ಯಕ್ತಿಗೆ ನೀಡಿದ ಚೆಕ್‌ನಲ್ಲಿ ತನ್ನ ಹೆಸರು ತಪ್ಪಾಗಿ ಬರೆದಿರುವುದು ಆಕೆಯ ಗಮನಕ್ಕೆ ಬಂದಿರಲಿಲ್ಲ.

    ಹೆಸರಿನಲ್ಲಿರುವ ತಪ್ಪಿನಿಂದಾಗಿ ಬ್ಯಾಂಕ್ ಆಕೆಯ ವಿಳಾಸಕ್ಕೆ ಚೆಕ್ ಅನ್ನು ಕೊರಿಯರ್ ಮಾಡಿದೆ. ಕೊರಿಯರ್ ಗಾಗಿ ಇಂಟರ್ ನೆಟ್ ನಲ್ಲಿ ಹುಡುಕಾಡಿದಾಗ ಕಸ್ಟಮರ್ ಕೇರ್ ಸಂಖ್ಯೆ ಎಂದು ಹೇಳುವ ಸಂಖ್ಯೆಗೆ ಕರೆ ಮಾಡಿದ್ದಾರೆ. ಈ ನಂಬರ್ ನಿಜವಾದ ಕಂಪನಿಯಂತೆ ನಟಿಸಿ ಮೋಸ ಮಾಡಲಾಗಿದೆ. ಆ ನಂಬರ್‌ಗೆ ಕರೆ ಮಾಡಿದಾಗ ಆಕೆಯ ಖಾತೆಯಿಂದ ಎರಡು ರೂಪಾಯಿ ಡೆಬಿಟ್ ಆಗಿದೆ. ಇದನ್ನು ಮಹಿಳೆ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.

    ಆರಂಭದಲ್ಲಿ ಅವರ ಖಾತೆಯಿಂದ ಎರಡು ರೂ. ಕಡಿತಗೊಳಿಸಲಾಗುತ್ತದೆ ಎಂದು ತಿಳಿಸಲಾಗಿತ್ತು. ಆದರೆ, ಮರುದಿನ ನೆಟ್ ಬ್ಯಾಂಕಿಂಗ್ ಪರಿಶೀಲಿಸಿದಾಗ ಖಾತೆಯಿಂದ ಒಂದು ಲಕ್ಷ ರೂ.ಡೆಬಿಟ್ ಆಗಿದೆ. ಕೂಡಲೇ ಆ ನಂಬರ್ ಗೆ ಡಯಲ್ ಮಾಡಿದಾಗ ಅದೇ ಅಸಲಿ ನಂಬರ್ ಎಂಬುದಾಗಿ ಖಚಿತಪಡಿಸಲಾಯಿತು. ಹಿಂದಿಯಲ್ಲಿ ಮಾತನಾಡಿದ ವಂಚಕ ಯಾವುದೇ ಅನುಮಾನ ಬಾರದಂತೆ ವ್ಯವಹರಿಸಿದ್ದಾನೆ ಎಂದು ಎಂದು ಸ್ಮಿತಾ ತಿಳಿಸಿದರು. ವಂಚಕರ ವಿರುದ್ಧ 2000ರ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

    ಭಾರತದ ಅತಿ ಉದ್ದದ ಸಮುದ್ರ ಸೇತುವೆ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ: ಗೋದಾವರಿ ದಡದ ರಾಮಂದಿರಕ್ಕೆ ಭೇಟಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts