ಹೆಂಡತಿ ಕೇಳಿದ್ದು ಅದೊಂದೇ! ಮರೆತು ಮನೆಗೆ ಬಂದ ಪತಿಗೆ ಹಿಗ್ಗಾಮುಗ್ಗಾ ಥಳಿಸಿದ ಪತ್ನಿ; ಹತ್ಯೆಗೂ ಯತ್ನ | Video Viral

ವಿಜಯವಾಣಿ (28)
Published on

Video Viral: ಇದೊಂದು ವಿಚಿತ್ರ ಘಟನೆ ಎಂದರೆ ಖಂಡಿತ ತಪ್ಪಾಗಲಾರದು. ಬಾಯಿಗೆ ರುಚಿ ತರುವ ಬಿಸಿ ಬಿಸಿ ಸಮೋಸವನ್ನು ಮನೆಗೆ ತರದೆ ಹೋದ ಪತಿಗೆ ಹಿಗ್ಗಾಮುಗ್ಗಾ ಥಳಿಸಿದ ಹೆಂಡತಿ, ಆತನ ಮೇಲೆ ಕೊಲೆಗೂ ಯತ್ನಿಸಿದ ಘಟನೆ ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ವರದಿಯಾಗಿದೆ.

ಗಾಯಗೊಂಡ ವ್ಯಕ್ತಿಯನ್ನು ಉತ್ತರ ಪ್ರದೇಶದ ಆನಂದಪುರ ಗ್ರಾಮದ ನಿವಾಸಿ ಶಿವಂ ಎಂದು ಗುರತಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಸಂಗೀತಾ ಎಂಬ ಮಹಿಳೆಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶಿವಂ, ಕಳೆದ ವಾರ (ಆ.30) ಪತ್ನಿ ತನಗೆ ಮತ್ತು ತನ್ನ ಮನೆಯವರಿಗೆ ಸಮೋಸಾ ತರುವಂತೆ ಹೇಳಿದ್ದಳು. ಆದರೆ, ಆತ ಮರೆತು ಮನೆಗೆ ಬಂದಿದ್ದ. ಇದರಿಂದ ಕುಪಿತಗೊಂಡ ಸಂಗೀತಾ, ತನ್ನ ಮನೆಯವರನ್ನು ಅತ್ತೆ ಮನೆಗೆ ಕರೆಸಿ, ಪಂಚಾಯಿತಿ ನಡೆಸಿದಳು. ಈ ವೇಳೆ ಮಾತಿಗೆ ಮಾತು ಬೆಳೆದು, ಪತಿ-ಪತ್ನಿ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ಮಹಿಳೆಯ ಕುಟುಂಬಸ್ಥರು ಶಿವಂನನ್ನು ಮನಬಂದಂತೆ ಥಳಿಸಿದ್ದು, ಘಟನೆಯ ವಿಡಿಯೋ ಜಾಲತಾಣಗಳಲ್ಲಿ ಹರಿದಾಡಿದೆ.

ಘಟನೆಯ ಬೆನ್ನಲ್ಲೇ ಗಾಯಗೊಂಡ ಶಿವಂನ ತಾಯಿ ವಿಜಯ್ ಕುಮಾರಿ, ಸಂಗೀತಾ ಮತ್ತು ಆಕೆಯ ಕುಟುಂಬದ ವಿರುದ್ಧ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗಂಭೀರ ಹಲ್ಲೆ ಮತ್ತು ಕೊಲೆ ಯತ್ನ ಸೇರಿದಂತೆ ಹಲವಾರು ಆರೋಪಗಳ ಅಡಿಯಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. "ಸಂತ್ರಸ್ತನ ತಾಯಿ ನೀಡಿದ ದೂರಿನ ಆಧಾರದ ಮೇರೆಗೆ, ಕೊಲೆ ಯತ್ನ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸಂಬಂಧಿತ ವಿಭಾಗಗಳ ಅಡಿಯಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಇಂದು ಎಫ್‌ಐಆರ್ ದಾಖಲಿಸಲಾಗಿದೆ" ಎಂದು ಸರ್ಕಲ್​ ಇನ್​ಸ್ಪೆಕ್ಟರ್​ ಪ್ರತೀಕ್ ದಹಿಯಾ ಪಿಟಿಐಗೆ ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net