More

    ಅತ್ಯುತ್ತಮ ಸೇವೆ ಸಲ್ಲಿಸಿದ್ದ ನೈಋತ್ಯ ರೈಲ್ವೆ ಸಿಬ್ಬಂದಿಗೆ ಪ್ರಶಸ್ತಿ

    ಹುಬ್ಬಳ್ಳಿ : ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ನೈಋತ್ಯ ರೈಲ್ವೆಯ 68ನೇ ಸಪ್ತಾಹ ಸಮಾರಂಭದಲ್ಲಿ 2023ರಲ್ಲಿ ವಲಯ ಮಟ್ಟದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದ 37 ಜನರಿಗೆ ವಿಶಿಷ್ಟ ರೈಲ ಸೇವಾ ಪುರಸ್ಕಾರ ಹಾಗೂ 21 ಜನರಿಗೆ ರೈಲ ಸೇವಾ ಪುರಸ್ಕಾರ ಪ್ರದಾನ ಮಾಡಲಾಯಿತು.

    ನೈಋತ್ಯ ರೈಲ್ವೆಯ ವಿವಿಧ ವಿಭಾಗಗಳಿಗೆ 25 ದಕ್ಷತೆಯ ಪದಕ ಹಾಗೂ ಒಂದು ಸಮಗ್ರ ದಕ್ಷತೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಇಲ್ಲಿನ ಗದಗ ರಸ್ತೆಯ ಚಾಲುಕ್ಯ ಇನ್​ಸ್ಟಿಟ್ಯೂಟ್​ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಿ ಮಾತನಾಡಿದ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ, ವಲಯದ ಸಿಬ್ಬಂದಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಿನ ಸಾಧನೆ ಮಾಡುವಂತೆ ಪ್ರೇರೇಪಿಸಿದರು.

    ವರ್ಷದ ಅತ್ಯುತ್ತಮ ಸೇವೆಗಾಗಿ ಸಮಗ್ರ ದಕ್ಷತೆಯ ಪ್ರಶಸ್ತಿಯನ್ನು ಬೆಂಗಳೂರು ವಿಭಾಗಕ್ಕೆ ನೀಡಲಾಯಿತು. ಅತ್ಯುತ್ತಮ ದೊಡ್ಡ ರೈಲು ನಿಲ್ದಾಣ ನಿರ್ವಹಣೆ ಪ್ರಶಸ್ತಿಯನ್ನು ಮೈಸೂರು ವಿಭಾಗದ ಮೈಸೂರು ನಿಲ್ದಾಣಕ್ಕೆ ಹಾಗೂ ಸಣ್ಣ ರೈಲು ನಿಲ್ದಾಣ ನಿರ್ವಹಣೆ ಪ್ರಶಸ್ತಿಯನ್ನು ಮೈಸೂರು ವಿಭಾಗದ ಬಾಗೇಶಪುರ ನಿಲ್ದಾಣಕ್ಕೆ ನೀಡಲಾಯಿತು. ಸಿಬ್ಬಂದಿ ತರಬೇತಿಯಲ್ಲಿ ಅತ್ಯುತ್ತಮ ಕಾರ್ಯ ಮಾಡಿದ ಪ್ರಶಸ್ತಿಯನ್ನು ಮೈಸೂರು ವರ್ಕ್​ಶಾಪ್​ಗೆ ಪ್ರದಾನ ಮಾಡಲಾಯಿತು.

    ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ಹಾಜರಿದ್ದರು. ವಲಯದ ಮಹಿಳಾ ಕಲ್ಯಾಣ ಅಧಿಕಾರಿ ಡಾ. ವಂದನಾ ಶ್ರೀವಾತ್ಸವ ಅಧ್ಯಕ್ಷತೆ ವಹಿಸಿದ್ದರು. ಜಿ.ಆರ್.ಎಸ್. ರಾವ್ ಸ್ವಾಗತಿಸಿದರು. ಅರುಣ ರವಿ ಚೆಟ್ಟು ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts