More

    ಮಹಿಳಾ ಕ್ರಿಕೆಟರ್​ ಸ್ಮೃತಿ ಮಂದನಾ ಬರ್ತ್​ಡೇಗೆ ಬಾಂಗ್ಲಾದೇಶದಲ್ಲಿ ಸಪ್ರ್ರೈಸ್​ ನೀಡಿದ ಬಾಯ್​ಫ್ರೆಂಡ್​!

    ನವದೆಹಲಿ: ಭಾರತ ಮಹಿಳಾ ಕ್ರಿಕೆಟ್​ ತಂಡದ ಸದ್ಯ ಬಾಂಗ್ಲಾದೇಶ ಪ್ರವಾಸದಲ್ಲಿದೆ. ಇದರ ನಡುವೆ ಭಾರತ ತಂಡದ ಉಪನಾಯಕಿ ಹಾಗೂ ಎಡಗೈ ಆರಂಭಿಕ ಬ್ಯಾಟುಗಾರ್ತಿ ಸ್ಮೃತಿ ಮಂದನಾ ಮಂಗಳವಾರ 23ನೇ ಜನ್ಮದಿನಕ್ಕೆ ಕಾಲಿಟ್ಟರು. ವಿದೇಶ ಪ್ರವಾಸದಲ್ಲಿದ್ದರೂ ಅವರಿಗೆ ಅಚ್ಚರಿ ನೀಡುವ ಮೂಲಕ ಅವರ ಬಾಯ್​ಫ್ರೆಂಡ್​ ಈ ಜನ್ಮದಿನವನ್ನು ವಿಶೇಷವಾಗಿಸಿದರು.

    ಜನಪ್ರಿಯ ಗಾಯಕಿ ಪಾಲಕ್​ ಮುಚ್ಚಲ್​ ಅವರ ಸಹೋದರ ಹಾಗೂ ಸಂಗೀತ ಸಂಯೋಜಕ ಪಲಾಶ್​ ಮುಚ್ಚಲ್​ ಅವರು ಸ್ಮೃತಿ ಮಂದನಾ ಅವರ ಬಾಯ್​ಫ್ರೆಂಡ್​ ಆಗಿದ್ದಾರೆ ಎಂದು ಈಗಾಗಲೆ ಸುದ್ದಿ ಹರಡಿತ್ತು. ಮುಂಬೈ ಆಟಗಾರ್ತಿ ಸ್ಮೃತಿ ಜನ್ಮದಿನದಂದು ಬಾಂಗ್ಲಾದೇಶದ ಢಾಕಾಗೆ ತೆರಳಿ ಅಚ್ಚರಿ ನೀಡುವ ಮೂಲಕ ಮತ್ತು ಸ್ಮೃತಿ ಜತೆ ಆತ್ಮೀಯವಾಗಿರುವ ಚಿತ್ರವನ್ನು ಇನ್​ಸ್ಟಾಗ್ರಾಮ್​ನಲ್ಲಿ ಪ್ರಕಟಿಸುವ ಮೂಲಕ ಪಲಾಶ್​ ಮುಚ್ಚಲ್​ ಇದಕ್ಕೆ ಬಹುತೇಕ ಅಧಿಕೃತ ಮುದ್ರೆ ಒತ್ತಿದ್ದಾರೆ.

    ಕೆಲದಿನಗಳ ಹಿಂದೆ ಪಲಾಶ್​ ಮುಚ್ಚನ್​ ತನ್ನ 28ನೇ ಜನ್ಮದಿನದಂದು ಕೂಡ ಸ್ಮೃತಿ ಮಂದನಾ ಜತೆ ಟೀಮ್​ ಇಂಡಿಯಾದ ನೀಲಿ ಜೆರ್ಸಿ ಧರಿಸಿರುವ ಚಿತ್ರವನ್ನು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಭಾರತ ತಂಡದ ಪರ 4 ಟೆಸ್ಟ್​, 79 ಏಕದಿನ ಮತ್ತು 119 ಟಿ20 ಪಂದ್ಯ ಆಡಿರುವ ಸ್ಮೃತಿ ಮಂದನಾ, ಮಹಿಳೆಯರ ಐಪಿಎಲ್​ ಖ್ಯಾತಿಯ ವುಮೆನ್ಸ್​ ಪ್ರೀಮಿಯರ್​ ಲೀಗ್​ನಲ್ಲಿ ಆರ್​ಸಿಬಿ ತಂಡದ ನಾಯಕಿಯಾಗಿದ್ದಾರೆ. ಆದರೆ ಇತ್ತೀಚೆಗೆ ತೀವ್ರ ರನ್​ಬರದಿಂದಾಗಿ ಸ್ಮೃತಿ ಮಂದನಾ ಬ್ಯಾಟಿಂಗ್​ನಲ್ಲಿ ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ.

    ದುಲೀಪ್​ ಟ್ರೋಫಿ ಗೆಲುವಿನ ಬೆನ್ನಲ್ಲೇ ಹನುಮ ವಿಹಾರಿಗೆ ಗುಡ್​ನ್ಯೂಸ್​!

    ಟೀಮ್​ ಇಂಡಿಯಾ ಪದಾರ್ಪಣೆ ಬೆನ್ನಲ್ಲೇ ಬಾಡಿಗೆಯಿಂದ ಸ್ವಂತ ಮನೆಗೆ ಶಿಫ್ಟ್​ ಆದ ಯಶಸ್ವಿ ಜೈಸ್ವಾಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts