

ಪಾಟ್ನಾ: ತಾಯಿಯ ಆರೋಗ್ಯ ನೋಡಿಕೊಳ್ಳಲು ಕರ್ತವ್ಯಕ್ಕೆ ಗೈರಾಗಿದ್ದ ಕಾರಣಕ್ಕಾಗಿ ಸೇವೆಯಿಂದ ವಜಾಗೊಳಿಸಿದ್ದ ಸಿಆರ್ಪಿಎಫ್ ಸಿಬ್ಬಂದಿ ಅನ್ನು ಮರುಸೇರ್ಪಡೆಗೊಳಿಸುವಂತೆ ಪಾಟ್ನಾ ಹೈಕೋರ್ಟ್ ಆದೇಶಿಸಿದೆ. ನ್ಯಾಯಮೂರ್ತಿಗಳಾದ ಪಿಬಿ ಬಜಂತ್ರಿ ಮತ್ತು ಅಲೋಕ್ ಕುಮಾರ್ ಪಾಂಡೆ ಅವರಿದ್ದ ವಿಭಾಗೀಯ ಪೀಠವು ತನ್ನ ಆದೇಶವನ್ನು ಮೂರು ತಿಂಗಳೊಳಗೆ ಜಾರಿಗೆ ತರುವಂತೆ ಸೂಚಿಸಿದೆ.
ಸಿಆರ್ಪಿಎಫ್ ಸಿಬ್ಬಂದಿ ಸುಮಿತ್ ಕುಮಾರ್ ಕ್ಯಾನ್ಸರ್ ರೋಗಿದಿಂದ ಬಳಲುತ್ತಿದ್ದ ತನ್ನ ತಾಯಿಯನ್ನು ನೋಡಿಕೊಳ್ಳಲು 196 ದಿನಗಳಿಂದ ಸೇವೆಗೆ ಗೈರಾಗಿದ್ದರು. ಈ ಕಾರಣದಿಂದಾಗಿ 2013ರಲ್ಲಿ ಉದ್ಯೋಗದಿಂದ ವಜಾಗೊಳಿಸಿದ ಬಳಿಕ ಸುಮಿತ್ ಕುಮಾರ್ ನ್ಯಾಯಾಲಯದ ಮೆಟ್ಟಿಲೇರಿದರು. ಪ್ರಸ್ತುತ ಪ್ರಕರಣದಲ್ಲಿ ಸಿಆರ್ಪಿಎಫ್ ಸಿಬ್ಬಂದಿ ತನ್ನ ತಾಯಿಗೆ ಕ್ಯಾನ್ಸರ್ ಇರುವುದು ಪತ್ತೆಯಾದ ಬಳಿಕ ಅವರ ಚಿಕಿತ್ಸೆಗಾಗಿ ರಜೆಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಸಲ್ಲಿಸಿದ್ದ ಅರ್ಜಿ ಸಲ್ಲಿಸಿದ್ದರು. ಆದರೆ 196 ದಿನಗಳಿಗೆ ಯಾವುದೇ ರಜೆ ಮಂಜೂರಾತಿ ಇಲ್ಲದ ಕಾರಣ ನಿಯಂತ್ರಣ ಮೀರಿದೆ ಎಂದು ವಿವರಣೆ ನೀಡಲಾಯಿತು.
2012 ಮೇ 23ರಿಂದ 2012 ಡಿಸೆಂಬರ್ 4 ರವರೆಗೆ ಕರ್ತವ್ಯಕ್ಕೆ ಗೈರುಹಾಜರಾದ ಕಾರಣ ಸಿಆರ್ಪಿಎಫ್ ಸಿಬ್ಬಂದಿಯನ್ನು ಪರಾರಿ ಎಂದು ಘೋಷಿಸಿ ಇಲಾಖಾ ವಿಚಾರಣೆ ಪ್ರಾರಂಭಿಸಲು ಕಾರಣವಾಯಿತು. ಇಲಾಖಾ ವಿಚಾರಣೆಯು ಸುಮಿತ್ ಕುಮಾರ್ ಅವರನ್ನು ವಜಾಗೊಳಿಸಿತು. ತಾಯಿಯ ಆರೋಗ್ಯದ ಕಾರಣದಿಂದ ರಜೆ ವಿಸ್ತರಣೆಗಾಗಿ ಸಲ್ಲಿಸಿದ ಅರ್ಜಿಯನ್ನು ಸ್ವೀಕರಿಸಿಲ್ಲ ಎಂದು ಗಮಸನಿಸಿದ ನ್ಯಾಯಾಲಯವು, ಸುಮಿತ್ ಕುಮಾರ್ ಅವರು ಅನಧಿಕೃತವಾಗಿ ಕರ್ತವ್ಯಕ್ಕೆ ಗೈರುಹಾಜರಾಗಿದ್ದಾರೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಅಪೀಲುದಾರರ ಸೇವೆಯನ್ನು ಮರುಸ್ಥಾಪಿಸಲು ಮತ್ತು ಮೇಲ್ಮನವಿದಾರರಿಗೆ ವಿತ್ತೀಯ ಪ್ರಯೋಜನಗಳನ್ನು ವಿಸ್ತರಿಸುವಂತೆ ನ್ಯಾಯಾಲಯ ಸೂಚಿಸಿದೆ. (ಏಜೆನ್ಸೀಸ್)