More

    ಸಸ್ಯ ಜನಿಸಿ 33 ಕೋಟಿ ವರ್ಷವಾದರೂ ಬಿಟ್ಟಿರಲಿಲ್ಲ ಹೂವು! ಯಾರಿಗೂ ತಿಳಿಯದ ವಿಚಾರಗಳಿವು..

    ಮುಂದುವರಿದ ಭಾಗ..

    ಸಸ್ಯ ಜನಿಸಿ 33 ಕೋಟಿ ವರ್ಷವಾದರೂ ಬಿಟ್ಟಿರಲಿಲ್ಲ ಹೂವು! ಯಾರಿಗೂ ತಿಳಿಯದ ವಿಚಾರಗಳಿವು..ಸಸ್ಯಗಳು ನೆಲದ ಮೇಲೆ ಹುಟ್ಟಿ 47.5 ಕೋಟಿ ವರ್ಷವಾಗಿದ್ದರೂ, ಅವುಗಳಿಗೆ ಹೂವು ಮತ್ತು ಕಾಯಿ ಬಂದಿದ್ದು ಕೇವಲ 15 ಕೋಟಿ ವರ್ಷಗಳ ಹಿಂದೆ. ಮೊದಲ 33 ಕೋಟಿ ವರ್ಷಗಳ ಕಾಲ ಅವುಗಳಿಗೆ ಹೂವೇ ಇರಲಿಲ್ಲ. ಈಗ ನಮಗೆ ಅದನ್ನು ಊಹೆ ಮಾಡಿಕೊಳ್ಳುವುದೂ ಕಷ್ಟಕರ. ಹೀಗೆ ಹಲವಾರು ಮಾರ್ಪಾಡುಗಳನ್ನು ಮಾಡಿಕೊಂಡು ಈ ಸಸ್ಯಗಳು ನೆಲದ ಮೇಲೆ ಬೆಳೆದಿವೆ. ಈಗಲೂ ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತಲೇ ಇವೆ, ಇನ್ನು ಮುಂದೆಯೂ ಬದಲಾವಣೆಗಳು ನಡೆಯುತ್ತಲೇ ಇರುತ್ತವೆ.

    ಇತರ ಜೀವಿಗಳಲ್ಲಿ ಮೀನುಗಳು, ಕೀಟಗಳು, ಉಭಯಜೀವಿ, ಸರೀಸೃಪ ಮತ್ತು ಸ್ತನಿ ಎಂಬ ಮುಖ್ಯವಾದ ಐದು ಪಂಗಡಗಳಾಗಿ ವಿಕಾಸಗೊಂಡಿವೆ. ಅದೇ ರೀತಿ ಸಸ್ಯಗಳಲ್ಲಿಯೂ ಮುಖ್ಯವಾಗಿ ಎಂಟು ಪಂಗಡಗಳಿವೆ. ಪ್ರಾಣಿಗಳು ವಿಕಾಸಗೊಂಡಂತೆಯೇ ಈ ಸಸ್ಯಗಳೂ ಕೂಡ ಹಲವು ಕೋಟಿ ವರ್ಷಗಳ ಅಂತರದಲ್ಲಿ, ಪ್ರತಿ ಪಂಗಡದೊಳಗೆ ಲಕ್ಷಾಂತರ ಉಪ ಪಂಗಡಗಳಾಗಿ ವಿಕಾಸಗೊಂಡಿವೆ. ಅವುಗಳು ವಿಕಾಸಗೊಂಡಂತೆ ಅವುಗಳ ದೇಹ ರಚನೆ, ಅಂಗಾಂಗಗಳು, ಹಾರ್ಮೋನ್ ಕಿಣ್ವಗಳ ಉತ್ಪಾದನೆ ಮತ್ತು ಅವುಗಳ ದೇಹ ಚಟುವಟಿಕೆಗಳಲ್ಲಿ ವ್ಯತ್ಯಾಸವಾಗಿದೆ. ಆದ್ದರಿಂದ ದ್ಯುತಿಸಂಶ್ಲೇಷಣೆ, ಉಸಿರಾಟ, ಮಣ್ಣಿನಿಂದ ಲವಣಾಂಶಗಳನ್ನು ತೆಗೆದುಕೊಳ್ಳುವುದು, ಪ್ರೊಟೀನ್ ತಯಾರಿಸುವುದು, ಹೀಗೆ ಎಲ್ಲ ಕ್ರಿಯೆಗಳಲ್ಲಿ ಒಂದು ಸಸ್ಯಜಾತಿಯಿಂದ ಇನ್ನೊಂದು ಸಸ್ಯಜಾತಿಗೆ ವ್ಯತ್ಯಾಸವಾಗುತ್ತದೆ. ಇವೆಲ್ಲ ವ್ಯತ್ಯಾಸಗಳಿಗೆ ಕಾರಣ ಶಿಲೀಂದ್ರಗಳು.

    ಕೆಲವು ಸಸ್ಯಗಳು ರಾತ್ರಿಯ ಸಮಯದಲ್ಲಿ ಮಾತ್ರ ದ್ಯುತಿಸಂಶ್ಲೇಷಣೆ ಮಾಡುತ್ತವೆ. ಉದಾಹರಣೆಗೆ ಪಾಪಾಸ್ ಕಳ್ಳಿ, ಎಲೆ ಬಿಡದ ಇತರ ಸಸ್ಯಗಳು, ದಪ್ಪ ದಪ್ಪ ಎಲೆ ಬಿಡುವ ಸಸ್ಯಗಳು, ರಾತ್ರಿ ರಾಣಿ ಹೂವು ಮುಂತಾದವು. ಕೆಲವು ಇತರ ಸಸ್ಯಗಳು ಕಡಿಮೆ ಉಷ್ಣಾಂಶವಿದ್ದರೆ ದ್ಯುತಿಸಂಶ್ಲೇಷಣೆ ಮಾಡುತ್ತವೆ, ಇನ್ನೂ ಕೆಲವು ಸಸ್ಯಗಳಿಗೆ ಹೆಚ್ಚು ಉಷ್ಣಾಂಶ ಬೇಕು.

    ಹೂವಿನ ಹಿಂದಿನ ರೋಚಕ ಕಥೆಯಿದು.. ಕಾಲಕ್ಕೆ ತಕ್ಕಂತೆ ಬದಲಾಗುತ್ತೆ ಸಸ್ಯಗಳ ಯೋಚನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts