ಹೊಸ ಅಧ್ಯಾಯಕ್ಕೆ ಸಜ್ಜಾದ ಆರ್​ಸಿಬಿ; ರಜತ್​ ಪಾಟೀದಾರ್​ ಸಾರಥ್ಯದಲ್ಲಿ ಕಪ್​ ಬರ ನೀಗಿಸುವ ಉತ್ಸಾಹ

web rcb new chapter
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಅಥವಾ ಚುಟುಕಾಗಿ ಆರ್​ಸಿಬಿ ಎಂದರೆ ಇದು ಬರೀ ಒಂದು ಹೆಸರಲ್ಲ, ಪ್ರೀತಿಯ ಸಾಗರ. ಸೋಲು-ಗೆಲುವಿನ ನಡುವೆ ಯಾವತ್ತೂ ಕಡಿಮೆಯಾಗದ ಪ್ರೀತಿ ಇದು. ಕಳೆದ 17 ವರ್ಷಗಳಿಂದ ಒಂದೇ ಒಂದು ಪ್ರಶಸ್ತಿ ಗೆಲ್ಲದಿದ್ದರೂ, ಅಭಿಮಾನಿಗಳ ಹೃದಯವನ್ನು ಮಾತ್ರ ಪ್ರತಿ ಬಾರಿಯೂ ಗೆಲ್ಲುತ್ತ ಬಂದಿದೆ. ಹೀಗಾಗಿ ಆರ್​ಸಿಬಿ ಮೇಲಿನ ಅಭಿಮಾನಿಗಳ ಪ್ರೀತಿ ಯಾವತ್ತಿಗೂ ಕಡಿಮೆಯಾಗಿಲ್ಲ. ಇದೀಗ 18ನೇ ಆವೃತ್ತಿಯಲ್ಲಿ ಚೊಚ್ಚಲ ಕಪ್​ ಗೆಲ್ಲುವ ಮೂಲಕ ಅಭಿಮಾನಿಗಳ ಪ್ರೀತಿಯ ಋಣ ಸಂದಾಯ ಮಾಡುವ ಅವಕಾಶ ಆರ್​ಸಿಬಿ ತಂಡದ ಮುಂದಿದೆ ಮತ್ತು ಅದಕ್ಕೆ ವೇದಿಕೆಯೂ ಸಜ್ಜಾಗಿ ನಿಂತಿದೆ.

"ಇದು ಆರ್​ಸಿಬಿಯ ಹೊಸ ಅಧ್ಯಾಯ' ಎಂದು ವಿರಾಟ್​ ಕೊಹ್ಲಿ ಕಳೆದ ವರ್ಷವೇ ಘೋಷಿಸಿದ್ದರು. ಇಂಗ್ಲಿಷ್​ನಲ್ಲಿ ತಂಡದ ಹೆಸರು ಕೂಡ "ಬ್ಯಾಂಗಲೋರ್​'ನಿಂದ "ಬೆಂಗಳೂರು' ಆಗಿತ್ತು. ಅಲ್ಲದೆ ಆರಂಭಿಕ 8 ಪಂದ್ಯಗಳಲ್ಲಿ 7ರಲ್ಲಿ ಸೋತ ನಂತರ ಸತತ 6 ಗೆಲುವಿನೊಂದಿಗೆ ಅಮೋವಾಗಿ ಪ್ಲೇಆ್​ಗೇರಿತ್ತು. ಆದರೆ ಎಲಿಮಿನೇಟರ್​ನಲ್ಲಿ ರಾಜಸ್ಥಾನ ರಾಯಲ್ಸ್​ ಎದುರು ಸೋತು ನಿರಾಸೆ ಅನುಭವಿಸಿತ್ತು. ಈ ಬಾರಿ ಮಾರ್ಚ್​ 22ರಂದು ಕೋಲ್ಕತದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಕೆಕೆಆರ್​ ವಿರುದ್ಧ ಆಡುವ ಮೂಲಕ ಆರ್​ಸಿಬಿ ಅಭಿಯಾನ ಆರಂಭಿಸಲಿದೆ.

ಈ ಸಲದ ಆವೃತ್ತಿ ಆರ್​ಸಿಬಿ ಪಾಲಿಗೆ ಅಕ್ಷರಶಃ "ಹೊಸ ಅಧ್ಯಾಯ' ಆಗುವ ನಿರೀೆ ಹೆಚ್ಚಿದೆ. ಯಾಕೆಂದರೆ ಕಳೆದ ಮೆಗಾ ಹರಾಜಿನ ನಂತರ ತಂಡ ಸಾಕಷ್ಟು ಬದಲಾವಣೆ ಕಂಡಿದೆ. ಜತೆಗೆ ಮಧ್ಯಪ್ರದೇಶದ ಬ್ಯಾಟರ್​ ರಜತ್​ ಪಾಟೀದಾರ್​ ಹೊಸ ನಾಯಕರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಬರೀ ವಿದೇಶಿಯರೇ ತುಂಬಿದ್ದ ತರಬೇತಿ ಬಳಗದಲ್ಲಿ ಮಾಜಿ ಕ್ರಿಕೆಟಿಗ ದಿನೇಶ್​ ಕಾರ್ತಿಕ್​ ಬ್ಯಾಟಿಂಗ್​ ಕೋಚ್​ ಆಗಿ ಹೊಸ ಶಕ್ತಿ ತುಂಬಲಿದ್ದಾರೆ.

ಲಕ್​ ತರುವುದೇ 18?

ಈ ಸಲದ ಐಪಿಎಲ್​ ಟೂರ್ನಿ, 18ನೇ ಆವೃತ್ತಿ ಆಗಿರುವುದು ಕಪ್​ ಗೆಲುವಿನ ಕನಸು ನನಸಾಗಿಸುವ ನಿರೀೆ ಹೆಚ್ಚಿಸಿದೆ. ಯಾಕೆಂದರೆ 18 ಆರ್​ಸಿಬಿಯ ಶಕ್ತಿ. ಅಂದರೆ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಅವರ ಜೆರ್ಸಿ ನಂಬರ್​ 18. ಇದು ಕೊಹ್ಲಿ ಅವರ ಸತತ 18 ವರ್ಷಗಳ ಐಪಿಎಲ್​ ಟ್ರೋಫಿಯ ಕಾಯುವಿಕೆಯನ್ನೂ ಕೊನೆಗೊಳಿಸುವ ನಿರೀೆ ಹರಡಿದೆ. ಟಿ20 ವಿಶ್ವಕಪ್​, ಐಸಿಸಿ ಚಾಂಪಿಯನ್ಸ್​ ಟ್ರೋಫಿ ಗೆಲುವಿನ ಬಳಿಕ ಐಪಿಎಲ್​ ಕಿರೀಟ "ಕಿಂಗ್​ ಕೊಹ್ಲಿ' ವೃತ್ತೀಜಿವನವನ್ನು ಮತ್ತಷ್ಟು ವರ್ಣರಂಜಿತಗೊಳಿಸುವುದು ಖಚಿತ.

ಪಾಟೀದಾರ್​ ಹೆಗಲೇರಿದ ನಿರೀಕ್ಷೆ....

ಆರ್​ಸಿಬಿ ತಂಡದ 8ನೇ ನಾಯಕ ಮತ್ತು 4ನೇ ಭಾರತೀಯ ನಾಯಕರೆನಿಸಿರುವ 31 ವರ್ಷದ ರಜತ್​ ಪಾಟೀದಾರ್​ಗೆ ಇದು ಐಪಿಎಲ್​ನಲ್ಲಿ ಮೊದಲ ನಾಯಕತ್ವ ಸವಾಲಾಗಿದೆ. ಕಳೆದ ದೇಶೀಯ ಕ್ರಿಕೆಟ್​ ಋತುವಿನ ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಮಧ್ಯಪ್ರದೇಶ ತಂಡವನ್ನು ಫೈನಲ್​ಗೇರಿಸಿದ್ದ ಸಾಧನೆ ರಜತ್​ ಪಾಟೀದಾರ್​ಗೆ ಆರ್​ಸಿಬಿ ನಾಯಕತ್ವ ಒಲಿಯಲು ನೆರವಾಗಿದೆ. ೈನಲ್​ನಲ್ಲಿ ಮುಂಬೈ ವಿರುದ್ಧ ಸೋಲು ಕಂಡಿದ್ದ ನಡುವೆ ಬ್ಯಾಟಿಂಗ್​ನಲ್ಲೂ ಮಿಂಚಿದ್ದ ರಜತ್​, ಒಟ್ಟು 428 ರನ್​ ಕಲೆಹಾಕುವ ಮೂಲಕ ಟೂರ್ನಿಯ 2ನೇ ಗರಿಷ್ಠ ರನ್​ಸ್ಕೋರರ್​ ಎನಿಸಿದ್ದರು. ಐಪಿಎಲ್​ನಲ್ಲೂ ಅಂಥದ್ದೇ ಯಶಸ್ಸು ಮುಂದುವರಿಸುವ ಮೂಲಕ ಹೊಸ ಇತಿಹಾಸ ಬರೆಯುವ ಅವಕಾಶ ರಜತ್​ ಮುಂದಿದೆ.

ಹೊಸ ತಾರೆಯರ ಸೇರ್ಪಡೆ...

ಹಿಂದಿನ ಆವೃತ್ತಿಯಲ್ಲಿದ್ದ ಫಾಫ್ ಡು ಪ್ಲೆಸಿಸ್​, ಗ್ಲೆನ್​ ಮ್ಯಾಕ್ಸ್​ವೆಲ್​, ಮೊಹಮದ್​ ಸಿರಾಜ್​ರಂಥ ಪ್ರಮುಖ ಆಟಗಾರರನ್ನು ಕೈಬಿಟ್ಟು ಆರ್​ಸಿಬಿ ಈ ಬಾರಿ ಬಹುತೇಕ ಹೊಸ ತಂಡವನ್ನು ಕಟ್ಟಲಿದೆ. ಕಳೆದ ಸಾಲಿನಲ್ಲಿ ಆರ್​ಸಿಬಿ 11ರ ಬಳಗದಲ್ಲಿದ್ದ ಕೊಹ್ಲಿ, ಪಾಟೀದಾರ್​ ಜತೆಗೆ ಯಶ್​ ದಯಾಳ್​ ಮಾತ್ರ ಈ ಸಲವೂ ಮುಂದುವರಿಯಲಿದ್ದಾರೆ. ಮೆಗಾ ಹರಾಜಿನಲ್ಲಿ ಇಂಗ್ಲೆಂಡ್​ನ ಕೀಪರ್​-ಬ್ಯಾಟರ್​ ಫಿಲ್​ ಸಾಲ್ಟ್​, ಆಲ್ರೌಂಡರ್​ಗಳಾದ ಲಿಯಾಮ್​ ಲಿವಿಂಗ್​ಸ್ಟೋನ್​, ಜೇಕಬ್​ ಬೆಥೆಲ್​, ಆಸೀಸ್​ನ ಸ್ಫೋಟಕ ಬ್ಯಾಟರ್​ ಟಿಮ್​ ಡೇವಿಡ್​, ಭಾರತೀಯ ವಿಕೆಟ್​ ಕೀಪರ್​-ಬ್ಯಾಟರ್​ ಜಿತೇಶ್​ ಶರ್ಮ, ಅನುಭವಿ ಆಲ್ರೌಂಡರ್​ ಕೃನಾಲ್​ ಪಾಂಡ್ಯ, ವೇಗಿ ಭುವನೇಶ್ವರ್​ ಕುಮಾರ್​ ಈ ಸಲದ ಪ್ರಮುಖ ಹೊಸ ಸೇರ್ಪಡೆಯಾಗಿದ್ದಾರೆ.

ಇಬ್ಬರೇ ಕನ್ನಡಿಗರು...

ಅಭಿಮಾನಿಗಳ ಆಕ್ರೋಶದ ನಡುವೆಯೂ ಆರ್​ಸಿಬಿ ತಂಡದಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಕರ್ನಾಟಕದ ಕ್ರಿಕೆಟಿಗರಿಗೆ ಹೆಚ್ಚಿನ ಆದ್ಯತೆ ಲಭಿಸಿಲ್ಲ. ಕಳೆದ ಮೆಗಾ ಹರಾಜಿನಲ್ಲಿ ಕೆಎಲ್​ ರಾಹುಲ್​ ಸಹಿತ ಕರ್ನಾಟಕದ ಕೆಲ ಪ್ರಮುಖ ಕ್ರಿಕೆಟಿಗರನ್ನು ಸೇರಿಸಿಕೊಳ್ಳುವ ಅವಕಾಶವನ್ನು ಆರ್​ಸಿಬಿ ಕೈಚೆಲ್ಲಿತ್ತು. ಈ ಸಲ ಆರ್​ಸಿಬಿ ತಂಡದಲ್ಲಿ ಇಬ್ಬರಷ್ಟೇ ಕನ್ನಡಿಗರಿದ್ದಾರೆ. ಅವರೆಂದರೆ ಎಡಗೈ ಬ್ಯಾಟರ್​ ದೇವದತ್​ ಪಡಿಕ್ಕಲ್​ ಮತ್ತು ಆಲ್ರೌಂಡರ್​ ಮನೋಜ್​ ಭಾಂಡಗೆ. ಈ ಪೈಕಿ, ಆರ್​ಸಿಬಿ ಮೂಲಕವೇ ಐಪಿಎಲ್​ಗೆ ಪದಾರ್ಪಣೆ ಮಾಡಿ, 4 ವರ್ಷಗಳ ಬಳಿಕ ಮತ್ತೆ ಮರಳಿರುವ ಪಡಿಕ್ಕಲ್​ಗೆ 11ರ ಬಳಗದಲ್ಲೂ ಸ್ಥಾನ ಲಭಿಸುವ ನಿರೀೆ ಹೆಚ್ಚಿದೆ.

ಬಲಿಷ್ಠ ಆಡುವ 11ರ ಬಳಗ

ವಿರಾಟ್​ ಕೊಹ್ಲಿ, ಫಿಲ್​ ಸಾಲ್ಟ್​, ರಜತ್​ ಪಾಟೀದಾರ್​ (ನಾಯಕ), ಲಿಯಾಮ್​ ಲಿವಿಂಗ್​ಸ್ಟೋನ್​, ಜಿತೇಶ್​ ಶರ್ಮ (ವಿ.ಕೀ), ಟಿಮ್​ ಡೇವಿಡ್​/ಜೇಕಬ್​ ಬೆಥೆಲ್​, ಕೃನಾಲ್​ ಪಾಂಡ್ಯ, ಭುವನೇಶ್ವರ್​ ಕುಮಾರ್​, ಸುಯಶ್​ ಶರ್ಮ, ಜೋಶ್​ ಹ್ಯಾಸಲ್​ವುಡ್​/ನುವಾನ್​ ತುಷಾರ/ಲುಂಗಿ ಎನ್​ಗಿಡಿ, ಯಶ್​ ದಯಾಳ್​.

ಇಂಪ್ಯಾಕ್ಟ್​ ಪ್ಲೇಯರ್ಸ್​: ದೇವದತ್​ ಪಡಿಕ್ಕಲ್​, ಸ್ವಪ್ನಿಲ್​ ಸಿಂಗ್​, ರಸಿಕ್​ ದಾರ್​, ಮನೋಜ್​ ಭಾಂಡಗೆ.

ಮೀಸಲು ಬಳಗ: ಸ್ವಸ್ತಿಕ್​ ಚಿಕಾರ, ರೊಮಾರಿಯೊ ಶೆರ್ಡ್​, ಅಭಿನಂದನ್​ ಸಿಂಗ್​, ಮೋಹಿತ್​ ರಾಥಿ.

ಆರ್​ಸಿಬಿ ವೇಳಾಪಟ್ಟಿ

ತವರಿನ ಪಂದ್ಯಗಳು

ದಿನಾಂಕ ಎದುರಾಳಿ ಆರಂಭ

ಏ. 2 ಗುಜರಾತ್​ ರಾ.7.30

ಏ.10 ಡೆಲ್ಲಿ ರಾ.7.30

ಏ.18 ಪಂಜಾಬ್​ ರಾ. 7.30

ಏ.24 ರಾಜಸ್ಥಾನ ರಾ. 7.30

ಮೇ 3 ಸಿಎಸ್​ಕೆರಾ. 7.30

ಮೇ 13 ಸನ್​ರೈಸರ್ಸ್​ ರಾ. 7.30

ಮೇ 17 ಕೆಕೆಆರ್​ ರಾ. 7.30

ಎದುರಾಳಿ ನೆಲದಲ್ಲಿ

ದಿನಾಂಕ ಎದುರಾಳಿ ಸ್ಥಳ ಆರಂಭ

ಮಾ.22 ಕೆಕೆಆರ್​ ಕೋಲ್ಕತ ರಾ.7.30

ಮಾ.28 ಸಿಎಸ್​ಕೆ ಚೆನ್ನೆ$ ರಾ.7.30

ಏ. 7 ಮುಂಬೈ ಮುಂಬೈ ರಾ.7.30

ಏ.13 ರಾಜಸ್ಥಾನ ಜೈಪುರ ಮ.3.30

ಏ.20 ಪಂಜಾಬ್​ ಚಂಡೀಗಢ ಮ.3.30

ಏ.27 ಡೆಲ್ಲಿ ನವದೆಹಲಿ ರಾ.7.30

ಮೇ 9 ಲಖನೌ ಲಖನೌ ರಾ.7.30

ವೇಳಾಪಟ್ಟಿಯ ಸವಾಲು...

ಆರ್​ಸಿಬಿ ತನ್ನ ಮೊದಲ 4ರಲ್ಲಿ 3 ಪಂದ್ಯಗಳನ್ನು ಎದುರಾಳಿ ನೆಲದಲ್ಲಿ ಆಡಲಿದೆ. ಅಲ್ಲದೆ, ಕೊನೇ 2 ಪಂದ್ಯಗಳವರೆಗೆ ಒಮ್ಮೆಯೂ ತವರಿನಲ್ಲಿ ಸತತ 2 ಪಂದ್ಯಗಳನ್ನು ಆಡುವುದಿಲ್ಲ. ಇದರಿಂದಾಗಿ ತಂಡ ನಿರಂತರ ಪ್ರಯಾಣದಲ್ಲಿರಬೇಕಾಗುತ್ತದೆ. ಇನ್ನು ಕೆಕೆಆರ್​, ಡೆಲ್ಲಿ, ಸಿಎಸ್​ಕೆ, ರಾಜಸ್ಥಾನ ಮತ್ತು ಪಂಜಾಬ್​ ಎದುರು ಈ ಬಾರಿ ತವರು&ಎದುರಾಳಿ ನೆಲ ಎರಡರಲ್ಲೂ ಆಡಲಿದ್ದರೆ, ಗುಜರಾತ್​, ಸನ್​ರೈಸರ್ಸ್​ ಎದುರು ತವರಿನಲ್ಲಿ ಮಾತ್ರ ಆಡಲಿದೆ. ಮುಂಬೈ, ಲಖನೌ ತಂಡಗಳನ್ನು ಎದುರಾಳಿ ನೆಲದಲ್ಲಿ ಮಾತ್ರ ಎದುರಿಸಲಿದೆ.

ಇಂದು ಅನ್​ಬಾಕ್ಸ್​ ಕಾರ್ಯಕ್ರಮ

ಆರ್​ಸಿಬಿ ತಂಡ ಮತ್ತು ಅಭಿಮಾನಿಗಳ ಸಮಾಗಮಕ್ಕೆ ವೇದಿಕೆಯಾಗುವ ಅನ್​ಬಾಕ್ಸ್​ ಕಾರ್ಯಕ್ರಮ ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇದರಲ್ಲಿ ಆರ್​ಸಿಬಿ ಅಭಿಮಾನಿಗಳು, ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ ಸಹಿತ ಎಲ್ಲ ಆಟಗಾರರ ಅಭ್ಯಾಸವನ್ನು ವೀಸುವ ಅವಕಾಶ ಪಡೆಯಲಿದ್ದಾರೆ. ಜತೆಗೆ ತಂಡದ ಹೊಸ ಜೆರ್ಸಿ ಅಧಿಕೃತವಾಗಿ ಅನಾವರಣಗೊಳ್ಳುವ ನಿರೀೆ ಇದೆ. ಆರ್​ಸಿಬಿ ತವರು ಮೈದಾನದಲ್ಲಿ ಸಂಜೆ 4 ಗಂಟೆಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಸಂಗೀತ ಸುಧೆಯೂ ಹರಿಯಲಿದೆ. ರಾಜ್ಯದ ಜನಪ್ರಿಯ ಗಾಯಕ ಸಂಜಿತ್​ ಹೆಗ್ಡೆ, ಗಾಯಕಿ ಐಶ್ವರ್ಯ ರಂಗರಾಜನ್​ ಜತೆಗೆ ಕೇರಳದ ಪ್ರಸಿದ್ಧ ರ್ಯಾಪರ್​ ಹನುಮಕಿಂಡ (ಸೂರಜ್​ ಚೆರುಕಟ್​) ಮತ್ತು ಆಸ್ಟ್ರೆಲಿಯಾದ ಡಿಜೆ, ಸಂಗೀತಕಾರ ಟಿಮ್ಮಿ ಟ್ರಂಪೆಟ್​ (ಟಿಮೋಥಿ ಜುಡ್​ ಸ್ಮಿತ್​) ಸಂಗೀತದೊಂದಿಗೆ ಮನರಂಜನೆ ಒದಗಿಸಲಿದ್ದಾರೆ. 800ರಿಂದ 5 ಸಾವಿರ ರೂ. ಬೆಲೆ ಹೊಂದಿರುವ ಕಾರ್ಯಕ್ರಮದ ಎಲ್ಲ ಟಿಕೆಟ್​ಗಳು ಈಗಾಗಲೆ ಸೋಲ್ಡ್​ ಔಟ್​ ಆಗಿವೆ.

*ಐಪಿಎಲ್​ ಸಾಧನೆ

ರನ್ನರ್​ಅಪ್​: 2009, 2011, 2016

3ನೇ ಸ್ಥಾನ: 2010, 2015, 2022

4ನೇ ಸ್ಥಾನ: 2020, 2021, 2024

5ನೇ ಸ್ಥಾನ: 2012, 2013

6ನೇ ಸ್ಥಾನ: 2018, 2023

7ನೇ ಸ್ಥಾನ: 2008, 2014

8ನೇ ಸ್ಥಾನ: 2017, 2019

*ಐಪಿಎಲ್​ ನಿರ್ವಹಣೆ

ಪಂದ್ಯ: 256

ಜಯ: 123

ಸೋಲು: 129

ರದ್ದು: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net