ನವದೆಹಲಿ: ಸದ್ಯ ಭಾರತ ಟೆಸ್ಟ್ ತಂಡದಿಂದ ಹೊರಗಿರುವ ಬ್ಯಾಟರ್ ಹನುಮ ವಿಹಾರಿ ದಣ ವಲಯ ತಂಡದ ನಾಯಕರಾಗಿ ಹಾಲಿ ದೇಶೀಯ ಕ್ರಿಕೆಟ್ ಋತುವಿನ ಮೊದಲ ಟೂರ್ನಿಯಾದ ದುಲೀಪ್ ಟ್ರೋಫಿಯಲ್ಲಿ ಪ್ರಶಸ್ತಿ ಗೆಲುವು ಕಂಡ ಬೆನ್ನಲ್ಲೇ ಮತ್ತೊಂದು ಗುಡ್ನ್ಯೂಸ್ ಪಡೆದುಕೊಂಡಿದ್ದಾರೆ. ಪತ್ನಿ ಪ್ರೀತಿ ರಾಜ್ ಗಂಡು ಮಗುವಿಗೆ ಜನ್ಮ ನೀಡಿರುವ ವಿಷಯವನ್ನು ಹನುಮ ವಿಹಾರಿ ಸೋಮವಾರ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ದಣ ವಲಯ ತಂಡದ ನಾಯಕರಾಗಿ ಬೆಂಗಳೂರಿನಲ್ಲಿ ದುಲೀಪ್ ಟ್ರೋಫಿಯಲ್ಲಿ ಆಡುತ್ತಿದ್ದ ನಡುವೆ 10 ದಿನಗಳ ಹಿಂದೆ ಅಂದರೆ ಜುಲೈ 7ರಂದೇ ಪತ್ನಿ ಪ್ರೀತಿ ರಾಜ್ ಮಗುವಿಗೆ ಜನ್ಮ ನೀಡಿದ್ದಾರೆ ಎಂದೂ ಹನುಮ ವಿಹಾರಿ ಬಹಿರಂಗಪಡಿಸಿದ್ದಾರೆ. ದುಲೀಪ್ ಟ್ರೋಫಿಯಲ್ಲಿ ಆಡುತ್ತಿದ್ದ ಕಾರಣ ಅವರು ಮಗುವನ್ನು ನೋಡುವುದು ಮತ್ತು ಮಗುವಿನ ಜನನವನ್ನು ಪ್ರಕಟಿಸುವುದು ಕೂಡ ವಿಳಂಬಗೊಂಡಿದೆ.
“ಇವನ್ ಕಿಶ್’ ಎಂದು ಮಗುವಿನ ಹೆಸರನ್ನೂ ಹನುಮ ವಿಹಾರಿ ಪ್ರಕಟಿಸಿದ್ದಾರೆ. ಅವರ ಪೋಸ್ಟ್ಗೆ ಪ್ರತಿಯಾಗಿ ಭಾರತ ಟೆಸ್ಟ್ ತಂಡದ ನಾಯಕ ಅಜಿಂಕ್ಯ ರಹಾನೆ ಮತ್ತು ಅವರ ಪತ್ನಿ ರಾಧಿಕಾ ಅಭಿನಂದನೆ ಹೇಳಿ ಕಮೆಂಟ್ ಹಾಕಿದ್ದಾರೆ.
ಭಾರತ ಪರ 16 ಟೆಸ್ಟ್ ಆಡಿರುವ ವಿಹಾರಿ, ಕಳೆದ ವರ್ಷ ಕೊನೇ ಟೆಸ್ಟ್ ಆಡಿದ್ದರು. ಅಜಿಂಕ್ಯ ರಹಾನೆ ಪುನರಾಗಮನ ತನಗೆ ಸ್ಫೂರ್ತಿ ಎಂದೂ ವಿಹಾರಿ ಇತ್ತೀಚೆಗೆ ಹೇಳಿಕೊಂಡಿದ್ದರು. “ನನಗೆ ಈಗ 29 ವರ್ಷವಷ್ಟೇ. ರಹಾನೆ ಅವರು 35ನೇ ವಯಸ್ಸಿನಲ್ಲಿ ಭಾರತ ತಂಡಕ್ಕೆ ಮರಳಿದ್ದಾರೆ. ಹೀಗಿರುವಾಗ ನನಗಿನ್ನೂ ಸಾಕಷ್ಟು ಸಮಯವಿದೆ. ದೇಶೀಯ ಕ್ರಿಕೆಟ್ನಲ್ಲಿ ಉತ್ತಮವಾಗಿ ಆಡಿದರೆ ಖಂಡಿತವಾಗಿಯೂ ಮತ್ತೆ ಅವಕಾಶ ಸಿಗುತ್ತದೆ’ ಎಂದು ವಿಹಾರಿ ವಿಶ್ವಾಸ ವ್ಯಕ್ತಪಡಿಸಿದ್ದರು.
ಆರ್ಸಿಬಿ ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಯಜುವೇಂದ್ರ ಚಾಹಲ್ ಅಸಮಾಧಾನ