Wife and Husband : ಈ ಸಾಮಾಜಿಕ ಜಾಲತಾಣ ಯುಗದಲ್ಲಿ ಅನೇಕ ಮಂದಿ ತಮ್ಮ ಕಷ್ಟ-ಸುಖಗಳನ್ನು ಜಾಲತಾಣದಲ್ಲೇ ಹಂಚಿಕೊಳ್ಳುತ್ತಾರೆ. ವೈಯಕ್ತಿಕವಾಗಿರಲಿ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ್ದಾಗಲಿ ಏನಾದರೂ ಸಂದೇಹವಿದ್ದರೆ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಸಲಹೆಯನ್ನು ಕೇಳುತ್ತಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಜಾಲತಾಣದಲ್ಲಿ ಹಂಚಿಕೊಂಡ ಸಂಗತಿ ಇದೀಗ ಚರ್ಚೆಯ ವಿಷಯವಾಗಿದೆ.
ಬಿಜಿನೆಸ್ ಪ್ರವಾಸವನ್ನು ಮುಗಿಸಿ ಮನೆಗೆ ವಾಪಾಸಾದ ತನ್ನ ಹೆಂಡತಿಯ ಕುತ್ತಿಗೆಯಲ್ಲಿ ಗಂಡ ಗಾಯದ ಕಲೆಯನ್ನು ಗಮನಿಸುತ್ತಾನೆ. ಅದನ್ನು ಲವ್ ಬೈಟ್ (ಪ್ರೀತಿಯ ಕಡಿತ) ಅಂದುಕೊಂಡು ಆತನ ಗೊಂದಲಕ್ಕೆ ಒಳಗಾಗುತ್ತಾನೆ. ಅದೇ ಗೊಂದಲದಲ್ಲಿ ಆ ವಿಚಾರವನ್ನು ರೆಡ್ಡಿಟ್ನಲ್ಲಿ ಹಂಚಿಕೊಂಡಿದ್ದು, ಬಳಕೆದಾರರಿಂದ ಸಲಹೆ ಕೇಳಿದ್ದಾನೆ. ಇದೀಗ ಆ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ನನ್ನ 28 ವರ್ಷದ ಹೆಂಡತಿ ಲಾಸ್ ವೇಗಾಸ್‌ನಲ್ಲಿ ಕೆಲಸದ ಪ್ರವಾಸದಲ್ಲಿದ್ದಳು. ನಾನು, ನನ್ನ ನಾಲ್ಕು ವರ್ಷದ ಮಗಳೊಂದಿಗೆ ಮನೆಯಲ್ಲಿದ್ದೆ. ಆ ವಾರ ಮಗಳ ಹುಟ್ಟುಹಬ್ಬವಿತ್ತು. ಹೆಂಡತಿ ಇದೇ ರೀತಿಯ ಪ್ರವಾಸಗಳನ್ನು ಈ ಹಿಂದೆಯೂ ಮಾಡಿದ್ದಾಳೆ. ಆದರೆ, ಈ ಪ್ರವಾಸ ಸ್ವಲ್ಪ ಭಿನ್ನವಾಗಿತ್ತು ಎಂದು ಗಂಡ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾನೆ.
ಹೆಂಡತಿ ಫೋನ್‌ನಲ್ಲಿ ಮಾತನಾಡಲು ಹಿಂಜರಿಯುತ್ತಿದ್ದಳು. ಅವಳು ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ. ಅನುಮಾನಾಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದಳು. ಹೆಂಡತಿ ತನ್ನ ಮಗಳ ಹುಟ್ಟುಹಬ್ಬದಂದು ವಿಡಿಯೋ ಕರೆ ಮಾಡಿದ್ದಳು. ಸ್ವಲ್ಪ ಸಮಯ ಮಾತ್ರ ಮಾತನಾಡಿದಳು. ಆಕೆಯ ಕೋಣೆಯಲ್ಲಿ ಸಹೋದ್ಯೋಗಿಗಳು ಇದ್ದ ಕಾರಣ ಮಾತನಾಡಲು ಸಾಧ್ಯವಾಗಲಿಲ್ಲ ಎಂಬುದು ಹೆಂಡತಿಯ ವಾದವಾಗಿತ್ತು. ಪತ್ನಿ ಪ್ರವಾಸದ ಸಮಯದಲ್ಲಿ ಸಹೋದ್ಯೋಗಿಯೊಂದಿಗೆ ತೆಗೆದ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಳು.
ತನ್ನ ಹೆಂಡತಿಯ ಕುತ್ತಿಗೆಯ ಮೇಲಿನ ಗಾಯದ ಬಗ್ಗೆ ಕೇಳಿದಾಗ, ಅವಳು ಕೀಟ ಕಡಿತ ಎಂದು ಉತ್ತರಿಸಿದಳು. ಆದರೆ, ಹೆಂಡತಿ ಮನೆಗೆ ಬಂದಾಗ, ಅವಳು ಕುತ್ತಿಗೆಯನ್ನು ಸಂಪೂರ್ಣವಾಗಿ ಮುಚ್ಚುವ ಬಟ್ಟೆಗಳನ್ನು ಧರಿಸಿದ್ದಳು. ಹೀಗಾಗಿ ನನಗೆ ಅನುಮಾನ ಉಂಟಾಯಿತು ಎಂದು ತನ್ನ ಪೋಸ್ಟ್ನಲ್ಲಿ ಗಂಡ ಬರೆದುಕೊಂಡಿದ್ದಾನೆ.
ಇದೀಗ ಆತನ ಪೋಸ್ಟ್ ವೈರಲ್ ಆಗಿದ್ದು, ಕೆಲವರು ಅವನ ಹೆಂಡತಿಯನ್ನು ಬೆಂಬಲಿಸುತ್ತಿದ್ದರೆ, ಇತರರು ಅವಳನ್ನು ಟೀಕಿಸುತ್ತಿದ್ದಾರೆ. ಸಂಸಾರದಲ್ಲಿ ಅನುಮಾನ ಇರಬಾರದು ಎಂದು ಕೆಲವರು ಹೇಳುತ್ತಿದ್ದಾರೆ. ಅದೇ ರೀತಿ ಗಂಡನ ಮುಂದೆ ಅನುಮಾನ ಬರದಂತೆ ನಡೆದುಕೊಳ್ಳಬಾರದು ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. (ಏಜೆನ್ಸೀಸ್)
ಈ 3 ರಾಶಿಯ ಮಹಿಳೆಯರು ಪ್ರೀತಿಯಲ್ಲಿ ಎಂದಿಗೂ ಮೋಸ ಮಾಡುವುದಿಲ್ಲವಂತೆ! ನಿಮ್ಮ ರಾಶಿ ಯಾವುದು? Zodiac Signs
ಶಮಿ ಆಯ್ತು ಈಗ ಮಗಳು ಟಾರ್ಗೆಟ್! ಹೋಳಿ ಆಡಿದ್ದೇ ತಪ್ಪಾಯ್ತಾ? ಧಾರ್ಮಿಕ ಮುಖಂಡನಿಂದ ಆಕ್ರೋಶ | Mohammed Shami