ಕೋಲ್ಕತಾ: ವೈದ್ಯಕೀಯ ಕಾಲೇಜಿನಲ್ಲಿ ಮಹಿಳಾ ವೈದ್ಯೆ ಕೊಲೆ ಮತ್ತು ಅತ್ಯಾಚಾರ ಪ್ರಕರಣ ಸದ್ಯ ದೇಶದಲ್ಲಿ ಸಂಚಲನ ಮೂಡಿಸಿದೆ. ಈ ಪಾಪಿ ಕೃತ್ಯವನ್ನು ವಿರೋಧಿಸಿ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ. ದೆಹಲಿಯ ನಿರ್ಭಯಾ ಪ್ರಕರಣ, ಹತ್ರಾಸ್, ಉನ್ನಾವೋ, ಪಶ್ಚಿಮ ಬಂಗಾಳದ ಘಟನೆಗಳು ಜನರನ್ನು ಬೆಚ್ಚಿಬೀಳಿಸುತ್ತಿದೆ. ಒಂದು ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹತ್ಯೆ ಮತ್ತು ಅತ್ಯಾಚಾರ ಪ್ರಕರಣ ಬೆಳಕಿಗೆ ಬರುತ್ತಿರುವುದು ಶೋಚನೀಯ ಸ್ಥಿತಿಯೇ ಸರಿ.
ಇದನ್ನು ಓದಿ: ತಾಯಿ ಅನಾರೋಗ್ಯದಿಂದ ಕರ್ತವ್ಯಕ್ಕೆ ಗೈರು; ವಜಾಗೊಳಿಸಿದ್ದ ಸಿಆರ್ಪಿಎಫ್ ಸಿಬ್ಬಂದಿ ಮರುನೇಮಕಕ್ಕೆ ಕೋರ್ಟ್ ಆದೇಶ
ದೇಶಾದ್ಯಂತ ವೈದ್ಯರ ಆಕ್ರೋಶಕ್ಕೆ ಕಾರಣವಾಗಿರುವ ಕೋಲ್ಕತಾ ವೈದ್ಯೆಯ ಕೊಲೆ ಮತ್ತು ಅತ್ಯಾಚಾರ ಪ್ರಕರಣದ ತನಿಖೆಯನ್ನು ನ್ಯಾಯಾಲಯವು ಕೇಂದ್ರೀಯ ತನಿಖಾ ದಳಕ್ಕೆ(ಸಿಬಿಐ) ವಹಿಸಿದೆ. ಅಸಲಿಗೆ ಮೊದಲಿಗೆ ಈ ಪ್ರಕರಣದ ತನಿಖೆಯನ್ನು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ರಾಜ್ಯ ಪೊಲೀಸರಿಗೆ ವಹಿಸಿದ್ದರು ಹಾಗೂ 6 ದಿನಗಳ ಗಡುವು ನೀಡಿದ್ದರು. ನಗರ ಪೊಲೀಸರು ನೀಡಿದ ಗಡುವಿನೊಳಗೆ ತನಿಖೆ ಮುಗಿಸಲು ಸಾಧ್ಯವಾಗದಿದ್ದರೆ, ಸಿಬಿಐ ತನಿಖೆಗೆ ರಾಜ್ಯ ಸರ್ಕಾರವು ಶಿಫಾರಸು ಮಾಡುವುದಾಗಿ ಹೇಳಿದ್ದರು.
ಆದರೆ ಪೊಲೀಸರಿಗೆ ನೀಡಿದ ಗಡುವಿಗೆ ಐದು ದಿನಗಳ ಮೊದಲೆ ಕೋಲ್ಕತಾ ಹೈಕೋರ್ಟ್ ಮಧ್ಯಪ್ರವೇಶಿಸಿ ಪ್ರಕರಣವನ್ನು ಸಿಬಿಐಗೆ ವರ್ಗಾಹಿಸಲು ಆದೇಶಿಸಿತು. ಮೊದಲ ವಿಚಾರಣೆಯ ಸಮಯದಲ್ಲೇ ಸಿಬಿಐ ವರ್ಗಾಹಿಸಿ ಆದೇಶಿಸಿರುವ ಅಪರೂಪದ ಪ್ರಕರಣ ಇದಾಗಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರಿಸಲು ಕಾರಣ ಏನೆಂಬುದು ಹೈಕೋರ್ಟ್ ನೀಡಿದ ಆದೇಶದಲ್ಲಿ ತಿಳಿಯುತ್ತದೆ.
ತನಿಖೆಯಲ್ಲಿ ಇದುವರೆಗೂ ಯಾವುದೇ ಮಹತ್ವದ ಪ್ರಗತಿಯಾಗಿಲ್ಲ. ಇದರಿಂದ ಸಾಕ್ಷ್ಯ ನಾಶದ ಸಾಧ್ಯತೆಯನ್ನು ಹಾಗೂ ತನಿಖೆಯನ್ನು ಸಿಬಿಐ ಅಥವಾ ಇನ್ನಾವುದೇ ಸ್ವತಂತ್ರ ಸಂಸ್ಥೆಗೆ ಹಸ್ತಾಂತರಿಸುವಂತೆ ಮನವಿ ಮಾಡಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು, ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿದರೆ ರಾಜ್ಯಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಸಿಎಂ ಮಮತಾ ಬ್ಯಾನರ್ಜಿ ಅವರು ಹೇಳಿಕೆಯನ್ನು ನ್ಯಾಯಾಲಯ ಗಮಸಿನಿದೆ. ಜತೆಗೆ ನಿಷ್ಪಕ್ಷಪಾತ ತನಿಖೆಗೆ ಸಂತ್ರಸ್ತೆಯ ಕುಟುಂಬ ಮಾಡಿರುವ ಮನವಿಯನ್ನು ಪರಿಗಣನೆಗೆ ತೆಗೆದುಕೊಂಡಿದೆ.
ಸಿಬಿಐಗೆ ವರ್ಗಾಹಿಸಿ ಆದೇಶ ನೀಡಿದ ಬಳಿಕ ಹೈಕೋರ್ಟ್, ಸುಪ್ರೀಂ ಕೋರ್ಟ್‌ನ ವಿವಿಧ ತೀರ್ಪುಗಳು ಈ ಪ್ರಕರಣದ ಆದೇಶದಕ್ಕೆ ಮಾರ್ಗದರ್ಶಿಯಾಗಿದೆ. KV ರಾಜೇಂದ್ರನ್ Vs. ಪೊಲೀಸ್ ವರಿಷ್ಠಾಧಿಕಾರಿ (2013) 12 SCC 480ರ ಕೇಸ್ ವರದಿಯ ನಿರ್ಧಾರವನ್ನು ಉಲ್ಲೇಖಿಸಿದೆ. ಇದರಲ್ಲಿ ರಾಜ್ಯ ತನಿಖಾ ಸಂಸ್ಥೆಯಿಂದ ತನಿಖೆಯನ್ನು ವರ್ಗಾಯಿಸಲು ನ್ಯಾಯಾಲಯವು ತನ್ನ ಸಾಂವಿಧಾನಿಕ ಅಧಿಕಾರವನ್ನು ಚಲಾಯಿಸಿದ ಎಂದು ತಿಳಿಸಿದೆ.
ವೈದ್ಯೆ ಸಾವಿನ ನಂತರ ದಾಖಲಾದ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಠವು, ಮೃತರು ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದರು. ಪ್ರಾಂಶುಪಾಲರು ಅಥವಾ ಆಸ್ಪತ್ರೆಯಿಂದ ಏಕೆ ದೂರು ದಾಖಲಾಗಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದೆ. ಅಲ್ಲದೆ ಅಪರಾಧದ ಸ್ಥಳವು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಗಮನಿಸಿ ಆಡಳಿತವು ಸಂತ್ರಸ್ತ ಕುಟುಂಬದೊಂದಿಎ ಇಲ್ಲ ಎಂದು ಗಮನಿಸಿರುವುದಾಗಿ ತಿಳಿಸಿದೆ.
ಈ ಪ್ರಕರಣದಲ್ಲಿ ಇಷ್ಟು ದಿನಗಳಾದರೂ ತನಿಖೆಯಲ್ಲಿ ಯಾವುದೇ ಮಹತ್ವದ ಪ್ರಗತಿ ಕಂಡುಬಂದಿಲ್ಲ. ರಿಟ್ ಅರ್ಜಿದಾರರಲ್ಲಿ, ನಿರ್ದಿಷ್ಟವಾಗಿ ಸಾಕ್ಷಿಗಳು ನಾಶವಾಗುವ ಎಲ್ಲಾ ಸಾಧ್ಯತೆಗಳಿವೆ ಎಂದು ಸಂತ್ರಸ್ತೆಯ ಪಾಲಕರು ಎತ್ತಿದ ಮನವಿಯನ್ನು ಸ್ವೀಕರಿಸಲಾಗಿದೆ. ಅಲ್ಲದೆ ಸರಿಯಾದ ತನಿಖೆ ನಡೆಯುತ್ತಿದೆ ಎಂಬ ವಿಶ್ವಾಸವನ್ನು ಸಾರ್ವಜನಿಕರಲ್ಲಿ ಮೂಡಿಸು ಅನಿವಾರ್ಯತೆ ಎದುರಾಗಿದೆ.
ಸರ್ವೋಚ್ಚ ನ್ಯಾಯಾಲಯವು ಸೂಚಿಸಿದಂತೆ, ರಾಜ್ಯ ತನಿಖಾ ಸಂಸ್ಥೆಯಿಂದ ಯಾವುದೇ ಸ್ವತಂತ್ರ ಸಂಸ್ಥೆಗೆ ತನಿಖೆಯನ್ನು ವರ್ಗಾಯಿಸುವಾಗ ನ್ಯಾಯಾಲಯವು ಗಮನಿಸಬೇಕಾದ ಅಂಶವೆಂದರೆ ನ್ಯಾಯವನ್ನು ಒದಗಿಸುವುದು ಮತ್ತು ವಿಶ್ವಾಸವನ್ನು ತುಂಬುವುದು. ಅದರ ಹೊರತಾಗಿ ನ್ಯಾಯಯುತ, ಪ್ರಾಮಾಣಿಕ ಮತ್ತು ಸಂಪೂರ್ಣ ತನಿಖೆ ಅಗತ್ಯವಾದಾಗ ನಿಷ್ಪಕ್ಷಪಾತ ಕೆಲಸದಲ್ಲಿ ಸಾರ್ವಜನಿಕರ ನಂಬಿಕೆ ಉಳಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದೆ. (ಏಜೆನ್ಸೀಸ್)
ದೋಡಾ ಎನ್ಕೌಂಟರ್; ಸೇನಾ ಕ್ಯಾಪ್ಟನ್ ಹುತಾತ್ಮ.. ನಾಲ್ವರು ಉಗ್ರರು ಹತ