More

    ಲಾಟರಿಯಲ್ಲಿ ​75 ಲಕ್ಷ ರೂ. ಗೆದ್ದ ವಲಸೆ ಕಾರ್ಮಿಕ.. ಹೆದರಿ ಪೊಲೀಸರ ಆಶ್ರಯ ಪಡೆದ!

    ತಿರುವನಂತಪುರಂ: ವಲಸೆ ಕಾರ್ಮಿಕನೊಬ್ಬನಿಗೆ ಕೇರಳ ಲಾಟರಿಯಲ್ಲಿ 75 ಲಕ್ಷ ರೂ.ಬಹುಮಾನ ಬಂದಿದ್ದು, ಯಾರಾದರೂ ಲಾಟರಿ ಟಿಕೆಟ್ ಕದಿಯಬಹುದೆಂಬ ಭಯದಿಂದ ಪೊಲೀಸ್ ಠಾಣೆ ಆಶ್ರಯಿಸಿದ್ದಾನೆ. ಮನೆಯಿಂದ ಬ್ಯಾಂಕ್​ಗೆ ತೆರಳಿ ಲಾಟರಿ ಟಿಕೆಟ್​ ಅನ್ನು ಬ್ಯಾಂಕ್‌ಗೆ ಜಮೆ ಮಾಡಲು ಪೊಲೀಸ್ ರಕ್ಷಣೆ ನೀಡುವಂತೆ ಕೋರಿದ್ದಾನೆ. ಪೊಲೀಸರು ಆತನ ಭಯವನ್ನು ಅರ್ಥಮಾಡಿಕೊಂಡು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

    ಇದನ್ನೂ ಓದಿ: ‘ಚುನಾವಣೆಗಾಗಿ ಅಪೂರ್ಣ ರಾಮಮಂದಿರ ಲೋಕಾರ್ಪಣೆ’: ಕಾಂಗ್ರೆಸ್​ ಟೀಕೆ

    ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕ ಅಶೋಕ್ ಕೆಲವು ತಿಂಗಳ ಹಿಂದೆ ಕೇರಳಕ್ಕೆ ಬಂದಿದ್ದ. ಆತ ಮಲಪ್ಪುರಂ ಜಿಲ್ಲೆಯ ಪೆರಿಂತಲ್ಮನ್ನಾ ಪ್ರದೇಶದಲ್ಲಿ ಇತರ ಕಾರ್ಮಿಕರೊಂದಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಕೆಲ ತಿಂಗಳ ಹಿಂದೆ ಕೇರಳ ಸರ್ಕಾರಕ್ಕೆ ಸೇರಿದ ವಿನ್ ವಿನ್ ಲಾಟರಿ ಟಿಕೆಟ್ ಖರೀದಿಸಿದ್ದ.
    ಪ್ರಥಮ ಬಹುಮಾನವಾಗಿ 75 ಲಕ್ಷ ರೂ. ಅಶೋಕ್ ಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಯಾವುದೇ ಸಂತೋಷ ಅನುಭವಿಸದ ಆತ ಗೆದ್ದ ಲಾಟರಿ ಚೀಟಿಯನ್ನು ಯಾರಾದರೂ ಕದ್ದೇಕದಿಯುತ್ತಾರೆ ಎಂಬ ಭಯ ಆವರಿಸಿದೆ. ಈ ಹಿನ್ನೆಲೆಯಲ್ಲಿ ಅಶೋಕ್ ಇಬ್ಬರು ಮಲಯಾಳಿ ಸ್ನೇಹಿತರ ಜತೆ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ತಮ್ಮ ಪರಿಸ್ಥಿತಿ ವಿವರಿಸಿದ್ದಾನೆ.

    ಪೊಲೀಸ್ ಅಧಿಕಾರಿ ಅಶೋಕ್ ನ ಭಯ ಅರ್ಥಮಾಡಿಕೊಂಡರು ವಿಜೇತ ಲಾಟರಿ ಟಿಕೆಟ್ ಅನ್ನು ಬ್ಯಾಂಕ್‌ನಲ್ಲಿ ಸುರಕ್ಷಿತವಾಗಿ ಹಾಜರುಪಡಿಸಲು ಹಿರಿಯ ಸಿಪಿಒ ಸೇರಿದಂತೆ ಪೊಲೀಸ್ ಸಿಬ್ಬಂದಿಯನ್ನು ಕಳುಹಿಸಿದ್ದಾರೆ. ಬಳಿಕ ಪೊಲೀಸ್ ರಕ್ಷಣೆಯಲ್ಲಿ ಬ್ಯಾಂಕ್‌ಗೆ ತೆರಳಿ ಲಾಟರಿ ಟಿಕೆಟ್ ನೀಡಿದ್ದಾನೆ. ಆ ಬಳಿಕ ಲಾಟರಿ ಗೆದ್ದ ಖುಷಿ ಸಿಕ್ಕಿದೆ. ಇದಾದ ನಂತರ ಆತ ಪಶ್ಚಿಮ ಬಂಗಾಳದ ತನ್ನ ಸ್ವಗ್ರಾಮಕ್ಕೆ ಹಿಂತಿರುಗಲು ನಿರ್ಧರಿಸಿದ್ದಾನೆ.

    ಭಾರತದ ಅತಿ ಉದ್ದದ ಸಮುದ್ರ ಸೇತುವೆ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ: ಗೋದಾವರಿ ದಡದ ರಾಮಂದಿರಕ್ಕೆ ಭೇಟಿ..

    ವಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts