More

    ಐಪಿಎಲ್​ನಲ್ಲಿ ಮಿಂಚಿರುವ ವಿಂಡೀಸ್​ ಸ್ಫೋಟಕ ಬ್ಯಾಟರ್​, ಭಾರತ ವಿರುದ್ಧ ಏಕದಿನ ಸರಣಿಗೆ ವಾಪಸ್​!

    ಸೇಂಟ್​ ಜಾನ್ಸ್​: ಪ್ರವಾಸಿ ಭಾರತ ತಂಡದ ವಿರುದ್ಧ ಗುರುವಾರದಿಂದ ಬಾರ್ಬಡೋಸ್​ನಲ್ಲಿ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಗೆ ವೆಸ್ಟ್​ ಇಂಡೀಸ್​ ತಂಡವನ್ನು ಪ್ರಕಟಿಸಲಾಗಿದ್ದು, ಸ್ಫೋಟಕ ಬ್ಯಾಟರ್​ ಶಿಮ್ರೊನ್​ ಹೆಟ್ಮೆಯರ್​ ಮತ್ತು ವೇಗಿ ಒಶಾನೆ ಥಾಮಸ್​ ತಂಡಕ್ಕೆ ಪುನರಾಗಮನ ಕಂಡಿದ್ದಾರೆ.

    ಮಾಜಿ ನಾಯಕ ನಿಕೋಲಸ್​ ಪೂರನ್​ ಮತ್ತು ಆಲ್ರೌಂಡರ್​ ಜೇಸನ್​ ಹೋಲ್ಡರ್​ ತಂಡದ ಆಯ್ಕೆಗೆ ಅಲಭ್ಯರಾಗಿದ್ದರೆ, ಆಲ್ರೌಂಡರ್​ ಕೀಮೊ ಪೌಲ್​ ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಹೆಟ್ಮೆಯರ್​ ಯಾವುದೇ ಕ್ರಿಕೆಟ್​ ಪ್ರಕಾರದಲ್ಲಿ ಸುಮಾರು 1 ವರ್ಷದ ಬಳಿಕ ವಿಂಡೀಸ್​ ತಂಡಕ್ಕೆ ಮರಳಿದ್ದಾರೆ. ಐಪಿಎಲ್​ನಲ್ಲಿ ಆರ್​ಸಿಬಿ ಪರ ಆಡಿರುವ ಹೆಟ್ಮೆಯರ್​ ಪ್ರಸಕ್ತ ರಾಜಸ್ಥಾನ ರಾಯಲ್ಸ್​ ತಂಡದ ಆಟಗಾರರಾಗಿದ್ದಾರೆ.

    2021ರ ಜುಲೈನಲ್ಲಿ ಕೊನೆಯದಾಗಿ ಆಸೀಸ್​ ವಿರುದ್ಧ ಏಕದಿನ ಪಂದ್ಯ ಆಡಿದ್ದ ಹೆಟ್ಮೆಯರ್​, ಇತ್ತೀಚೆಗೆ ಏಕದಿನ ವಿಶ್ವಕಪ್​ ಅರ್ಹತಾ ಟೂರ್ನಿಗೂ ಕಡೆಗಣಿಸಲ್ಪಟ್ಟಿದ್ದರು. ಥಾಮಸ್​ ಕೂಡ 2021ರ ಡಿಸೆಂಬರ್​ ಬಳಿಕ ಮೊದಲ ಬಾರಿ ತಂಡಕ್ಕೆ ಮರಳಿದ್ದಾರೆ. ವಿಶ್ವಕಪ್​ ಅರ್ಹತೆ ಸಂಪಾದಿಸಲು ವಿಲವಾದ ಬಳಿಕ ವಿಂಡೀಸ್​ ತಂಡಕ್ಕೆ ಇದು ಮೊದಲ ಏಕದಿನ ಸರಣಿಯಾಗಿದೆ.

    ತಂಡ: ಶೈ ಹೋಪ್​ (ನಾಯಕ), ರೋವ್ಮನ್​ ಪೊವೆಲ್​ (ಉಪನಾಯಕ), ಅಲಿಕ್​ ಅಥನೇಸ್​, ಯಾನಿಕ್​ ಕ್ಯಾರಿಯಾ, ಕೀಸಿ ಕಾರ್ಟಿ, ಡೊಮಿನಿಕ್​ ಡ್ರೇಕ್ಸ್​, ಶಿಮ್ರೊನ್​ ಹೆಟ್ಮೆಯರ್​, ಅಲ್ಜಾರಿ ಜೋಸ್​ೆ, ಬ್ರೆಂಡನ್​ ಕಿಂಗ್​, ಕೈಲ್​ ಮೇಯರ್ಸ್​, ಗುಡಾಕೇಶ್​ ಮೋತಿ, ಜೇಡನ್​ ಸೀಲ್ಸ್​, ರೊಮಾರಿಯೊ ಶೆರ್ಡ್​, ಕೆವಿನ್​ ಸಿಂಕ್ಲೇರ್​, ಒಶಾನೆ ಥಾಮಸ್​.

    ಎಮರ್ಜಿಂಗ್​ ಟೂರ್ನಿಯಲ್ಲಿ ಸೀನಿಯರ್ಸ್​ ಆಡಿಸಿದ ಪಾಕ್​! ಮೋಸ ಹೋಯಿತೇ ಭಾರತ?

    ಆಸೀಸ್​ ಕ್ರಿಕೆಟಿಗ ಮ್ಯಾಕ್ಸ್​ವೆಲ್​ ಪತ್ನಿಗೆ ಹಿಂದು ಸಂಪ್ರದಾಯದಂತೆ ಸೀಮಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts