'ಡಾಕ್ಟರ್​ ಸಾಬ್​... ದಯವಿಟ್ಟು ಹೊರಗೆ ಬನ್ನಿ' ಗಂಡನ ತೋಳಲ್ಲೇ ಪ್ರಾಣ ಬಿಟ್ಟ ಹೆಂಡತಿ

ದೊಚತೊರ
Published on

ಲಖನೌ: ಕರೊನಾ ಮಹಾಮಾರಿ ಜನರ ಪ್ರಾಣವನ್ನು ಬಲಿ ತೆಗೆದುಕೊಳ್ಳಲು ಆರಂಭಿಸಿದೆ. ಆಸ್ಪತ್ರೆಗಳ ಒಳಗೆ ಮತ್ತು ಹೊರಗೆ ಜನರು ನರಳಾಡುತ್ತಿರುವ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಹೆಂಡತಿ ಸಾಯುತ್ತಿದ್ದಾಳೆ, ದಯಮಾಡಿ ಸಹಾಯ ಮಾಡಿ ಎಂದು ಅಂಗಲಾಚುತ್ತಿದ್ದ ಗಂಡನ ತೋಳಿನಲ್ಲೇ ಹೆಂಡತಿ ಪ್ರಾಣ ಬಿಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಅಂಬೇಡ್ಕರ್​ ನಗರದಲ್ಲಿ ಇಂತದ್ದೊಂದು ಮನ ಕಲಕುವ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಹೆಂಡತಿಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯುತ್ತಾನೆ. ಹೆಂಡತಿ ನಡೆದುಕೊಂಡು ಹೋಗಲಾಗದ ಪರಿಸ್ಥಿತಿಯಲ್ಲಿದ್ದ ಹಿನ್ನೆಲೆಯಲ್ಲಿ ಅಲ್ಲೇ ಮೆಟ್ಟಲ ಮೇಲೆ ಆಕೆಯನ್ನು ತೋಳಿನಲ್ಲಿ ಮಲಗಿಸಿಕೊಂಡು ವೈದ್ಯರಿಗಾಗಿ ಕರೆಯಲಾರಂಭಿಸುತ್ತಾನೆ. ಸುಮಾರು ಒಂದು ಗಂಟೆಗಳ ಕಾಲ ಸಹಾಯಕ್ಕಾಗಿ ಬೇಡಿಕೊಂಡ ನಂತರ ಸಿಬ್ಬಂದಿ ಅವನಿಗೆ ಪ್ರತಿಕ್ರಿಯಿಸಲು ಮುಂದಾಗುತ್ತಾರೆ. ಆದರೆ ಆತನ ಗೋಳು ಕೇಳಲು ಆಸ್ಪತ್ರೆಯ ಸಿಬ್ಬಂದಿ ಬರುವಷ್ಟರಲ್ಲಿ ಹೆಂಡತಿ ಪ್ರಾಣ ಬಿಟ್ಟಿದ್ದಾಳೆ.

ಗಂಡನ ತೋಳಿನಲ್ಲೇ ಹೆಂಡತಿ ಪ್ರಾಣ ಬಿಟ್ಟಿದ್ದಾಳೆ. ಈ ದೃಶ್ಯದ ವಿಡಿಯೋವನ್ನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net