

Zodiac Signs : ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು ಕೂಡ ಇದ್ದಾರೆ. ಪ್ರತಿಯೊಂದು ಕೆಲಸ, ಕಾರ್ಯಗಳನ್ನು ಮಾಡಬೇಕಾದರೂ ಕೆಲವರು ಜೋತಿಷ್ಯದ ಮೊರೆ ಹೋಗುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಚಲನೆಯು ಎಲ್ಲ 12 ರಾಶಿಚಕ್ರದ ಚಿಹ್ನೆಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.
ಮನುಷ್ಯನ ಒಳಿತು-ಕೆಡುಕು, ನಡೆ-ನುಡಿ ಎಲ್ಲದರ ಮೇಲೂ ಗ್ರಹಗಳು ಪ್ರಭಾವ ಬೀರುತ್ತವೆ. ಒಬ್ಬ ವ್ಯಕ್ತಿಯ ಭವಿಷ್ಯದ ಜೀವನ ಹೇಗಿರುತ್ತದೆ? ಆತನ ವಿಶಿಷ್ಟ ಗುಣಗಳು ಏನೆಂಬುದನ್ನು ಗ್ರಹಗತಿಗಳ ಆಧಾರದ ಮೇಲೆ ಸುಲಭ ಊಹಿಸಬಹುದಾಗಿದೆ. ಅದಕ್ಕೆ ಅಲ್ಲವೇ ಏನಾದರೂ ನಡೆದರೆ ಎಲ್ಲದಕ್ಕೂ ಗ್ರಹಗತಿಗಳೇ ಕಾರಣ ಎಂದು ನಮ್ಮ ಹಿರಿಯರು ಹೇಳುವುದನ್ನೂ ನಾವು ನೋಡಿದ್ದೇವೆ. ಇದು ಬಹುತೇಕ ಸಂದರ್ಭಗಳಲ್ಲಿ ನಿಜವೂ ಆಗಿದೆ. ಹೀಗಾಗಿ ಜ್ಯೋತಿಷ್ಯವನ್ನು ಬಹುತೇಕ ಮಂದಿ ನಂಬುತ್ತಾರೆ.
ಸಾಮಾನ್ಯವಾಗಿ, ಯಾವುದೇ ಸಂಬಂಧವು ಉಳಿಯಬೇಕಾದರೆ, ಅದು ನಿಷ್ಠೆ, ಸತ್ಯ ಮತ್ತು ಪ್ರಾಮಾಣಿಕತೆಯನ್ನು ಆಧರಿಸಿರಬೇಕು. ಇವು ಸಂಬಂಧದಲ್ಲಿ ನಂಬಿಕೆಯನ್ನು ಬೆಳೆಸುತ್ತದೆ ಮತ್ತು ಭಾವನಾತ್ಮಕ ಬಂಧಗಳನ್ನು ಬಲಪಡಿಸುತ್ತದೆ ಹಾಗೂ ಭದ್ರತೆಯ ಭಾವನೆಯನ್ನು ಸೃಷ್ಟಿಸುತ್ತದೆ. ನಿಷ್ಠೆಯು ಎಲ್ಲ 12 ರಾಶಿಚಕ್ರ ಚಿಹ್ನೆಗಳಲ್ಲಿ ಕಂಡುಬರುವ ಒಂದು ಲಕ್ಷಣವಾಗಿದೆ. ಆದರೆ ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಮಹಿಳೆಯರು ಸ್ವಾಭಾವಿಕವಾಗಿಯೇ ಪ್ರೇಮ ಸಂಬಂಧದಲ್ಲಿ ತಮ್ಮ ಬದ್ಧತೆ ಮತ್ತು ನಿಷ್ಠೆಯನ್ನು ಹೊಂದಿರುತ್ತಾರೆ. ನಿಷ್ಠೆಯ ಸಾಕಾರ ರೂಪವಾಗಿರುವ ಸ್ತ್ರೀ ರಾಶಿಚಕ್ರ ಚಿಹ್ನೆಗಳು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ವೃಷಭ ರಾಶಿಯಡಿಯಲ್ಲಿ ಜನಿಸಿದ ಮಹಿಳೆಯರು ಪ್ರೀತಿಯಲ್ಲಿ ನಿಷ್ಠೆಗೆ ಹೆಸರುವಾಸಿಯಾಗಿರುತ್ತಾರೆ. ಪ್ರೀತಿ ಮತ್ತು ಸೌಂದರ್ಯದ ಗ್ರಹವಾದ ಶುಕ್ರನಿಂದ ಆಳಲ್ಪಡುವ ಇವರು ಸ್ಥಿರತೆ, ಬದ್ಧತೆ ಮತ್ತು ದೀರ್ಘಕಾಲೀನ ಸಂಬಂಧಗಳನ್ನು ತುಂಬಾ ಗೌರವಿಸುತ್ತಾರೆ. ಒಮ್ಮೆ ತನ್ನ ಸಂಗಾತಿಗೆ ಬದ್ಧಳಾದರೆ, ಆ ಸಂಬಂಧದಲ್ಲಿ ದೀರ್ಘಕಾಲ ಉಳಿಯುತ್ತಾಳೆ. ಎಂದಿಗೂ ಮೋಸ ಮಾಡುವುದಿಲ್ಲ. ಈ ರಾಶಿಯವರ ದೃಢ ಸ್ವಭಾವ ಮತ್ತು ಆಳವಾದ ಜವಾಬ್ದಾರಿಯುತ ಪ್ರಜ್ಞೆಯೇ ಅವರ ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಕಾರಣವಾಗಿದೆ.
ಕರ್ಕಾಟಕ ರಾಶಿಯಲ್ಲಿ ಜನಿಸಿದ ಮಹಿಳೆಯರು ತುಂಬಾ ಭಾವನಾತ್ಮಕವಾಗಿರುತ್ತಾರೆ. ಅವರು ಪ್ರೇಮ ಸಂಬಂಧದಲ್ಲಿ ನಿಷ್ಠಾವಂತ ಸಂಗಾತಿ ಆಗಿರುತ್ತಾರೆ. ಈ ರಾಶಿಯು ಚಂದ್ರನ ಆಳ್ವಿಕೆಗೆ ಒಳಪಡುವುದರಿಂದ ಈ ರಾಶಿಯಲ್ಲಿ ಹುಟ್ಟಿದ ಮಹಿಳೆಯರು ತನ್ನ ಕುಟುಂಬಕ್ಕೆ ಎಲ್ಲಕ್ಕಿಂತ ಹೆಚ್ಚಾಗಿ ಆದ್ಯತೆ ನೀಡುವ ಪ್ರವೃತ್ತಿ ಹೊಂದಿರುತ್ತಾರೆ. ಕರ್ಕಾಟಕ ರಾಶಿಯ ಮಹಿಳೆ ತನ್ನ ಪ್ರೀತಿಪಾತ್ರರನ್ನು ರಕ್ಷಿಸಲು ಮತ್ತು ಕಾಳಜಿ ವಹಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಾರೆ. ಅವರ ನಿಷ್ಠೆ ಅಚಲವಾಗಿರುತ್ತದೆ. ಕಷ್ಟಕರ ಸಂದರ್ಭಗಳಲ್ಲಿಯೂ ಸಹ ತಮ್ಮ ಸಂಗಾತಿಯ ಪಕ್ಕದಲ್ಲಿ ನಿಲ್ಲುವ ಗುಣವನ್ನು ಖಂಡಿತವಾಗಿಯೂ ಹೊಂದಿರುತ್ತಾರೆ.
ಸಿಂಹ ರಾಶಿಯಲ್ಲಿ ಜನಿಸಿದ ಮಹಿಳೆಯರು ತಮ್ಮ ಪ್ರೀತಿಪಾತ್ರರಿಗೆ ತುಂಬಾ ನಿಷ್ಠಾವಂತ ಮತ್ತು ಸುರಕ್ಷಿತ ಭಾವನೆಯನ್ನು ನೀಡುತ್ತಾರೆ. ಸೂರ್ಯನ ಆಳ್ವಿಕೆಯಡಿಯಲ್ಲಿ, ಅವರು ಪ್ರೀತಿಯಲ್ಲಿ ಉತ್ಸುಕ ಮತ್ತು ಉದಾರರು. ಸಿಂಹ ರಾಶಿಯ ಮಹಿಳೆಯರು ಇತರರ ಗಮನವನ್ನು ಸೆಳೆಯಲು ಇಷ್ಟಪಡುತ್ತಾರೆ. ಅದೇ ಸಮಯದಲ್ಲಿ ಅವರು ತಮ್ಮ ಸಂಗಾತಿಗೆ ನಿಷ್ಠರಾಗಿರುತ್ತಾರೆ. ಅವರ ನಿಷ್ಠೆಯು ಅವರು ಪ್ರೀತಿಸುವವರ ಬಗ್ಗೆ ಹೊಂದಿರುವ ಬಲವಾದ ಹೆಮ್ಮೆ ಮತ್ತು ಬದ್ಧತೆಯಿಂದ ಉಂಟಾಗುತ್ತದೆ. ಅವರು ಪ್ರೀತಿಯಲ್ಲಿ ಎಂದಿಗೂ ಮೋಸ ಮಾಡುವುದಿಲ್ಲ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.