ಆರ್​ಸಿಬಿ ಟೀಮ್​ ಮ್ಯಾನೇಜ್​ಮೆಂಟ್​ ವಿರುದ್ಧ ಯಜುವೇಂದ್ರ ಚಾಹಲ್​ ಅಸಮಾಧಾನ

ನವದೆಹಲಿ: ಐಪಿಎಲ್​ನಲ್ಲಿ 2014ರಿಂದ 2021ರವರೆಗೆ ಆರ್​ಸಿಬಿ ತಂಡದ ಪ್ರಮುಖ ಭಾಗವಾಗಿದ್ದ ಸ್ಪಿನ್ನರ್​ ಯಜುವೇಂದ್ರ ಚಾಹಲ್​ ಇದೀಗ ರಾಜಸ್ಥಾನ ರಾಯಲ್ಸ್​ ತಂಡದ ಭಾಗವಾಗಿದ್ದಾರೆ. ಆರ್​ಸಿಬಿ ಪರ ಆಡುವಾಗ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದ ಚಾಹಲ್​ ಈಗಲೂ ಆರ್​ಸಿಬಿ ತಂಡದಿಂದ ಹೊರಬಿದ್ದ ಬಗ್ಗೆ ಬೇಸರ ಹೊಂದಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ತಮ್ಮನ್ನು ತಂಡದಿಂದ ಹೊರಕಳುಹಿಸಿದ ರೀತಿಯ ಬಗ್ಗೆ ಚಾಹಲ್​, ಆರ್​ಸಿಬಿ ಟೀಮ್​ ಮ್ಯಾನೇಜ್​ಮೆಂಟ್​ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ನಾನು ಆರ್​ಸಿಬಿ ಪರ ಸುಮಾರು 113 ಪಂದ್ಯ ಆಡಿರುವೆ. ಆದರೂ ನನ್ನನ್ನು ತಂಡದಿಂದ ಕೈಬಿಡುವ ಮುನ್ನ ಟೀಮ್​ ಮ್ಯಾನೇಜ್​ಮೆಂಟ್​ನಿಂದ ಸರಿಯಾದ ರೀತಿಯಲ್ಲಿ ಸಂವಹನ ನಡೆಯಲಿಲ್ಲ. ಹರಾಜಿನಲ್ಲಿ ನನ್ನನ್ನು ಮರಳಿ ಖರೀದಿಸುವ ಬಗ್ಗೆ ವಾಗ್ದಾನ ನೀಡಿದ್ದರು. ಆದರೆ ನಂತರ ನನ್ನನ್ನು ಕಡೆಗಣಿಸಿದ ಬಗ್ಗೆ ಸಿಟ್ಟಾದೆ. ಹರಾಜಿನಲ್ಲಿ ನನಗೆ ಅವರು ಯಾವುದೇ ಬಿಡ್​ ಸಲ್ಲಿಸಲಿಲ್ಲ. ನಾನು ಆರ್​ಸಿಬಿ ಪರ 8 ವರ್ಷ ಆಡಿದ್ದೆ ಮತ್ತು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ನನ್ನ ನೆಚ್ಚಿನ ಮೈದಾನವಾಗಿದೆ’ ಎಂದು ಚಾಹಲ್​ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

“ಖಂಡಿತವಾಗಿಯೂ ನಾನು ಮತ್ತೆ ಆರ್​ಸಿಬಿ ಪರ ಆಡಲು ಬಯಸಿದ್ದೆ. ಹರಾಜಿಗೆ ನನ್ನ ಹೆಸರು ಕಳುಹಿಸುವಾಗಲೇ ಮರಳಿ ಖರೀದಿಸುವ ಮಾತು ಕೊಟ್ಟಿದ್ದರು. ಆದರೆ ಹರಾಜಿನಲ್ಲಿ ನನಗೆ ಬಿಡ್​ ಸಲ್ಲಿಸಲಿಲ್ಲ. ಇದರಿಂದ ಸಿಟ್ಟಾದ ನಾನು ರಾಜಸ್ಥಾನ ರಾಯಲ್ಸ್​ ಪರ ಆರ್​ಸಿಬಿ ವಿರುದ್ಧ ಮೊದಲ ಪಂದ್ಯ ಆಡಿದಾಗ ಆರ್​ಸಿಬಿ ಮ್ಯಾನೇಜ್​ಮೆಂಟ್​ನ ಯಾರೊಂದಿಗೂ ಮಾತನಾಡಲಿಲ್ಲ’ ಎಂದು ಚಾಹಲ್​ ಹೇಳಿದ್ದಾರೆ. 2022ರಿಂದ ಚಾಹಲ್​ ರಾಜಸ್ಥಾನ ರಾಯಲ್ಸ್​ ಪರ 6.5 ಕೋಟಿ ರೂ. ಮೊತ್ತದ ಒಪ್ಪಂದಕ್ಕೆ ಆಡುತ್ತಿದ್ದಾರೆ. ಅದಕ್ಕೆ ಮುನ್ನ ಹರಾಜಿನಲ್ಲಿ ಚಾಹಲ್​ ಖರೀದಿಗೆ ಮುಂಬೈ, ಡೆಲ್ಲಿ, ಸನ್​ರೈಸರ್ಸ್​ ಮುಂತಾದ ತಂಡಗಳು ಬಿಡ್​ ಸಲ್ಲಿಸಿದರೂ, ಆರ್​ಸಿಬಿ ಯಾವುದೇ ಬಿಡ್​ ಸಲ್ಲಿಸಿರಲಿಲ್ಲ.

2011ರಲ್ಲಿ ಮುಂಬೈ ಇಂಡಿಯನ್ಸ್​ ಪರ ಐಪಿಎಲ್​ಗೆ ಪದಾರ್ಪಣೆ ಮಾಡಿದದ ಚಾಹಲ್​, 2014ರಲ್ಲಿ ಆರ್​ಸಿಬಿ ಸೇರಿದದರು. ಈಗಲೂ ಅವರು ಆರ್​ಸಿಬಿ ಪರ ಗರಿಷ್ಠ 139 ವಿಕೆಟ್​ ಕಬಳಿಸಿದ ಬೌಲರ್​ ಆಗಿದ್ದಾರೆ. “ಆರ್​ಸಿಬಿ ತಂಡದಿಂದ ನನ್ನ ವೃತ್ತೀಜಿವನ ಏಳ್ಗೆ ಕಂಡಿತು. ಹೀಗಾಗಿ ತಂಡದ ಮೇಲೆ ನನಗೆ ವಿಶೇಷ ಪ್ರೀತಿ ಇದೆ. ನನಗೆ 15 ಕೋಟಿ ರೂ. ಬಿಡ್​ ಮಾಡಬೇಕಿತ್ತು ಎಂದು ಹೇಳುವುದಿಲ್ಲ. ಆದರೆ ನನಗೆ 8 ಕೋಟಿ ರೂ. ನೀಡಿದರೂ ಸಾಕಿತ್ತು. ತಂಡದಲ್ಲಿ ಉಳಿದುಕೊಳ್ಳಲು ನಾನು ಯಾವುದೇ ರ್ನಿದಿಷ್ಟ ಮೊತ್ತದ ಬೇಡಿಕೆಯನ್ನೂ ಇಟ್ಟಿರಲಿಲ್ಲ’ ಎಂದು ಚಾಹಲ್​ ವಿವರಿಸಿದ್ದಾರೆ.

ಇದೇ ವೇಳೆ ರಾಜಸ್ಥಾನ ರಾಯಲ್ಸ್​ ತಂಡ ಸೇರಿದ ಬಗ್ಗೆ ಯಾವುದೇ ವಿಷಾದ ಹೊಂದಿರದ ಚಾಹಲ್​, “ಆರ್​ಸಿಬಿ ತಂಡದಲ್ಲಿ ನನ್ನ ಓವರ್​ಗಳು 16-17ನೇ ಓವರ್​ ವೇಳೆಗೆ ಮುಗಿದಿರುತ್ತಿತ್ತು. ರಾಜಸ್ಥಾನ ತಂಡದಲ್ಲಿ ನಾನು ಡೆತ್​ ಓವರ್​ ಬೌಲರ್​ ಆದೆ. ಇದು ನನ್ನ ವೃತ್ತೀಜಿವನದ ಪ್ರಗತಿಗೆ ಕಾರಣವಾಗಿದೆ. ಆರ್​ಸಿಬಿ ಮೇಲಿನ ಪ್ರೀತಿ ಹಾಗೆಯೇ ಇದ್ದರೂ, ರಾಜಸ್ಥಾನ ತಂಡದಿಂದಲೂ ನನ್ನ ಕ್ರಿಕೆಟ್​ ಬದುಕಿಗೆ ನೆರವಾಗಿದೆ ಎಂಬುದು ಸತ್ಯ’ ಎಂದಿದ್ದಾರೆ.

ಫುಟ್​ಬಾಲ್​ ತಾರೆಯಿಂದ ಬೇರ್ಪಟ್ಟ ಬಳಿಕ ಬಾಸ್ಕೆಟ್​ಬಾಲ್​ ಆಟಗಾರನೊಂದಿಗೆ ಶಕೀರಾ ಡೇಟಿಂಗ್​!

ಟೀಮ್​ ಇಂಡಿಯಾ ಪದಾರ್ಪಣೆ ಬೆನ್ನಲ್ಲೇ ಬಾಡಿಗೆಯಿಂದ ಸ್ವಂತ ಮನೆಗೆ ಶಿಫ್ಟ್​ ಆದ ಯಶಸ್ವಿ ಜೈಸ್ವಾಲ್​!

vijayavani.net/muslim-ex-pak-pacer-makes-controversial-claim-ahead-of-odi-world-cup

Share This Article

ಭಗವಂತ ಶ್ರೀರಾಮನ ಜೀವನದ ಈ 5 ತತ್ವವನ್ನು ಅಳವಡಿಸಿಕೊಳ್ಳಿ | Success Tips

ಭಾರತದಲ್ಲಿ ಶ್ರೀರಾಮನನ್ನು ಅತಿ ಹೆಚ್ಚು ಪೂಜಿಸಲಾಗುತ್ತದೆ. ಲಂಕಾದ ರಾವಣನ ಮೇಲೆ ಶ್ರೀರಾಮನ ವಿಜಯವನ್ನು ಇಂದಿಗೂ ದಸರಾ…

ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…

ಬೆಂಗಳೂರು:  ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…

ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower

ಬೆಂಗಳೂರು:  ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…