More

    ಬಿಗ್​ಬಾಸ್​​ ವಿನ್ನರ್​ಗೆ 50 ಲಕ್ಷ ರೂ. ಜತೆಗೆ ಸಿಗ್ತು ಐಷಾರಾಮಿ ಕಾರು; 6 ಫೈನಲಿಸ್ಟ್​ಗಳಿಗೂ ಸಿಗ್ತು ಲಕ್ಷ..ಲಕ್ಷ ಹಣ

    -ಬಿಗ್ ಬಾಸ್​ ವಿನ್ನರ್​ ಹಾಗೂ ರನ್ನರ್​ಗೆ ಸಿಕ್ಕಿರುವ ಹಣ ಎಷ್ಟು ಗೊತ್ತಾ?

    ನವದೆಹಲಿ: ಕಾರ್ತಿಕ್ ಮಹೇಶ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ವಿಜೇತರಾಗಿ ಹೊರಹೊಮ್ಮಿದರೆ, ಹಿಂದಿಯಲ್ಲಿ ಮುನ್ನಾವರ್ ಅವರು ‘ಬಿಗ್ ಬಾಸ್ 17’ ವಿಜೇತರಾಗಿದ್ದಾರೆ. ಬಿಗ್​ಬಾಸ್ ಕನ್ನಡ ಹಾಗೂ ಹಿಂದಿ ಸೀಸನ್​ ವೀಜೇತರಿಗೆ ಹಾಗೂ ರನ್ನರ್​ ಅಪ್ ಸ್ಪರ್ಧಿಗಳಿಗೆ  ಭಾರಿ ಮೊತ್ತದ ಹಣ ಹಾಗೂ ಕಾರ್​​ ಉಡುಗೊರೆಯಾಗಿ ಸಿಕ್ಕಿದೆ.  50ಲಕ್ಷ ರೂ. ಜತೆಗೆ ಸಿಕ್ಕಿರುವ ಬಹುಮಾನಗಳು ಏನೆಲ್ಲಾ ಎಂದು ನೋಡೋಣ ಬನ್ನಿ…

    ಬಿಗ್​ಬಾಸ್​​ 10 ಶುರುವಾದ ಮೊದಲ ದಿನದಿಂದದಲೂ ಸಖತ್​ ಹೈಪ್​ ಕ್ರಿಯೇಟ್​ ಮಾಡಿರುವ ಕಾರ್ಯಕ್ರಮವಾಗಿತ್ತು. 112 ದಿನಗಳ ಸುದೀರ್ಘ ಪಯಣ ಇಂದು ಅಂತ್ಯವಾಗಿದೆ. ಸಂಗೀತಾ, ವಿನಯ್, ಕಾರ್ತಿಕ್​ ಮಹೇಶ್​, ಡ್ರೋನ್ ಪ್ರತಾಪ್​ ಹಾಗೂ ತುಕಾಲಿ ಸಂತೋಷ್, ವರ್ತೂರು ಸಂತೋಷ್ ಬಿಗ್ ಫಿನಾಲೆಗೆ ಬಂದಿದ್ದರು. ಆರನೇ ಕಂಟೆಸ್ಟೆಂಟ್ ಆಗಿ ಕಷ್ಟದಲ್ಲೇ ಕಾರ್ತಿಕ್ ಮಹೇಶ್ ಫಿನಾಲೆ ವಾರಕ್ಕೆ ಬಂದಿದ್ದರು. ಫಿನಾಲೆ ವಾರದಲ್ಲಿ ಯಾರು ಮನೆಯಿಂದ ಹೊರಗೆ ಹೋಗುತ್ತಾರೆ ಎಂದಾಗ ಬಹುತೇಕರು ಹೇಳಿದ್ದಿದ್ದು ಕಾರ್ತಿಕ್ ಹೆಸರನ್ನು ಆದರೆ ಅದೆಲ್ಲವೂ ಸುಳ್ಳಾಗಿದೆ.

    ಕನ್ನಡ ಬಿಗ್​ಬಾಸ್​​ 10 ವಿಜೇತರಿಸಿಗೆ ಸಿಕ್ಕ ಬಹುಮಾನ: ಬಿಗ್​ಬಾಸ್​ ಸೀಸಸ್​ 10 ಪಟ್ಟವನ್ನು ಮುಡಿಗೇರಿಸಿಕೊಂಡಿರುವ ಕಾರ್ತಿಕ್​ ಅವರಿಗೆ 50 ಲಕ್ಷ ಗೆದ್ದಿದ್ದಾರೆ. ಜೊತೆಗೆ ಒಂದು ಬ್ರಿಜಾ ಕಾರು ಸಹ ಗೆದ್ದಿದ್ದಾರೆ. ಈ ಬಾರಿ ರನ್ನರ್​ಅಪ್​ ಲಕ್ಷ ಲಕ್ಷ ಸಿಕ್ಕಿದೆ. ಮೊದಲ ರನ್ನರ್ ಅಪ್​ ಆಗಿರುವ ಡ್ರೋನ್​​​ ಪ್ರತಾಪ್​ ಅವರಿಗೆ 10 ಲಕ್ಷ ರೂಪಾಯಿ ಹಣ ಬೌನ್ಸ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಕೂಡಾ ಸಿಕ್ಕಿದೆ.

    5ನೇ ರನ್ನರ್​ ಅಪ್​ ಆಗಿರುವ ತುಕಾಲಿ ಸಂತೋಷ್​ಗೆ 2 ಲಕ್ಷ ನೀಡಲಾಗಿದೆ. 4ನೇ ರನ್ನರ್​ಅಪ್ ಸಂತೋಷ್​ಗೆ 2 ಲಕ್ಷದ ಚೆಕ್ ಅನ್ನು ಸುದೀಪ್ ನೀಡಿದ್ರು. ಮೂರನೇ ರನ್ನರ್ ಅಪ್ ಆಗಿ ವಿನಯ್ ಗೌಡ ಅವರಿಗೂ 5 ಲಕ್ಷ ರೂ. ಹಾಗೂ 2ನೇ ರನರ್​ಅಪ್​ ಆಗಿರುವ ಸಂಗೀತಾ ಅವರಿಗೆ 7 ಲಕ್ಷದ ಚೆಕ್ ನೀಡಲಾಗಿದೆ. ಮೊದಲ ರನ್ನರ್ ಅಪ್​ ಆಗಿರುವ ಡ್ರೋನ್​​​ ಪ್ರತಾಪ್​ ಅವರಿಗೆ 10 ಲಕ್ಷ ರೂಪಾಯಿ ಹಣ ಸಿಕ್ಕಿದೆ. ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ವಿನ್ನರ್‌ ಹಾಗೂ ರನ್ನರ್‌ ಇಬ್ಬರಿಗೂ ಬಹುಮಾನದ ಮೊತ್ತದ ಜೊತೆಗೆ ಬೌನ್ಸ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಕೂಡಾ ಸಿಕ್ಕಿದೆ. ಈ ಬಾರಿಯ ಬಿಗ್​ಬಾಸ್​ ಟಾಪ್​ 6ನಲ್ಲಿ ಇದ್ದ ಸ್ಪರ್ಥಿಗಳು ಬರಿಗೈನಲ್ಲಿ ಹೋಗಿಲ್ಲ. ಪ್ರತಿಯೊಬ್ಬರಿಗೂ ಕ್ಯಾಶ್​ ಪ್ರೈಜ್​​ ನೀಡಲಾಗಿದೆ.

    ಸಂಗೀತಾ, ವಿನಯ್, ಕಾರ್ತಿಕ್​ ಮಹೇಶ್​, ಡ್ರೋನ್ ಪ್ರತಾಪ್​ ಹಾಗೂ ತುಕಾಲಿ ಸಂತೋಷ್, ವರ್ತೂರು ಸಂತೋಷ್ ಬಿಗ್ ಫಿನಾಲೆಗೆ ಬಂದಿದ್ದರು. ಈ ಬಾರಿ 6 ಫೈನಲಿಸ್ಟ್​ಗಳಿಗೂ ಭಾರೀ ಬಹುಮಾನ ಸಿಕ್ಕಿದೆ.

    ಹಿಂದಿ ‘ಬಿಗ್ ಬಾಸ್ 17’ರಲ್ಲಿ ಅಂಕಿತಾ ಲೋಖಂಡೆ, ಅರುಣ್ ಮಹಾಶೆಟ್ಟಿ, ಅಭಿಷೇಕ್ ಕುಮಾರ್, ಮುನ್ನಾವರ್ ಫಾರುಕಿ, ಮನ್ನಾರಾ ಚೋಪ್ರಾ ಅವರು ‘ಬಿಗ್ ಬಾಸ್ 17’ ಶೋನ ಫಿನಾಲೆ ಸ್ಪರ್ಧಿಗಳಾಗಿದ್ದರು. ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿ, ಅತಿಥಿಗಳು, ರಿಯಲ್ ದಂಪತಿಗಳ ಜಗಳ-ಪ್ರೀತಿ, ಮಾಜಿ-ಹಾಲಿ ಪ್ರೇಮಿಗಳ ಕಲಹ ಕೂಡ ಈ ಶೋನ ಟಿಆರ್‌ಪಿಯನ್ನು ಹೆಚ್ಚು ಮಾಡಿತ್ತು. ಗಾಯಕ, ಸ್ಟ್ಯಾಂಡಪ್ ಕಾಮಿಡಿಯನ್ ಮುನ್ನಾವರ್ ಫಾರುಕಿ ಅವರು ವಿಜೇತರಾದರೆ, ಅಭಿಷೇಕ್ ಅವರು ರನ್ನರ್ ಅಪ್ ಆದರು.

    ಹಿಂದಿ ‘ಬಿಗ್ ಬಾಸ್ 17’ ವಿಜೇತರಗಿ ಸಿಕ್ಕ ಬಹುಮಾನ:  ಮುನಾವರ್ ಫಾರೂಕಿ ಅವರಿಗೆ ‘ಬಿಗ್ ಬಾಸ್ 17’ ಟ್ರೋಫಿಯನ್ನು ಹೊರತುಪಡಿಸಿ 50 ಲಕ್ಷ ರೂಪಾಯಿ ಮತ್ತು ಹ್ಯುಂಡೈ ಕ್ರೆಟಾ ಕಾರನ್ನು ಬಹುಮಾನವಾಗಿ ನೀಡಲಾಗಿದೆ.  ಈ ಟ್ರೋಫಿಯ ಅತ್ಯಂತ ವಿಶೇಷವಾದ ಸಂಗತಿಯೆಂದರೆ, ದಿಲ್, ದಿಮಾಗ್ ಮತ್ತು ದಮ್ ಕಾರ್ಯಕ್ರಮದ ಥೀಮ್‌ನ ಆಧಾರದ ಮೇಲೆ ಇದನ್ನು ಸಿದ್ಧಪಡಿಸಲಾಗಿದೆ.

    ಉಮಾಶ್ರೀ 2 ತಿಂಗಳ ಪ್ರೆಗ್ನೆಂಟ್ ಇದ್ದಾಗಲೇ ಪತಿ ಬಿಟ್ಟೋದ!; ಕುಡಿತದ ಚಟಕ್ಕೆ ಬಲಿ ಆಯ್ತಾ ನಟಿ ಸಂಸಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts