ಶಮಿ ಆಯ್ತು ಈಗ ಮಗಳು ಟಾರ್ಗೆಟ್​! ಹೋಳಿ ಆಡಿದ್ದೇ ತಪ್ಪಾಯ್ತಾ? ಧಾರ್ಮಿಕ ಮುಖಂಡನಿಂದ ಆಕ್ರೋಶ | Mohammed Shami

Mohammed Shami
Published on

Mohammed Shami : ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿಯ ಸಮಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಅವರನ್ನು ಮುಸ್ಲಿಂ ಉನ್ನತ ಮಂಡಳಿ ಟೀಕಿಸಿದ್ದು ನಿಮಗೆಲ್ಲ ಗೊತ್ತೇ ಇದೆ. ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಬುದ್ದೀನ್ ರಜ್ವಿ ಬರೇಲ್ವಿ, ರಂಜಾನ್ ತಿಂಗಳಲ್ಲಿ ಶಮಿ "ರೋಜಾ" ಆಚರಿಸದೇ ಇದ್ದಿದ್ದಕ್ಕಾಗಿ ಟೀಕಿಸಿದರು.

ಚಾಂಪಿಯನ್ಸ್​ ಟ್ರೋಫಿಯ ಸಂದರ್ಭದಲ್ಲಿ ಉಪವಾಸ ಮಾಡುವ ಬದಲು ನೀರು ಮತ್ತು ಇತರ ಪಾನೀಯಗಳನ್ನು ಕುಡಿದಿದ್ದಕ್ಕಾಗಿ ಶಹಬುದ್ದೀನ್ ಅವರು ಶಮಿಯನ್ನು ಟೀಕಿಸಿದರು. ಶಮಿಯನ್ನು "ಅಪರಾಧಿ" ಎಂದು ಕರೆದರು. ಆದರೆ, ಈ ವಿಚಾರದಲ್ಲಿ ಇಡೀ ದೇಶ ಶಮಿ ಅವರ ಬೆಂಬಲಕ್ಕೆ ನಿಂತಿತು.

ಇದೀಗ ಶಹಾಬುದ್ದೀನ್, ಶಮಿ ಮಗಳನ್ನು ಗುರಿಯಾಗಿಸಿಕೊಂಡು ಟೀಕಿಸಿದ್ದಾರೆ. ಶಮಿ ಮಗಳು ಹೋಳಿ ಆಚರಣೆಯಲ್ಲಿ ಭಾಗವಹಿಸಿದ್ದನ್ನು "ಕಾನೂನುಬಾಹಿರ" ಮತ್ತು "ಶರಿಯಾ ವಿರುದ್ಧ" ಎಂದು ಟೀಕಿಸಿದ್ದಾರೆ.

ಶನಿವಾರ ರಾತ್ರಿ ವಿಡಿಯೋ ಬಿಡುಗಡೆ ಮಾಡಿರುವ ಶಹಬುದ್ದೀನ್, ಅವಳಿನ್ನೂ ಚಿಕ್ಕ ಹುಡುಗಿ, ಗೊತ್ತಿಲ್ಲದೇ ಹೋಳಿ ಆಡಿದ್ದರೆ ಅದು ಅಪರಾಧವಲ್ಲ. ಒಂದು ವೇಳೆ ಗೊತ್ತಿದ್ದೂ ಹೋಳಿ ಆಡಿದ್ದರೆ ಅದನ್ನು ಶರಿಯಾ ವಿರುದ್ಧವೆಂದು ಪರಿಗಣಿಸಲಾಗುತ್ತದೆ ಎಂದಿದ್ದಾರೆ. ಅಲ್ಲದೆ, ಶಮಿಗೆ ಇಸ್ಲಾಂ ಧರ್ಮದ ತತ್ವಗಳನ್ನು ಅನುಸರಿಸಲು ತಾನು ಈ ಹಿಂದೆ ಸಲಹೆ ನೀಡಿದ್ದಾಗಿ ಶಹಾಬುದ್ದೀನ್ ಹೇಳಿದ್ದಾರೆ.

ನಾನು ಶಮಿ ಮತ್ತು ಅವರ ಕುಟುಂಬ ಸದಸ್ಯರಿಗೆ ಮನವಿ ಮಾಡಿದ್ದೇನೆ. ನಿಮ್ಮ ಮಕ್ಕಳು ಶರಿಯಾದಲ್ಲಿ ಇಲ್ಲದ ಯಾವುದನ್ನೂ ಮಾಡಲು ಬಿಡಬೇಡಿ. ಹೋಳಿ ಹಿಂದೂಗಳಿಗೆ ದೊಡ್ಡ ಹಬ್ಬ ಆದರೆ, ಮುಸ್ಲಿಮರು ಹೋಳಿ ಆಚರಿಸಬಾರದು. ಶರಿಯಾವನ್ನು ತಿಳಿದ ನಂತರವೂ ಯಾರಾದರೂ ಹೋಳಿ ಆಚರಿಸಿದರೆ ಅದು ಅಪರಾಧ ಎಂದು ಅವರು ಶಹಬುದ್ದೀನ್ ಹೇಳಿದರು.

ಶರಿಯಾ ನಿಯಮಗಳನ್ನು ಪಾಲಿಸುವುದು ಎಲ್ಲಾ ಮುಸ್ಲಿಮರ ಜವಾಬ್ದಾರಿಯಾಗಿದೆ. ಇಸ್ಲಾಂನಲ್ಲಿ ಉಪವಾಸ ಕಡ್ಡಾಯವಾಗಿದೆ ಮತ್ತು ಒಬ್ಬರು ಉದ್ದೇಶಪೂರ್ವಕವಾಗಿ ಉಪವಾಸ ಮಾಡದಿದ್ದರೆ, ಅವರನ್ನು ಇಸ್ಲಾಮಿಕ್ ಕಾನೂನುಗಳ ಪ್ರಕಾರ ಪಾಪಿ ಎಂದು ಪರಿಗಣಿಸಲಾಗುತ್ತದೆ. ಶಮಿ ಸೇರಿದಂತೆ ಉಪವಾಸ ಮಾಡಲು ಸಾಧ್ಯವಾಗದವರು ರಂಜಾನ್ ನಂತರ ಉಪವಾಸ ಮಾಡಬೇಕು ಎಂದು ಶಹಬುದ್ದೀನ್ ಸೂಚಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net