Crows Fall : ಆ ಹಳ್ಳಿಯಲ್ಲಿ ನಿಜವಾಗಿಯೂ ಏನಾಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ? ಆಗಸದಲ್ಲಿ ಹಾರಾಡುತ್ತಿರುವ ಕಾಗೆಗಳಿಗೆ ಇದ್ದಕ್ಕಿದ್ದಂತೆ ಬಿದ್ದು ಸಾಯುತ್ತಿರುವುದು ಏಕೆ? ಮರಗಳ ಮೇಲೆ ಕುಳಿತ ಕಾಗೆಗಳು ಕೂಡ ಕೆಳಗೆ ಬಿದ್ದು ಸಾಯುತ್ತಿವೆ. ಇದನ್ನು ನೋಡಿ ಸ್ಥಳೀಯ ಜನರು ಕಂಗಾಲಾಗಿದ್ದಾರೆ. ಈ ಹಿಂದೆ ತೆಲುಗಿನಲ್ಲಿ ಬಿಡುಗಡೆಯಾದ ‘ವಿರೂಪಾಕ್ಷ’ ಸಿನಿಮಾವನ್ನು ನೀವು ನೋಡಿರಬಹುದು. ಇದೊಂದು ಸೂಪರ್ ಹಿಟ್ ಸಿನಿಮಾ. ಈ ಚಿತ್ರದಲ್ಲೂ ಕಾಗೆಗಳು ಗಾಳಿಯಲ್ಲಿ ಹಾರಾಡುತ್ತಿರುವಾಗ ಇದ್ದಕ್ಕಿದ್ದಂತೆ ಬಿದ್ದು ಸಾಯುವ ದೃಶ್ಯವಿದೆ. ಅದೇ ರೀತಿಯ ಘಟನೆ ಈ ಒಂದು ಗ್ರಾಮದಲ್ಲಿ ನಡೆಯುತ್ತಿದೆ.
ಕಾಗೆಗಳು ಇದ್ದಕ್ಕಿದ್ದಂತೆ ಕೆಳಗೆ ಬಿದ್ದು ಸಾಯುತ್ತಿರುವುದರಿಂದ ತಮ್ಮ ಹಳ್ಳಿಗೆ ಏನಾದರೂ ಕೆಟ್ಟದು ಸಂಭವಿಸಲಿದೆಯೇ ಎಂದು ಗ್ರಾಮಸ್ಥರು ಭಯಪಡುತ್ತಿದ್ದಾರೆ. ಇದೊಂದು ಅಶುಭ ಶಕುನ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಎಲ್ಲಿ? ಕಾಗೆಗೆಗಳ ಸರಣಿ ಸಾವಿಗೆ ಕಾರಣ ಏನು? ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಈ ಘಟನೆ ತೆಲಂಗಾಣದ ಮೇಡಕ್ ಜಿಲ್ಲೆಯ ತೂಫ್ರಾನ್ ಮಂಡಲದ ವೆಂಕಟಾಯಪಲ್ಲಿಯಲ್ಲಿ ನಡೆದಿದೆ. ಈ ಘಟನೆ ಇದೀಗ ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದೆ. ಶನಿವಾರ (ಮಾರ್ಚ್ 15) ಮಧ್ಯಾಹ್ನದಿಂದ ಸಂಜೆಯವರೆಗೆ ಗ್ರಾಮದ ವಿವಿಧ ಸ್ಥಳಗಳಲ್ಲಿ ಸುಮಾರು 10ಕ್ಕೂ ಹೆಚ್ಚು ಕಾಗೆಗಳು ಮರಗಳಿಂದ ಬಿದ್ದು ಸಾವಿಗೀಡಾಗಿವೆ. ಕಾಗೆಗಳು ಏಕೆ ಹೀಗೆ ಸಾಯುತ್ತಿವೆ ಎಂದು ತಮಗೆ ತಿಳಿದಿಲ್ಲ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಇದನ್ನೂ ಓದಿ: ನಡೆಯುವಾಗ ನಿಮಗೆ ಈ ಸಮಸ್ಯೆಗಳು ಕಾಡುತ್ತಿವೆಯೇ? ಸಕ್ಕರೆ ಕಾಯಿಲೆಯ ಲಕ್ಷಣ ಇರಬಹುದು ಎಚ್ಚರ! Walking
ಕಾಗೆಗಳ ಸಾವಿನ ಬಗ್ಗೆ ಜಿಲ್ಲಾ ಪಶುವೈದ್ಯಾಧಿಕಾರಿ ವೆಂಕಟಯ್ಯ ಅವರನ್ನು ಮಾಧ್ಯಮಗಳು ಸಂಪರ್ಕಿಸಿದಾಗ, ನಿಜವಾದ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ ಎಂದರು. ಆ ಪ್ರದೇಶದಲ್ಲಿ ಬಿಸಿಲು ಸಿಕ್ಕಾಪಟ್ಟೆ ಸುಡುತ್ತಿದೆ. ಬಿಸಿಲಿನ ತೀವ್ರತೆಯಿಂದಾಗಿ ಕಾಗೆಗಳು ಸಾಯುತ್ತಿವೆಯೇ? ಅಥವಾ ಬೇರೆ ಏನಾದರೂ ಕಾರಣವಿದೆಯೇ? ಎಂದು ಕಂಡುಹಿಡಿಯಲು ಸಿಬ್ಬಂದಿಯನ್ನು ಗ್ರಾಮಕ್ಕೆ ಕಳುಹಿಸಲಾಗುವುದು ಎಂದು ವೆಂಕಟಯ್ಯ ಹೇಳಿದರು.
ವಾಸ್ತವವಾಗಿ, ಕಾಗೆಗಳು ತೀವ್ರವಾದ ಶಾಖವನ್ನು ತಡೆದುಕೊಳ್ಳಲು ಸಾಧ್ಯವಾಗದೆ ಸಾಯಬಹುದು. ಸುಡುವ ಬಿಸಿಲಿನಲ್ಲಿ ಸರಿಯಾದ ಆಹಾರವನ್ನು ಕಂಡುಹಿಡಿಯಲಾಗದೆ ಕಾಗೆಗಳು ತುಂಬಾ ದಣಿದು ಸಾಯಬಹುದು ಎಂದು ಹೇಳಲಾಗುತ್ತದೆ. ಸದ್ಯ ಕಾಗೆಗಳ ಸಾವು ಮಾತ್ರ ಗ್ರಾಮಸ್ಥರಲ್ಲಿ ತುಂಬಾ ಭಯ ಹುಟ್ಟು ಹಾಕಿರುವುದಂತೂ ಸತ್ಯ. (ಏಜೆನ್ಸೀಸ್)
ಚಾಣಕ್ಯನ ಪ್ರಕಾರ ನಿಮಗೆ ಈ 4 ಸಂಗತಿ ಗೊತ್ತಿದ್ದರೆ ಯಾರಿಂದಲೂ ನಿಮ್ಮನ್ನು ಸೋಲಿಸಲು ಸಾಧ್ಯವಿಲ್ಲ! Chanakya Niti