More

    ಭಾರತದಲ್ಲಿ ಪುರುಷರ ಕ್ರಿಕೆಟ್​ ತಂಡಕ್ಕೆ ಮೊದಲ ಬಾರಿ ಮಹಿಳಾ ಕೋಚ್​; ಕನ್ನಡತಿಗೆ ಹೆಗ್ಗಳಿಕೆ!

    ಬೆಂಗಳೂರು: ಭಾರತದಲ್ಲಿ ಪುರುಷರ ಕ್ರಿಕೆಟ್​ ತಂಡಕ್ಕೆ ಮುಖ್ಯ ಕೋಚ್​ ಆಗಿ ಕಾರ್ಯನಿರ್ವಹಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯೊಂದು ಕನ್ನಡತಿಗೆ ಒಲಿದು ಬಂದಿದೆ. ರಾಜ್ಯದ ಮಾಜಿ ಆಟಗಾರ್ತಿ ವಿಆರ್​ ವನಿತಾ ಮುಂಬರುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಆಡಲಿರುವ ಶಿವಮೊಗ್ಗ ಲಯನ್ಸ್​ ತಂಡಕ್ಕೆ ಮುಖ್ಯ ಕೋಚ್​ ಆಗಿ ಕಾರ್ಯನಿರ್ವಹಿಸಲಿದ್ದಾರೆ. 33 ವರ್ಷದ ವನಿತಾ ಮಹಿಳಾ ಐಪಿಎಲ್​ ಖ್ಯಾತಿಯ ವುಮೆನ್ಸ್​ ಪ್ರೀಮಿಯರ್​ ಲೀಗ್​ನಲ್ಲಿ ಆರ್​ಸಿಬಿ ಮಹಿಳಾ ತಂಡಕ್ಕೆ ಫೀಲ್ಡಿಂಗ್​ ಕೋಚ್​ ಆಗಿದ್ದರು. ಭಾರತ ಮಹಿಳಾ ತಂಡದ ಪರ 16 ಏಕದಿನ ಮತ್ತು 6 ಟಿ20 ಪಂದ್ಯ ಆಡಿರುವ ವನಿತಾ, ಕಳೆದ ವರ್ಷ ಫೆಬ್ರವರಿಯಲ್ಲಿ ನಿವೃತ್ತಿ ಹೊಂದಿದ ಬಳಿಕ ಕೋಚಿಂಗ್​ನತ್ತ ಗಮನಹರಿಸಿದ್ದರು.

    “ಪುರುಷರ ತಂಡಕ್ಕೂ ತರಬೇತಿ ನಿಡುವ ಬಗ್ಗೆ ದೀರ್ಸಮಯದಿಂದಲೇ ಯೋಚಿಸುತ್ತಿದ್ದೆ. ನಾನು ಸಹಾಯಕ ಕೋಚ್​ ಆಗಿಯಾದರೂ ತಂಡ ಸೇರಿಕೊಳ್ಳಬೇಕೆಂದಿದ್ದೆ. ಆದರೆ ಫ್ರಾಂಚೈಸಿಯವರು, ನಾನು ಮುಖ್ಯ ಕೋಚ್​ ಆಗುವ ಅರ್ಹತೆ ಹೊಂದಿದ್ದೇನೆ ಎಂದು ವಿಶ್ವಾಸ ತುಂಬಿದರು’ ಎಂದು ವನಿತಾ ಹೇಳಿಕೊಂಡಿದ್ದಾರೆ. ಅವರು ರಾಜ್ಯ 16 ವಯೋಮಿತಿ ಮಹಿಳಾ ತಂಡದ ಕೋಚ್​ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಆಸ್ಟ್ರೆಲಿಯಾದ ಮೆಲ್ಬೋರ್ನ್​ನಲ್ಲಿ ವನಿತಾ ಕ್ರಿಕೆಟ್​ ವಿಕ್ಟೋರಿಯಾದ ಇಂಟರ್​ನ್ಯಾಷನಲ್​ ಕೋಚಿಂಗ್​ ಕೋರ್ಸ್​ ಕೂಡ ರ್ಪೂಗೊಳಿಸಿದ್ದಾರೆ. ಆರ್​ಸಿಬಿ ಮಹಿಳಾ ತಂಡದ ಪರ ಹರಾಜಿನಲ್ಲಿ ಭಾಗವಹಿಸಿದ್ದ ಅನುಭವದೊಂದಿಗೆ ವನಿತಾ, ಶನಿವಾರ ನಡೆದ ಮಹಾರಾಜ ಟ್ರೋಫಿ ಆಟಗಾರರ ಹರಾಜಿನಲ್ಲಿ ಅಭಿನವ್​ ಮನೋಹರ್​, ಶ್ರೇಯಸ್​ ಗೋಪಾಲ್​, ನಿಹಾಲ್​ ಉಲ್ಲಾಳ್​, ವಿ. ಕೌಶಿಕ್​, ರೋಹನ್​ ಕದಂ ಅವರಂಥ ರಾಜ್ಯದ ಟಿ20 ತಾರೆಯರನ್ನು ಶಿವಮೊಗ್ಗ ಲಯನ್ಸ್​ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

    ಪುರುಷರ ಕ್ರಿಕೆಟ್​ ತಂಡಕ್ಕೆ ಮಹಿಳೆಯೊಬ್ಬರು ಕೋಚ್​ ಆಗುತ್ತಿರುವುದು ಇದೇ ಮೊದಲಲ್ಲ. 2021ರಲ್ಲಿ ಇಂಗ್ಲೆಂಡ್​ನ ಮಾಜಿ ವಿಕೆಟ್​ ಕೀಪರ್​ ಸಾರಾ ಟೇಲರ್​ ಪುರುಷರ ವೃತ್ತಿಪರ ಫ್ರಾಂಚೈಸಿ ಕ್ರಿಕೆಟ್​ ತಂಡಕ್ಕೆ ಕೋಚ್​ ಆದ ಮೊದಲ ಮಹಿಳೆ ಎನಿಸಿದ್ದರು. ಆಸ್ಟ್ರೆಲಿಯಾದ ಪುರುಷರ ಬಿಗ್​ಬಾಷ್​ ಟಿ20 ಲೀಗ್​ನಲ್ಲಿ ಜೂಲಿಯಾ ಪೆಸ್​ 2019ರಲ್ಲೇ ಬ್ರಿಸ್ಬೇನ್​ ಹೀಟ್ಸ್​ ತಂಡಕ್ಕೆ ಸಹಾಯಕ ಕೋಚ್​ ಆಗಿದ್ದರು. ಆದರೆ ಭಾರತದಲ್ಲಿ ಮಹಿಳೆಯೊಬ್ಬರು ಪುರುಷರ ವೃತ್ತಿಪರ ತಂಡಕ್ಕೆ ತರಬೇತುದಾರರಾಗುತ್ತಿರುವುದು ಇದೇ ಮೊದಲಾಗಿದೆ.

    ಮಹಿಳಾ ಕ್ರಿಕೆಟರ್​ ಸ್ಮೃತಿ ಮಂದನಾ ಬರ್ತ್​ಡೇಗೆ ಬಾಂಗ್ಲಾದೇಶದಲ್ಲಿ ಸಪ್ರ್ರೈಸ್​ ನೀಡಿದ ಬಾಯ್​ಫ್ರೆಂಡ್​!

    VIDEO: ಏಕದಿನ ವಿಶ್ವಕಪ್​ಗೆ ಶಾರುಖ್​ ಖಾನ್​ ವಿಶೇಷ ಪ್ರಚಾರ; ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts