

ಮುಂದುವರಿದ ಭಾಗ...
ಹಗಲಿನಲ್ಲಿ ತಯಾರಿಸಿದ ಗ್ಲೂಕೋಸ್ ಮತ್ತು ಪ್ರೊಟೀನ್‌ಗಳು ಮರದ ಇತರ ಭಾಗಗಳಿಗೆ ತಲುಪಬೇಕೆಂದರೆ, ಅದಕ್ಕೆ ಶಾಖದ ಜತೆಗೆ, ಶಕ್ತಿಯ ರೂಪದಲ್ಲಿ ಆಮ್ಲಜನಕದ ಅವಶ್ಯಕತೆ ಇರುತ್ತದೆ. ಆದ್ದರಿಂದ ರಾತ್ರಿಯ ಸಮಯದಲ್ಲಿ, ಪತ್ರರಂಧ್ರಗಳು ಮತ್ತು ಬೇರಿನ ರೋಮಗಳ ಮೂಲಕ ಉಸಿರಾಟ ಮಾಡಿ ಆಮ್ಲಜನಕವನ್ನು ತೆಗೆದುಕೊಂಡು, ತಯಾರಾದ ಆಹಾರದ ಜತೆ ಸೇರಿ ಪ್ರಕ್ರಿಯೆಗೊಳಿಸಿ ಮರದ ಇತರ ಭಾಗಗಳಿಗೆ ಫ್ಲೂಯಂಗಳ ಮುಖಾಂತರ ಆಹಾರವನ್ನು ತಲುಪಿಸುತ್ತವೆ. ಆ ಸಂದರ್ಭದಲ್ಲಿ ಇಂಗಾಲದ ಡೈಆಕ್ಸೈಡ್ ಉತ್ಪತ್ತಿಯಾಗಿ ಎಲೆಗಳ ಪತ್ರರಂಧ್ರಗಳ ಮುಖಾಂತರ ಹೊರಬರುತ್ತದೆ.
ಬೆಳಗ್ಗೆ ಪುನಃ ಪನರಾವರ್ತನೆ ಆರಂಭವಾಗುತ್ತದೆ. ರಾತ್ರಿ ಪೂರ್ತಿ ಇಂಗಾಲದ ಡೈಆಕ್ಸೈಡ್‌ನ್ನು ತೆಗೆದುಕೊಳ್ಳದೇ, ತಯಾರಾದ ಆಹಾರ ಮತ್ತು ದೇಹದ ಉಷ್ಣಾಂಶ ಖಾಲಿಯಾಗಿರುವುದರಿಂದ ಮುಂಜಾನೆ ಹಸಿವಾಗಿರುತ್ತದೆ. ಆದ್ದರಿಂದ ಬೆಳಗಾದ ಕೂಡಲೆ, ಎಲೆಗಳಲ್ಲಿರುವ ಪತ್ರರಂಧ್ರಗಳು, ಬಾಯಿ ತೆರೆದು ಗಬಗಬನೆ ಇಂಗಾಲದ ಡೈಆಕ್ಸೈಡ್ ಮತ್ತು ಶಾಖವನ್ನು ತೆಗೆದುಕೊಂಡು ಮರಕ್ಕೆ ಬೇಕಾಗಿರುವ ಆಹಾರವನ್ನು ತಯಾರುಮಾಡಿ ಮರದ ಉಷ್ಣಾಂಶವನ್ನು ಸರಿದೂಗಿಸುತ್ತವೆ. ಆ ಸಂದರ್ಭದಲ್ಲಿ ಗಿಡಮರಗಳಿಗೆ ನೀರಿನ ಅಗತ್ಯತೆ ಜಾಸ್ತಿ ಇರುತ್ತದೆ. ಆದ್ದರಿಂದ ರೈತರು ತಾವು ಬೆಳೆಯುವ ಬೆಳೆಗೆ ಬೆಳಗಿನ ಜಾವದಲ್ಲಿ ನೀರನ್ನು ಕೊಡಬೇಕು. ಆದ್ದರಿಂದ ಬೆಳಗಿನ ಸಮಯದಲ್ಲಿ ಆಮ್ಲಜನಕವು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತದೆ.