ವಿಚ್ಛೇದನಕ್ಕಾಗಿ ಪತಿಯಿಂದ 6 ಕೋಟಿ ರೂ. ಜೀವನಾಂಶಕ್ಕೆ ಬೇಡಿಕೆಯಿಟ್ಟ ಪತ್ನಿ…

500 rs note
Published on

ಇಂದೋರ್​: ಮಹಿಳೆಯೊಬ್ಬಳು ತನ್ನ ಪತಿಯಿಂದ ವಿಚ್ಛೇದನ ಕೋರಿ ಆರು ಕೋಟಿ ರೂಪಾಯಿ ಜೀವನಾಂಶಕ್ಕೆ ಬೇಡಿಕೆ ಇಟ್ಟಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ.

ಈ ಕುರಿತು ಭನ್ವಾರ್ಕುವಾನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುವ ರಾಮ್ ರಜಪೂತ್ ಎಂಬಾತ ಲಲಿತ್‌ಪುರದಲ್ಲಿ ವಾಸಿಸುವ ಪತ್ನಿಯು, ತನಗೆ ಆರು ಕೋಟಿ ರೂಪಾಯಿ ಜೀವನಾಂಶ ನೀಡುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ಹಲವು ದಿನಗಳಿಂದ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯಗಳಿದ್ದು, ಈಗಾಗಲೇ ಇವರ ವಿಚ್ಛೇದನದ ಪ್ರಕರಣ ನ್ಯಾಯಾಲಯದಲ್ಲಿದೆ. ಈ ನಡುವೆ ಗಂಡನಿಗೆ ವಿಚ್ಚೇದನ ನೀಡಲು ಪತ್ನಿ 6 ಕೋಟಿ ರೂ.ಹಣವನ್ನು ನೀಡಬೇಕೆಂದು ಒತ್ತಾಯಿಸುತ್ತಿದ್ದಳು. ಹೀಗಾಗಿ ಗಂಡ ರಾಮ್​ ರಜಪೂತ್​ ತನ್ನ ಪತ್ನಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 384, 507 ಮತ್ತು 509ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಈ ಕುರಿತು ಪ್ರತ್ಯೇಕ ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net