More

    ಆಸೀಸ್​ ಕ್ರಿಕೆಟಿಗ ಮ್ಯಾಕ್ಸ್​ವೆಲ್​ ಪತ್ನಿಗೆ ಹಿಂದು ಸಂಪ್ರದಾಯದಂತೆ ಸೀಮಂತ

    ಮೆಲ್ಬೋರ್ನ್​: ಆಸ್ಟ್ರೆಲಿಯಾ ಮತ್ತು ಆರ್​ಸಿಬಿ ತಂಡದ ಆಲ್ರೌಂಡರ್​ ಗ್ಲೆನ್​ ಮ್ಯಾಕ್ಸ್​ವೆಲ್​ ಭಾರತ ಮೂಲದ ವಿನಿ ರಾಮನ್​ ಜತೆಗೆ ವಿವಾಹವಾಗಿರುವುದು ಈಗಾಗಲೆ ಕ್ರಿಕೆಟ್​ ಪ್ರೇಮಿಗಳಿಗೆ ತಿಳಿದೇ ಇದೆ. 2022ರಲ್ಲಿ ವಿನಿ ರಾಮನ್​ ಅವರನ್ನು ಹಿಂದು ಮತ್ತು ಕ್ರಿಶ್ಚಿಯನ್​ ಸಂಪ್ರದಾಯದ ಪ್ರಕಾರ ವಿವಾಹವಾಗುವ ಮೂಲಕ ಮ್ಯಾಕ್ಸ್​ವೆಲ್​ ಭಾರತೀಯರ ಗಮನಸೆಳೆದಿದ್ದರು. ಇದೀಗ ದಂಪತಿ ಮೊದಲ ಮಗುವಿನ ನಿರೀೆಯಲ್ಲಿದ್ದು, ಹಿಂದು ಸಂಪ್ರದಾಯದಂತೆ ನಡೆದ ವಿನಿ ರಾಮನ್​ ಅವರ ಸೀಮಂತ ಕಾರ್ಯಕ್ರಮ ಗಮನಸೆಳೆದಿದೆ.

    ತಮಿಳು ಸಂಸತಿಯ ಅನ್ವಯ ನಡೆದ ಸೀಮಂತ ಕಾರ್ಯಕ್ರಮದ ಚಿತ್ರಗಳನ್ನು ವಿನಿ ರಾಮನ್​ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನೀಲಿ ಬಣ್ಣದ ಸೀರೆಯಲ್ಲಿ ವಿನಿ ರಾಮನ್​ ಕಂಗೊಳಿಸಿದ್ದು, ಪತಿ ಮ್ಯಾಕ್ಸ್​ವೆಲ್​ ಕೂಡ ತುಂಬು ಗರ್ಭಿಣಿ ಪತ್ನಿ ಜತೆಗೆ ಪೋಸ್​ ನೀಡಿ ಸಂಭ್ರಮಿಸಿದ್ದಾರೆ.

    ಮ್ಯಾಕ್ಸ್​ವೆಲ್​ ಅಪ್ಪನಾಗುತ್ತಿರುವ ವಿಷಯವನ್ನು ವಿನಿ ರಾಮನ್​ ಕಳೆದ ಐಪಿಎಲ್​ 16ನೇ ಆವೃತ್ತಿಯ ಸಮಯದಲ್ಲೇ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಅಲ್ಲದೆ ಸೆಪ್ಟೆಂಬರ್​ ತಿಂಗಳಲ್ಲಿ ಮಗುವಿನ ಆಗಮನದ ನಿರೀೆಯಲ್ಲಿರುವುದಾಗಿಯೂ ತಿಳಿಸಿದ್ದರು. ತನಗೆ ಈ ಹಿಂದೆ ಕೆಲಬಾರಿ ಗರ್ಭಪಾತವಾಗಿದ್ದನ್ನೂ ಬಹಿರಂಗಪಡಿಸಿದ್ದ ವಿನಿ, ತಾಯಿಯಾಗುತ್ತಿರುವ ಬಗ್ಗೆ ಸಂಭ್ರಮ ಹಂಚಿಕೊಂಡಿದ್ದರು.

    ಭಾರತದಲ್ಲಿ ಪುರುಷರ ಕ್ರಿಕೆಟ್​ ತಂಡಕ್ಕೆ ಮೊದಲ ಬಾರಿ ಮಹಿಳಾ ಕೋಚ್​; ಕನ್ನಡತಿಗೆ ಹೆಗ್ಗಳಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts